ಮಥುರಾ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮಹವನ್ ತಹಸಿಲ್‌ನ ನ್ಯಾಯಾಲಯದ ಬಳಿ ಇಬ್ಬರು ವಕೀಲರು ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮಹಾವನ್ ತಹಸಿಲ್‌ನ ಹಲ್ಲೆಗೊಳಗಾದ ಮನೋಜ್ ಯಾವುದೋ ಕೆಲಸದ ನಿಮಿತ್ತ ನ್ಯಾಯಾಲಯಕ್ಕೆ ಬಂದಿದ್ದರು. ಮನೋಜ್ ಕೆಲವು ವಿಚಾರದಲ್ಲಿ ಈ ವಕೀಲರೊಂದಿಗೆ ವಾಗ್ವಾದ ನಡೆಸಿದ್ದನು. ಹೀಗಾಗಿ ಆ ವಕೀಲರು ಆತನನ್ನು ಥಳಿಸಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಡಿಯೋದಲ್ಲಿ ವ್ಯಕ್ತಿ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ, ಆದರೆ ಇಬ್ಬರು ವಕೀಲರು ಆತನ ಕೊರಳಪಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಆತನ್ನನು ರಕ್ಷಿಸಲು ಪ್ರಯತ್ನಿಸಿದರು. ಆದರೂ ವಕೀಲರು ಪೊಲೀಸರ ಮಾತಿಗು ಕಿವಿಗೊಡದೇ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಇದುವರೆಗೂ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ;ವೃದ್ಧೆ ಅತ್ಯಾಚಾರ ಮಾಡಿ, ಹಣ ದೊಚಿದ್ದ ಆರೋಪಿಗೆ ಕಠಿಣ ಶಿಕ್ಷೆ..