ಚಂಡೀಗಢ (ಪಂಜಾಬ್): ಪಂಜಾಬ್ನ ಗುರುದಾಸಪುರ ಪ್ರದೇಶದಲ್ಲಿ ಗಡಿ ದಾಟಿ ಭಾರತದೊಳಗೆ ಪ್ರವೇಶಿಸಿದ್ದ ಇಬ್ಬರು ಪಾಕಿಸ್ತಾನದ ಪ್ರಜೆಗಳನ್ನು ಬಿಎಸ್ಎಫ್ ಯೋಧರು ಬಂಧಿಸಿದ್ದಾರೆ. ಇವರನ್ನು ರಬೀಝ್ ಮಾಸಿಹ್ ಹಾಗೂ ಕಿಶಾನ್ ಮಾಸಿಹ್ ಎಂದು ಗುರುತಿಸಲಾಗಿದೆ.
ಇಲ್ಲಿನ ದೇರಾ ಬಾಬಾ ನಾನಕ್ ಹೊರಠಾಣೆಯ ಸಮೀಪದಲ್ಲಿ ಸುಮಾರು 10 ಮೀಟರ್ ದೂರದಷ್ಟು ಭಾರತದ ಗಡಿಯೊಳಗೆ ಈ ಪಾಕ್ ನಾಗರಿಕರು ಬಂದಿದ್ದರು. ರೈತರ ಕಾವಲಿಗಿದ್ದ ಬಿಎಸ್ಎಫ್ ಸಿಬ್ಬಂದಿ ಗಮನಿಸಿ ಇಬ್ಬರನ್ನೂ ಸೆರೆ ಹಿಡಿದಿದ್ದಾರೆ ಎಂದು ಗುರುದಾಸಪುರ ಸೆಕ್ಟರ್ನ ಡಿಐಜಿ ಪ್ರಭಾಕರ್ ಜೋಷಿ ತಿಳಿಸಿದ್ದಾರೆ.
ಬಂಧಿತರಿಂದ 500 ರೂ. ನಗದು, ಎರಡು ಮೊಬೈಲ್, ಎರಡು ಗುರುತಿನ ಚೀಟಿಗಳು ಹಾಗೂ ತಂಬಾಕು ಪಾಕೆಟ್ ವಶಕ್ಕೆ ಪಡೆಯಲಾಗಿದೆ. ಆದರೆ, ಇವರು ಯಾಕೆ ಭಾರತದ ಗಡಿಯೊಳಗೆ ಪ್ರವೇಶಿಸಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಬುದ್ಗಾಮ್ ಎನ್ಕೌಂಟರ್: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ