ETV Bharat / bharat

ಗುಂಡಿನ ದಾಳಿ.. ಉಗ್ರರನ್ನು ಹೊಡೆದುರಳಿಸಿದ ಸೇನೆ, ಇಬ್ಬರು ಯೋಧರು ಹುತಾತ್ಮ

ಹತ ಉಗ್ರರ ಬಳಿ ಇದ್ದ ಎಕೆ–47 ರೈಫಲ್‌ಗಳು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೈನಿಕರ ಶೋಧ ಕಾರ್ಯಾಚರಣೆ ಮುಂದುವರಿದಿದೆ..

two soldiers martyred, two soldiers martyred and two terrorist killed, two soldiers martyred and two terrorist killed in encounter, two soldiers martyred and two terrorist killed in encounter in sunderbani, ಇಬ್ಬರು ಪಾಕ್‌ ಉಗ್ರರ ಹತ್ಯೆ, ಇಬ್ಬರು ಪಾಕ್‌ ಉಗ್ರರ ಹತ್ಯೆ ಮತ್ತು ಇಬ್ಬರು ಯೋಧರು ಹುತಾತ್ಮ, ಎನ್​ಕೌಂಟರ್​​ನಲ್ಲಿ ಇಬ್ಬರು ಪಾಕ್‌ ಉಗ್ರರ ಹತ್ಯೆ ಮತ್ತು ಇಬ್ಬರು ಯೋಧರು ಹುತಾತ್ಮ
ಉಗ್ರರನ್ನು ಹೊಡೆದುರಳಿಸಿದ ಸೇನೆ, ಯೋಧರ ಹುತಾತ್ಮ
author img

By

Published : Jul 9, 2021, 7:19 AM IST

ಜಮ್ಮು : ಭೀಕರ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳು ಇಬ್ಬರು ಪಾಕಿಸ್ತಾನದ ಉಗ್ರರನ್ನು ಹೊಡೆದುರಳಿಸಿರುವ ಘಟನೆ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ದಾದಲ್ ಹಾಗೂ ಸುಂದರ್‌ಬನಿ ಸೆಕ್ಟರ್‌ನಲ್ಲಿ ನಡೆದಿದೆ. ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಶ್ರೀಜಿತ್‌ ಎಂ ಹಾಗೂ ಮರುಪ್ರೋಲು ಜಸ್ವಂತ್‌ ರೆಡ್ಡಿ ಎಂಬ ಯೋಧರು ಹುತಾತ್ಮರಾಗಿದ್ದಾರೆ. ‍

ಪಾಕಿಸ್ತಾನದ ಉಗ್ರರು ಗಡಿಯೊಳಗೆ ನುಸುಳುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಳೆದ 9 ದಿನಗಳಿಂದ ಶೋಧ ಕಾರ್ಯ ಕೈಗೊಂಡಿದ್ದವು. ಈ ವೇಳೆ, ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಜೊತೆಗೆ ಗ್ರೆನೇಡ್‌ಗಳನ್ನು ಎಸೆದರು. ಭದ್ರತಾ ಪಡೆಗಳು ಸಹ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಈ ಬಗ್ಗೆ ರಕ್ಷಣಾ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ. ಹತ ಉಗ್ರರ ಬಳಿ ಇದ್ದ ಎಕೆ–47 ರೈಫಲ್‌ಗಳು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೈನಿಕರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.