ETV Bharat / bharat

ರೈತರ ಪ್ರತಿಭಟನೆ: ಸಿಂಘು ಗಡಿಯಲ್ಲಿ ಕರ್ತವ್ಯನಿರತ ಇಬ್ಬರು ಐಪಿಎಸ್​ ಅಧಿಕಾರಿಗಳಿಗೆ ಕೊರೊನಾ! - ಡಿಸಿಪಿ ಮತ್ತು ಹೆಚ್ಚುವರಿ ಡಿಸಿಪಿಗೆ ಕೊರೊನಾ ಸೋಂಕು

ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಿಂಘು ಗಡಿಯಲ್ಲಿ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಇದೇ ವೇಳೆ ಇಲ್ಲಿನ ಪೊಲೀಸ್ ಪಡೆಗಳನ್ನು ಮುನ್ನಡೆಸುತ್ತಿದ್ದ ಡಿಸಿಪಿ ಮತ್ತು ಹೆಚ್ಚುವರಿ ಡಿಸಿಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Two IPS officers, who were leading police force at Singhu border
ಐಪಿಎಸ್​ ಅಧಿಕಾರಿಗಳಿಗೆ ಕೊರೊನಾ
author img

By

Published : Dec 11, 2020, 8:36 AM IST

ನವದೆಹಲಿ: ಕೇಂದ್ರದ ನೂತನ ಮೂರು ಕೃಷಿ ಕಾನೂನುಗಳ ವಿರುದ್ಧ ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಸಿಂಘು ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸರಲ್ಲಿ ಕೋವಿಡ್​- 19 ಸೋಂಕು ಪತ್ತೆಯಾಗಿದೆ.

ಸಿಂಘು ಗಡಿಯಲ್ಲಿ ಪೊಲೀಸ್ ಪಡೆಗಳನ್ನು ಮುನ್ನಡೆಸುತ್ತಿದ್ದ ಐಪಿಎಸ್ ಅಧಿಕಾರಿಗಳಾದ ಡಿಸಿಪಿ ಮತ್ತು ಹೆಚ್ಚುವರಿ ಡಿಸಿಪಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕೇರಳಕ್ಕೆ ಮತ್ತೊಂದು ಆತಂಕ: ಹೊಸ ಮಲೇರಿಯಾ ರೋಗಾಣು ಪತ್ತೆ

ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ 'ದೆಹಲಿ ಚಲೋ' ಚಳವಳಿ 16 ನೇ ದಿನಕ್ಕೆ ಕಾಲಿಟ್ಟಿದೆ. ರೈತರು ಇನ್ನೂ ಸಿಂಘು ಗಡಿ ಬಿಟ್ಟು ಕದಲುತ್ತಿಲ್ಲ. ರೈತ ಮುಖಂಡರೊಂದಿಗೆ ಕೇಂದ್ರ ಸಚಿವರು ನಡೆಸಿದ ಮಾತುಕತೆ ವಿಫಲವಾಗಿದೆ. ದಿನದಿಂದ ದಿನಕ್ಕೇ ರೈತರ ಪ್ರತಿಭಟನಾ ಕಾವು ಹೆಚ್ಚುತ್ತಲೇ ಇದೆ. ಕೇಂದ್ರ ತನ್ನ ಹೊಸ ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.