ಮಾಧುಪುರ್(ರಾಜಸ್ಥಾನ): ರಾಜಸ್ಥಾನದ ಅನೇಕ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ರಾಜ್ಯದ ಮಾಧುಪುರ್ನಲ್ಲಿ ತುಂಬಿ ಹರಿಯುತ್ತಿದ್ದ ಚರಂಡಿ ನೀರಿನ ಕಾಲುವೆ ದಾಟುತ್ತಿದ್ದ ವೇಳೆ ತಂದೆ-ಮಗ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕೆಲವರು ಘಟನೆಯ ವಿಡಿಯೋ ಸೆರೆ ಹಿಡಿದಿದ್ದಾರೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಚರಂಡಿ ಉಕ್ಕಿ ಹರಿಯುತ್ತಿತ್ತು. ಈ ವೇಳೆ ತಂದೆ-ಮಗ ರಸ್ತೆ ದಾಟಲು ಮುಂದಾಗಿದ್ದಾರೆ. ಆದರೆ ಕ್ಷಣಾರ್ಧದಲ್ಲಿ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.
ಈ ವೇಳೆ ಸ್ಥಳದಲ್ಲಿ ಅನೇಕರದ್ದರೂ ಯಾರೂ ರಕ್ಷಣೆ ಮಾಡುವ ಧೈರ್ಯ ಮಾಡಿಲ್ಲ. ಅದೃಷ್ಟವಶಾತ್, ಚರಂಡಿ ನೀರಿನ ಹರಿವಿನ ಜೊತೆ ತೇಲಿ ಹೋಗಿರುವ ಅವರು, ಪ್ರಾಣ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ: ಕೋರ್ಟ್ನಲ್ಲಿ ವಾದ ಮುಗಿಸಿ ಮರಳುತ್ತಿದ್ದ ವಕೀಲನ ಮೇಲೆ ದುಷ್ಕರ್ಮಿಗಳಿಂದ ಮನಬಂದಂತೆ ಹಲ್ಲೆ