ETV Bharat / bharat

ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ, ಐಷಾರಾಮಿ ಜೀವನ.. ಇಬ್ಬರು ಖದೀಮರು ಅಂದರ್​ - ಮುಂಬೈನ ರಾನುಜಾ ಜ್ಯುವೆಲ್ಲರ್ಸ್

ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಕಳ್ಳತನ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಖದೀಮರ ಹೆಡೆಮುರಿ ಕಟ್ಟಿದ ಪೊಲೀಸ್
ಇಬ್ಬರು ಖದೀಮರ ಹೆಡೆಮುರಿ ಕಟ್ಟಿದ ಪೊಲೀಸ್
author img

By

Published : Sep 4, 2021, 6:57 AM IST

ಹೈದರಾಬಾದ್ (ತೆಲಂಗಾಣ): ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರನ್ನು ಪಂಜಾಗುಟ್ಟ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗುಲಾಬ್ ಮಾಲಿ ಹಾಗೂ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಅಂದಾಜು 1 ಕೋಟಿ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳಿಬ್ಬರು ಕಳೆದ 10 ವರ್ಷಗಳಿಂದ ಮುಂಬೈನ ರಾನುಜಾ ಜ್ಯುವೆಲ್ಲರ್ಸ್​​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಗುಲಾಬ್​​ ತನ್ನ ಮಾಲೀಕನಿಂದ ಆಭರಣಗಳನ್ನು ಪಡೆದು ಹೈದರಾಬಾದಿನ ವಿವಿಧ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ. ಆದರೆ, ಆ ವಹಿವಾಟಿನಲ್ಲಿ ನಿರೀಕ್ಷೆಗೆ ತಕ್ಕಷ್ಟು ಲಾಭ ಸಿಗಲಿಲ್ಲವಾದ್ದರಿಂದ ಪ್ರವೀಣ್ ಜತೆ ಸೇರಿ ಕಳ್ಳತನಕ್ಕಿಳಿದಿದ್ದ ಎಂದು ಹೇಳಿದ್ದಾರೆ.

ಬಳಿಕ ಇವರಿಬ್ಬರು, ತಾವು ಕೆಲಸ ಮಾಡುತ್ತಿದ್ದ ಅಂಗಡಿಗಳಲ್ಲಿಯೇ ಕಳ್ಳತನ ಮಾಡಿ, ಮುಂಬೈನಿಂದ ಹೈದರಾಬಾದ್​ಗೆ ಬಂದರು. ಕದ್ದ ಆಭರಣದಲ್ಲಿ 69.150 ಗ್ರಾಂ ಚಿನ್ನವನ್ನು 2 ಲಕ್ಷ ರೂ.ಗೆ ಅಡವಿಟ್ಟು, ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಕೋರ್ಟ್​ ವೆಚ್ಚ ನಿಭಾಯಿಸಲು ಬೈಕ್​ ಕಳ್ಳತನಕ್ಕೆ ಇಳಿದ ಅತ್ಯಾಚಾರ, ಕೊಲೆ ಆರೋಪಿಗಳ ಬಂಧನ

ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಿಸಿದ್ದು, ಇಂದು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರವಣ್ ಕುಮಾರ್ ಗೆಹ್ಲೋಟ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.