ಇಂದೋರ್(ಮಧ್ಯಪ್ರದೇಶ): ಆಟೋ ರಿಕ್ಷಾ ಡ್ರೈವರ್ನೋರ್ವ ಮಾಸ್ಕ್ ಹಾಕಿಲ್ಲ ಎಂದು ನಡು ರೋಡ್ನಲ್ಲೇ ಪೊಲೀಸರಿಬ್ಬರು ಥಳಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಪೊಲೀಸ್ ಅಧಿಕಾರಿಗಳಿಬ್ಬರು ಅಮಾನತುಗೊಂಡಿದ್ದಾರೆ. 35 ವರ್ಷದ ಆಟೋ ರಿಕ್ಷಾ ಡ್ರೈವರ್ ಕೃಷ್ಣ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಂದೆಗೆ ಊಟ ತೆಗೆದುಕೊಂಡು ಹೋಗುತ್ತಿದ್ದ. ಈ ವೇಳೆ, ಆತ ಹಾಕಿಕೊಂಡಿದ್ದ ಮಾಸ್ಕ್ ಕೆಳಗೆ ಬಿದ್ದಿದೆ. ಆತನ ತಡೆ ಹಿಡಿದ ಪೊಲೀಸರು ಠಾಣೆಗೆ ಬಂದು ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಡ್ರೈವರ್ ನಂತರ ಬರುವುದಾಗಿ ಹೇಳಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಉದ್ಯಮಿ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು.. ಹೊತ್ತಿ ಉರಿದ ಕೂಚ್ ಬೆಹಾರ್!
ಈತನ ಮೇಲೆ ಕೆಲವೊಂದು ಪ್ರಕರಣಗಳೂ ಕೂಡಾ ದಾಖಲಾಗಿವೆ. ಆದರೆ, ಈಗಾಗಲೇ ಆತ ಜಾಮೀನು ಮೇಲೆ ರಿಲೀಸ್ ಆಗಿದ್ದಾನೆ. ಆದರೆ, ಈತನ ಮೇಲೆ ಹಲ್ಲೆ ನಡೆಸಿರುವ ಇಬ್ಬರು ಪೊಲೀಸರನ್ನ ಅಮಾನತುಗೊಳಿಸಲಾಗಿದೆ. ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಮಧ್ಯಪ್ರದೇಶದ ಇಂದೋರ್ನಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.