ETV Bharat / bharat

ಪ್ರೀತಿಸಿ, ಮನೆಯಿಂದ ಓಡಿ ಹೋಗ್ತಿದ್ದ ಅಪ್ರಾಪ್ತ ಜೋಡಿಗೆ ಬಲವಂತದ ಮದುವೆ - ಅಪ್ರಾಪ್ತ ಜೋಡಿಗೆ ಬಲವಂತದ ಮದುವೆ

ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿವೊಂದು ಮನೆಯಿಂದ ಓಡಿಹೋಗುತ್ತಿದ್ದ ಸಂದರ್ಭದಲ್ಲಿ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದು, ಬಲವಂತವಾಗಿ ಮದುವೆ ಮಾಡಿಸಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

TWO MINORS
TWO MINORS
author img

By

Published : Aug 24, 2021, 4:51 PM IST

ಬಾಂಕಾ(ಬಿಹಾರ): ಪರಸ್ಪರ ಪ್ರೀತಿಸಿ, ಮನೆಯಿಂದ ಓಡಿ ಹೋಗುತ್ತಿದ್ದ ಅಪ್ರಾಪ್ತ ಜೋಡಿಗೆ ಕುಟುಂಬಸ್ಥರು ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬಿಹಾರದ ಬಾಂಕಾದಲ್ಲಿ ನಡೆದಿದೆ. ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಿಲ್ಲದಿದ್ದರೂ, ಸದ್ಯ ಗ್ರಾಮದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಮನೆಯಿಂದ ಓಡಿ ಹೋಗ್ತಿದ್ದ ಅಪ್ರಾಪ್ತ ಜೋಡಿ

ಕಳೆದ ಮೂರು ವರ್ಷಗಳಿಂದ 15 ವರ್ಷದ ಹುಡುಗಿ ಹಾಗೂ 18 ವರ್ಷದ ಅಜಿತ್​ ಕುಮಾರ್​​ ಪರಸ್ಪರ ಪ್ರೀತಿಸುತ್ತಿದ್ದರಂತೆ. ಮದುವೆ ಮಾಡಿಕೊಳ್ಳುವ ಉದ್ದೇಶವಿಟ್ಟುಕೊಂಡಿದ್ದರು. ಹೀಗಾಗಿ ಯುವತಿಯ ಮನೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. ಹುಡುಗ ನಿರುದ್ಯೋಗಿಯಾಗಿದ್ದು, ಇದರ ಜೊತೆಗೆ ಕೆಳ ಮಟ್ಟದ ಜಾತಿಗೆ ಸೇರಿದವನಾಗಿದ್ದರಿಂದ ಮಗಳನ್ನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ, ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಾರೆ. ಆದರೆ, ಅಜಿತ್ ಮಾತ್ರ ತನ್ನ ಗೆಳತಿ ಬೇರೆಯವರೊಂದಿಗೆ ಮದುವೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂಬ ನಿರ್ಧಾರ ಮಾಡಿ, ಸ್ನೇಹಿತರೊಂದಿಗೆ ಚರ್ಚಿಸಿ, ಓಡಿ ಹೋಗಲು ಮುಂದಾಗಿದ್ದಾರೆ.

ಅದರಂತೆ ಕಳೆದ ಶನಿವಾರ ಸಂಜೆ, ಅಜಿತ್​ ತನ್ನ ಕೆಲವು ಸ್ನೇಹಿತರೊಂದಿಗೆ ಮೋಟಾರ್​ ಸೈಕಲ್​ನಲ್ಲಿ ಹುಡುಗಿಯನ್ನ ಕರೆದುಕೊಂಡು ಮನೆ ಬಿಡಲು ನಿರ್ಧರಿಸಿದ್ದಾನೆ. ಮೋಟಾರ್​ ಸೈಕಲ್​ ಮೇಲೆ ಕುಳಿತುಕೊಂಡು ತೆರಳುತ್ತಿದ್ದ ವೇಳೆ ಹುಡುಗಿಯ ಚಿಕ್ಕಪ್ಪನ ಕಣ್ಣಿಗೆ ಇವರು ಬಿದ್ದಿದ್ದಾರೆ. ಈ ವೇಳೆ, ಆತನ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಹೀಗಾಗಿ ಜೋಡಿ ಚಿಕ್ಕಪ್ಪನ ಕೈಯಲ್ಲಿ ಸಿಕ್ಕಿಬಿದ್ದಿದೆ.

TWO MINORS
ಅಪ್ರಾಪ್ತ ಜೋಡಿಗೆ ಬಲವಂತದ ಮದುವೆ

ಇದನ್ನೂ ಓದಿರಿ: SUICIDE: ನಾನು ಕೆಟ್ಟ ಮಗಳು, ಮಿಸ್​​ ಯೂ ಡ್ಯಾಡಿ, ಮಮ್ಮಿ!

ತಕ್ಷಣವೇ ಪಂಚಾಯಿತಿ​ ಸೇರಿಸಿ, ಅಲ್ಲಿ ಚರ್ಚೆ ನಡೆಸಿದ ಬಳಿಕ ಗ್ರಾಮಸ್ಥರು ಇವರಿಬ್ಬರ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾರೆ. ಜತೆಗೆ ಗ್ರಾಮದ ಹನುಮಾನ್​ ದೇವಸ್ಥಾನದಲ್ಲಿ ಮದುವೆ ಸಹ ಮಾಡಿಸಿದ್ದಾರೆ. ಹುಡುಗನ ವಯಸ್ಸು 18 ಆಗಿದ್ದು, ಹುಡುಗಿ 15 ವರ್ಷದವಳಾಗಿದ್ದು, ಅಪ್ರಾಪ್ತಳು ಎಂದು ಹೇಳಲಾಗುತ್ತಿದೆ. ಇದೇ ವಿಚಾರ ಗ್ರಾಮದಲ್ಲಿ ಇದೀಗ ಚರ್ಚೆಯಾಗುತ್ತಿದೆ. ಇದರ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಎಂದು ಪೊಲೀಸ್​​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.