ETV Bharat / bharat

ಎಲ್‌ಇಟಿ ಮುಖ್ಯ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಹತ್ಯೆಗೈದ ಸೇನೆ - ಎಲ್‌ಇಟಿ

ಕಣಿವೆ ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಪಾಕಿಸ್ತಾನ ಮೂಲದ ಉಗ್ರ ಮತ್ತು ಲಷ್ಕರ್‌-ಇ-ತೊಯ್ಬಾ ಎಲ್‌ಇಟಿಯ ಮುಖ್ಯ ಕಮಾಂಡರ್‌ ಅಬ್ರರ್‌ ಸೇರಿ ಇಬ್ಬರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎನ್‌ಕೌಂಟರ್‌ ವೇಳೆ ಮೂವರು ಸಿಆರ್‌ಪಿಎಫ್‌ ಯೋಧರು ಗಾಯಗೊಂಡಿದ್ದಾರೆ.

Two militants killed in Maloora encounter
ಭರ್ಜರಿ ಬೇಟೆ; ಎಲ್‌ಇಟಿ ಅಗ್ರ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಹತ್ಯೆ
author img

By

Published : Jun 29, 2021, 7:59 AM IST

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಹಾಗೂ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ಮೂಲದ ಉಗ್ರ ಮತ್ತು ಲಷ್ಕರ್‌-ಇ-ತೊಯ್ಬಾ ಎಲ್‌ಇಟಿ ಮುಖ್ಯ ಕಮಾಂಡರ್‌ ಅಬ್ರರ್‌ನನ್ನು ಶ್ರೀನಗರದ ಮಲೂರಾ ಪರಿಂಪೋರಾದಲ್ಲಿ ಹತ್ಯೆ ಮಾಡಲಾಗಿದೆ.

ಹೆದ್ದಾರಿಯಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಬಗ್ಗೆ ನಿರ್ದಿಷ್ಟ ಮಾಹಿತಿ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಯೋಧರು ಹೆದ್ದಾರಿ ಉದ್ದಕ್ಕೂ ನಾಕಾಬಂಧಿ ಹಾಕಿ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ವಾಹನದಲ್ಲಿ ಬಂದಿದ್ದ ಇಬ್ಬರನ್ನು ತಪಾಸಣೆ ನಡೆಸುತ್ತಿದ್ದಾಗ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ವ್ಯಕ್ತಿ ತನ್ನ ಬ್ಯಾಗ್‌ನಲ್ಲಿದ್ದ ಗ್ರೆನೇಡ್‌ ಎಸೆಯಲು ಯತ್ನಿಸಿದ್ದಾರೆ. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ಠಾಣೆ ಕರೆತಂದು ವಿಚಾರಣೆ ನಡೆಸಿದಾಗ ಆತ ಲಷ್ಕರ್‌-ಇ-ತೊಯ್ಬಾ ಎಲ್‌ಇಟಿ ಅಗ್ರ ಕಮಾಂಡರ್‌ ಅಬ್ರರ್‌ ಎಂಬುದು ಗೊತ್ತಾಗಿದೆ.

ಮನೆಯೊಂದರಲ್ಲಿ ಸ್ಫೋಟಕಗಳನ್ನು ಬಚ್ಚಿಟ್ಟಿದ್ದ ಮಾಹಿತಿ ಮೇರೆಗೆ ಪರಿಶೀಲನೆಗೆಂದು ಕರೆತಂದಾಗ, ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಅಬ್ರರ್‌ ಜೊತೆಗಿದ್ದ ಉಗ್ರ ಭದ್ರತಾ ಪಡೆಗಳತ್ತ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಯೋಧರು ನಡೆಸಿದ ಮರುದಾಳಿಯಲ್ಲಿ ಇಬ್ಬರು ಹತರಾಗಿದ್ದಾರೆ. ಸ್ಥಳದಲ್ಲಿದ್ದ 2 ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎನ್‌ಕೌಂಟರ್‌ ವೇಳೆ ಮೂವರು ಸಿಆರ್‌ಪಿಎಫ್‌ ಯೋಧರು ಗಾಯಗೊಂಡಿದ್ದಾರೆ. ಹತ್ಯೆಯಾದ ಅಬ್ರರ್‌ ಇತರೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ಐಜಿಪಿ ಕಾಶ್ಮೀರ್‌ ವಿಜಯ್‌ ಕುಮಾರ್‌ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.