ETV Bharat / bharat

Goods Trains collided: ಪಶ್ಚಿಮ ಬಂಗಾಳದಲ್ಲಿ ಗೂಡ್ಸ್​ ರೈಲುಗಳು ಡಿಕ್ಕಿ, ಬೋಗಿಗಳು ಚೆಲ್ಲಾಪಿಲ್ಲಿ - Goods Trains collided

ಒಡಿಶಾ ರೈಲು ದುರಂತ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಪಕ್ಕದ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಗೂಡ್ಸ್ ರೈಲುಗಳು ಅಪಘಾತಕ್ಕೀಡಾಗಿವೆ.

ಪಶ್ಚಿಮಬಂಗಾಳದಲ್ಲಿ ಗೂಡ್ಸ್​ ರೈಲುಗಳು ಡಿಕ್ಕಿ,

author img

By

Published : Jun 25, 2023, 8:35 AM IST

Updated : Jun 25, 2023, 10:07 AM IST

ಪಶ್ಚಿಮ ಬಂಗಾಳ: ಒಡಿಶಾ ತ್ರಿವಳಿ ರೈಲು ದುರಂತ ಕಹಿ ನೆನಪು ಮಾಸುವ ಮುನ್ನವೇ ಪಶ್ಚಿಮಬಂಗಾಳದಲ್ಲಿ ಗೂಡ್ಸ್​ ರೈಲುಗಳೆರಡು ಡಿಕ್ಕಿಯಾದ ಘಟನೆ ಇಂದು ಮುಂಜಾವು 4 ಗಂಟೆಗೆ ನಡೆದಿದೆ. ಬಂಕುರಾದ ಓಂಡಾ ರೈಲು ನಿಲ್ದಾಣದಲ್ಲಿ ಎರಡು ಸರಕು ಸಾಗಣೆ ರೈಲುಗಳು ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಗೂಡ್ಸ್ ರೈಲಿನ 12 ಬೋಗಿಗಳು ಹಳಿತಪ್ಪಿವೆ. ಇದರಿಂದ ಖರಗ್‌ಪುರ-ಬಂಕುರಾ-ಆದ್ರಾ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಓಂಡಾ ನಿಲ್ದಾಣದ ಮೂಲಕ ಮೊದಲ ಗೂಡ್ಸ್ ರೈಲು ಹಾದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಮತ್ತೊಂದು ಗೂಡ್ಸ್ ರೈಲು ರಭಸವಾಗಿ ಡಿಕ್ಕಿ ಹೊಡೆದಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಈ ಅಪಘಾತದಲ್ಲಿ ಗೂಡ್ಸ್ ರೈಲುಗಳ 12 ಬೋಗಿಗಳು ಹಳಿತಪ್ಪಿವೆ. ಗೂಡ್ಸ್ ರೈಲು ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಡಿಕ್ಕಿ ವೇಳೆ ದೊಡ್ಡ ಸದ್ದು ಕೇಳಿ ಬಂದಿದ್ದು, ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

  • #WATCH | West Bengal: Two goods trains collided at Onda railway station in Bankura. Rail operation on Kharagpur–Bankura–Adra line has been halted. More details awaited. pic.twitter.com/T4sL5rn7Rp

    — ANI (@ANI) June 25, 2023 " class="align-text-top noRightClick twitterSection" data=" ">

ರೈಲ್ವೇ ಮೂಲಗಳ ಮಾಹಿತಿಯ ಪ್ರಕಾರ, ಎರಡೂ ಗೂಡ್ಸ್ ರೈಲುಗಳು ಖಾಲಿಯಾಗಿದ್ದವು. ಆದರೆ, ಅದ್ಹೇಗೆ ಅಪಘಾತ ಸಂಭವಿಸಿತು ಎಂಬುದು ತಿಳಿಯುತ್ತಿಲ್ಲ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ರೈಲುಗಳು ಗುದ್ದಿಕೊಂಡ ಕಾರಣ ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಮಾರ್ಗ ಬಂದ್​ ಆಗಿದೆ. ಸಿಬ್ಬಂದಿ ಆದಷ್ಟು ಬೇಗ ಈ ಮಾರ್ಗವನ್ನು ತೆರವು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾ ಭೀಕರ ದುರಂತದ ಕಹಿ ಘಟನೆ: ಜೂನ್​ 2ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬಾಲಸೋರ್​ ಜಿಲ್ಲೆಯ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿತ್ತು. ಇದರಿಂದ ಇನ್ನೊಂದು ಲೈನ್​ನಲ್ಲಿ ನಿಂತಿದ್ದ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ಗೂಡ್ಸ್​ ಮತ್ತು ಕೋರಮಂಡಲ್​ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬೆಂಗಳೂರಿನ ಯಶವಂತಪುರದಿಂದ ಬಂದಿದ್ದು, ಹೌರಾ ಎಕ್ಸ್​ಪ್ರೆಸ್​ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಭೀಕರತೆ ಉಂಟಾಗಿತ್ತು. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 275 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಎಲೆಕ್ಟ್ರಾನಿಕ್​ ಇಂಟರ್​ಲಾಕಿಂಗ್​ ಸಿಸ್ಟಮ್ ಸಮಸ್ಯೆಯಿಂದ ರೈಲು ದುರಂತ ಸಂಭವಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು. ದುರಂತದ ಬಗ್ಗೆ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಸಿಬಿಐ ತಂಡ ಹಲವು ರೈಲ್ವೆ ಸಿಬ್ಬಂದಿ, ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ತ್ರಿವಳಿ ರೈಲು ಅಪಘಾತದಿಂದ ಹಾನಿಗೊಳಗಾದ ಹಳಿಗಳನ್ನು ಅಪಘಾತ ಸಂಭವಿಸಿದ 51 ಗಂಟೆಗಳಲ್ಲಿ ಮರುಜೋಡಣೆ ಮಾಡಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಇದನ್ನೂ ಓದಿ: ರೈಲು ದುರಂತದಲ್ಲಿ ಮೃತರ ಸಂಖ್ಯೆ 288 ಅಲ್ಲ, 275.. ಗಾಯಗೊಂಡವರು 1,175 ಮಂದಿ: ಒಡಿಶಾ ಸರ್ಕಾರ

Last Updated : Jun 25, 2023, 10:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.