ETV Bharat / bharat

ಅಮೋನಿಯ ಅನಿಲ ಸೋರಿಕೆಯಿಂದ ಗ್ಯಾಸ್​ ಸಿಲಿಂಡರ್​ ಸ್ಫೋಟ: ಇಬ್ಬರು ಸಾವು, ನಾಲ್ವರಿಗೆ ಗಾಯ - ಲಖನೌ ಕ್ರೈಮ್​ ಲೇಟೆಸ್ಟ್ ನ್ಯೂಸ್

ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಅಮೋನಿಯ ಅನಿಲ ಸೋರಿಕೆಯಿಂದ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಮೋನಿಯ ಅನಿಲ ಸೋರಿಕೆಯಿಂದ ಗ್ಯಾಸ್​ ಸಿಲಿಂಡರ್​ ಸ್ಫೋಟ
Two Labour Died In Massive Blast By Ammonia Leak In Cold Storage In Lucknow
author img

By

Published : Mar 7, 2021, 11:18 AM IST

ಲಖನೌ (ಉತ್ತರ ಪ್ರದೇಶ) : ಅಮೋನಿಯ ಅನಿಲ ಸೋರಿಕೆಯಿಂದ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯುಪಿ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ಧರ್ಮೇಂದ್ರ (28) ಮತ್ತು ಮಿಶ್ರಿಲಾಲ್ (30) ಸಾವನ್ನಪ್ಪಿದ ಕಾರ್ಮಿಕರು. ಇವರು ಸೀತಾಪುರದ ನಿವಾಸಿಗಳಾಗಿದ್ದಾರೆ.

ಇಲ್ಲಿನ ಇಟೌಂಜಾ ಪ್ರದೇಶದಲ್ಲಿರುವ ಬಿಂದೇಶ್ವರಿ ಕೋಲ್ಡ್ ಸ್ಟೋರೇಜ್‌ನಲ್ಲಿ ಅಮೋನಿಯಂ ಅನಿಲದ ಪೈಪ್‌ನಲ್ಲಿ ಸೋರಿಕೆ ಉಂಟಾಗಿ ಸಿಲಿಂಡರ್​ ಗ್ಯಾಸ್​ ಸ್ಫೋಟಗೊಂಡಿದೆ. ಪರಿಣಾಮ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಓದಿ: ಮುತ್ತೂಟ್ ಗ್ರೂಪ್ ಅಧ್ಯಕ್ಷನ ಡೆತ್​ ಕೇಸ್​ .. ತನಿಖೆ ಚುರುಕುಗೊಳಿಸಿದ ಪೊಲೀಸರು

ಘಟನೆ ಸಂಬಂಧ ಶಾಸಕ ಅವಿನಾಶ್ ತ್ರಿವೇದಿಯವರು ಸಂತಾಸ ಸೂಚಿಸಿದ್ದು, ಸಂತ್ರಸ್ತ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ಎಲ್ಲಾ ರೀತಿ ನೆರವು ನೀಡಲಿದ್ದು, ಗಾಯಾಳುಗಳಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.