ETV Bharat / bharat

ಪ್ರೀತಿ ಹೆಸರಲ್ಲಿ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ.. ಯುವಕರಿಬ್ಬರ ಬಂಧನ

author img

By

Published : Jun 9, 2022, 1:57 PM IST

ಇಬ್ಬರು ಯುವಕರು ಎರಡು ವರ್ಷಗಳ ಕಾಲ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

Minor girls were raped in Hyderabad, Telangana rape case, Sisters love story in Hyderabad, Youths arrested in rape case at Hyderbad, ಹೈದರಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ತೆಲಂಗಾಣ ಅತ್ಯಾಚಾರ ಪ್ರಕರಣ, ಹೈದರಾಬಾದ್‌ನಲ್ಲಿ ಸಹೋದರಿಯರ ಪ್ರೇಮಕಥೆ, ಹೈದರಾಬಾದ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಯುವಕರ ಬಂಧನ,
ಪ್ರೀತಿ ಹೆಸರಲ್ಲಿ 2 ವರ್ಷಗಳಿಂದ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ

ಹೈದರಾಬಾದ್: ಅಪ್ರಾಪ್ತ ವಯಸ್ಸಿನ ಸಹೋದರಿಯರ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿದ ಆರೋಪದಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ್ನು ಅಂಬರ್‌ಪೇಟೆಯ ಇಂತಿಯಾಜ್ (21) ಮತ್ತು ನವಾಜ್ (21) ಎಂದು ಗುರುತಿಸಲಾಗಿದೆ.

ಚಿಲಕಲುಗುಡ ಪೊಲೀಸರ ಪ್ರಕಾರ, ನವಾಜ್​ ಮತ್ತು ಇಂತಿಯಾಜ್​ ಆ ಅಪ್ರಾಪ್ತ ಸಹೋದರಿಯರನ್ನು ಫೇಸ್‌ಬುಕ್‌ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಮೊದಮೊದಲು ಗೆಳೆಯರಾಗಿದ್ದವರು ಕ್ರಮೇಣ ಇವರ ಸ್ನೇಹ ಪ್ರೀತಿಗೆ ತಿರುಗಿದೆ. ಅವರ ನಡುವೆ ಆತ್ಮೀಯತೆ ಹೆಚ್ಚಾಗಿದ್ದು, ದೈಹಿಕ ಸಂಪರ್ಕದವರಿಗೂ ಮುಂದುವರಿದಿದೆ.

ಓದಿ: ಜುಬಿಲಿ ಹಿಲ್ಸ್‌ ಅತ್ಯಾಚಾರ ಪ್ರಕರಣ: ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಪೊಲೀಸರು!

ಬಾಲಕಿಯರ ಪ್ರೀತಿಯ ವಿಷಯ ಪೋಷಕರಿಗೆ ತಿಳಿದಿದೆ. ಬಳಿಕ ಪೋಷಕರು ತಮ್ಮ ಮಕ್ಕಳ ವಿಷಯಕ್ಕೆ ಬರದಂತೆ ಯುವಕರಿಗೆ ಹಲವು ಬಾರಿ ಎಚ್ಚರಿಕೆ ಸಹ ನೀಡಿದ್ದರು. ಆದ್ರೂ ಯುವಕರು ಬಾಲಕಿಯರ ಪೋಷಕರ ಮಾತಿಗೆ ಕಿವಿಗೊಡದೆ ತಮ್ಮ ಪ್ರೀತಿಯ ಆಟ ಮುಂದುವರಿಸಿದ್ದಾರೆ. ಹೀಗಾಗಿ ಬಾಲಕಿಯರ ಪೋಷಕರು ಯುವಕರಿಬ್ಬರ ವಿರುದ್ಧ ದೂರು ದಾಖಲಿಸಿದ್ದರು.

ನನ್ನ ಅಪ್ರಾಪ್ತ ಇಬ್ಬರು ಹೆಣ್ಮಕ್ಕಳ ಮೇಲೆ ಇಂತಿಯಾಜ್​ ಮತ್ತು ನವಾಜ್​ ಕಳೆದ ಎರಡು ವರ್ಷಗಳಿಂದ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆಯರ ಪೋಷಕರು ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಚಿಲಕಲುಗುಡ ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.