ETV Bharat / bharat

ಇಲ್ಲಿನ ಸರ್ಕಾರದಲ್ಲಿ ಮತ್ತೆ ಭಿನ್ನಮತ ಸ್ಫೋಟ: ಸಂಪುಟ ಸಭೆಯಲ್ಲೇ ಸಚಿವರ ಮಧ್ಯೆ ವಾಗ್ವಾದ..! - ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸರ

10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಸುವುದನ್ನು ನಿರ್ಧರಿಸುವ ಸಲುವಾಗಿ ಇಂದು ಸಿಎಂ ಅಶೋಕ್​ ಗೆಹ್ಲೋಟ್ ಸಭೆ ಕರೆದಿದ್ದರು. ಈ ಸಮಯದಲ್ಲಿ ವ್ಯಾಕ್ಸಿನೇಷನ್​ ವಿಚಾರ ಕೂಡ ಚರ್ಚಿಸಿಲಾಯಿತು.

ಸಚಿವರ ಮಧ್ಯೆ ವಾಗ್ವಾದ
ಸಚಿವರ ಮಧ್ಯೆ ವಾಗ್ವಾದ
author img

By

Published : Jun 3, 2021, 4:01 PM IST

ಜೈಪುರ: ರಾಜಸ್ಥಾನ ಸರ್ಕಾರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮಂತ್ರಿಗಳ ವಾಕ್ಸಮರ ಮುಂದುವರಿದಿದೆ. ಸಿಎಂ ಅಶೋಕ್​ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸರ ಮತ್ತು ನಗರಾಭಿವೃದ್ಧಿ ಸಚಿವ ಶಾಂತಿ ಧಾರಿವಾಲ್ ನಡುವೆ ಪರಸ್ಪರ ವಾಗ್ಯುದ್ಧ ನಡೆದಿದೆ.

10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಸುವುದನ್ನು ನಿರ್ಧರಿಸುವ ಸಲುವಾಗಿ ಇಂದು ಸಿಎಂ ಅಶೋಕ್​ ಗೆಹ್ಲೋಟ್ ಸಭೆ ಕರೆದಿದ್ದರು. ಈ ಸಮಯದಲ್ಲಿ ವ್ಯಾಕ್ಸಿನೇಷನ್​ ವಿಚಾರ ಕೂಡ ಚರ್ಚಿಸಿಲಾಯಿತು. ದೋಟಸರಾ ಕಾಂಗ್ರೆಸ್​​ ಸಾಮಾಜಿಕ ಮಾಧ್ಯಮ ಅಭಿಯಾನ ಪ್ರಾರಂಭಿಸಿದೆ ಎಂದು ತಿಳಿಸಿದರು. ಉಚಿತ ವ್ಯಾಕ್ಸಿನೇಷನ್ ಪಡೆಯಲು, ಜಿಲ್ಲಾ ಮಟ್ಟದಲ್ಲಿ ಸಂಗ್ರಾಹಕರಿಗೆ ಜ್ಞಾಪಕ ಪತ್ರ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.

ಕೂಡಲೇ ಮಧ್ಯಪ್ರವೇಶಿದ ಧಾರಿವಾಲ್, ಜ್ಞಾಪಕ ಪತ್ರ ನೀಡುವ ಅವಶ್ಯಕತೆ ಏನು, ಮಂತ್ರಿಗಳ ಕೆಲಸವು ಜ್ಞಾಪಕ ಪತ್ರವನ್ನು ನೀಡುವುದೇ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ಮಧ್ಯಪ್ರವೇಶಿಸಿದ ಇತರ ಸಚಿವರು, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.

ಪಕ್ಷದ ಅಧ್ಯಕ್ಷರಿಗೆ ಮಾತನಾಡಲು ಅವಕಾಶ ನೀಡದೇ, ಸಭೆಯಿಂದ ಹೊರಹೋದ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೋಟಾಸರಾ ಅವರು ಸಿಎಂಗೆ ಒತ್ತಾಯಿಸಿದರು. ಆ ವೇಳೆ ಸಿಎಂ ಗೆಹ್ಲೋಟ್​, ಅವರನ್ನು ಸಮಾಧಾನ ಪಡಿಸಿ ಭಾಷಣ ಪೂರ್ಣಗೊಳಿಸಲು ಹೇಳಿದರು.

ಇದನ್ನೂ ಓದಿ: ಬಾಬಾ ರಾಮ್​ದೇವ್​ಗೆ ಸಮನ್ಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್..!

ಗೆಹ್ಲೋಟ್, ಇಬ್ಬರನ್ನೂ ಸುಮ್ಮನಿರುವುಂತೆ ಕೇಳಿಕೊಂಡರು. ಆದರೆ ಧಾರಿವಾಲ್, ಇಂಥ ಅನೇಕ ಅಧ್ಯಕ್ಷರನ್ನು ನೋಡಿದ್ದೇನೆ ಎಂದು ಕುಹುಕವಾಡಿದರು. ಮತ್ತೆ ಜಗಳ ಭುಗಿಲೆದ್ದಿತು. ಈ ಹಿನ್ನೆಲೆ, ಸಿಎಂ ಕ್ಯಾಮೆರಾ ಆಫ್ ಮಾಡಿ, ಇಬ್ಬರ ಮನವೊಲಿಸುವ ಯತ್ನ ಮಾಡಿದರು.

ನಿಮ್ಮ ಈ ವರ್ತನೆ ಸರಿಯಲ್ಲ, ನಾನು ಹೈಕಮಾಂಡ್​ಗೆ ವರದಿ ಮಾಡುತ್ತೇನೆ ಎಂದು ದೋಟಾಸರ ಗುಡುಗಿದಾಗ, ನನಗೆ ಬೆದರಿಕೆ ಹಾಕ್ತೀರಾ ಎಂದು ಧಾರಿವಾಲ್​ ಪ್ರಶ್ನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.