ETV Bharat / bharat

ಬಂಗಾಳದಲ್ಲಿ 2ನೇ ಹಂತದ ಚುನಾವಣಾ ಸಮರ: ಮಾಜಿ ಐಪಿಎಸ್​ ಅಧಿಕಾರಿಗಳ ನಡುವೆ ಬಿಗ್​ ಫೈಟ್​

ನಂದಿಗ್ರಾಮ್ ಸ್ಪರ್ಧೆಯ ನಂತರ ಇದೀಗ ಡೆಬ್ರಾ ವಿಧಾನಸಭಾ ಚುನಾವಣೆ ಕಡೆಗೆ ಜನರು ಚಿತ್ತ ನೆಟ್ಟಿದ್ದಾರೆ. ಏಕೆಂದರೆ ಪಶ್ಚಿಮ ಬಂಗಾಳದ ಡೆಬ್ರಾ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಮಾಜಿ ಐಪಿಎಸ್​ ಅಧಿಕಾರಿಗಳು ಸ್ಪರ್ಧಿಸುತ್ತಿದ್ದಾರೆ.

author img

By

Published : Mar 29, 2021, 7:04 AM IST

Debra assembly seat
ಮಾಜಿ ಐಪಿಎಸ್​ ಅಧಿಕಾರಿಗಳ ನಡುವೆ ಫೈಟ್​

ಪಶ್ಚಿಮ ಮೇದಿನಪುರ(ಪ.ಬಂಗಾಳ): ಏಪ್ರಿಲ್ 1 ರಂದು ನಡೆಯಲಿರುವ ಎರಡನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದ ಡೆಬ್ರಾ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಮಾಜಿ ಐಪಿಎಸ್​ ಅಧಿಕಾರಿಗಳು ಸ್ಪರ್ಧಿಸುತ್ತಿದ್ದಾರೆ.

ಹೈ-ವೋಲ್ಟೇಜ್ ನಂದಿಗ್ರಾಮ್ ಸ್ಪರ್ಧೆಯ ನಂತರ ಇದೀಗ ಡೆಬ್ರಾ ವಿಧಾನಸಭಾ ಚುನಾವಣೆ ಕಡೆಗೆ ಜನರು ಚಿತ್ತ ನೆಟ್ಟಿದ್ದಾರೆ. ಡೆಬ್ರಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರು ಕಣದಲ್ಲಿದ್ದು, ಇವರ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ಹುಮಾಯೂನ್ ಕಬೀರ್​ ಅವರು ತೃಣಮೂಲ ಕಾಂಗ್ರೆಸ್​ನಿಂದ ಅಖಾಡಕ್ಕಿಳಿದಿದ್ದಾರೆ. ವಿಶೇಷವೆಂದರೆ, ಘೋಷ್ ಅವರು ಈ ಹಿಂದೆ ಮಮತಾ ಅವರಿಗೆ ಆಪ್ತರಾಗಿದ್ದರು. ಲೋಕಸಭಾ ಚುನಾವಣೆಗೆ ಮುನ್ನ ಅವರು 2019ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು. ಮತ್ತೊಂದೆಡೆ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಬೀರ್ ಟಿಎಂಸಿಗೆ ಸೇರಿದ್ದಾರೆ.

ಇದನ್ನು ಓದಿ: ಬಂಗಾಳದ ನರೇಂದ್ರಪುರದಲ್ಲಿ 56 ಬಾಂಬ್‌ ವಶಕ್ಕೆ ಪಡೆದ ಪೊಲೀಸರು​

ಭಾರತಿ ಘೋಷ್ ಬಗ್ಗೆ ಮಾತನಾಡಿದ ಕಬೀರ್, "ಭಾರತಿ ಘೋಷ್ ಮತ್ತು ನನ್ನ ನಡುವೆ ಯಾವುದೇ ಹೋಲಿಕೆ ಇಲ್ಲ. ಅವರ ವಿರುದ್ಧ 19 ಪ್ರಕರಣಗಳಿವೆ. ಅವಳು ಸಾಕಷ್ಟು ಹಣವನ್ನು ಅನ್ಯ ಮಾರ್ಗದಿಂದ ಸಂಪಾದಿಸಿದ್ದಾಳೆ. ನನ್ನನ್ನು ಅವಳೊಂದಿಗೆ ಹೋಲಿಸಬೇಡಿ. ಅವಳು ಖಂಡಿತವಾಗಿಯೂ ಜೈಲಿಗೆ ಹೋಗುತ್ತಾಳೆ" ಎಂದು ಆರೋಪಿಸಿದ್ದಾರೆ.

ಈ ವೇಳೆ ಕಬೀರ್ ಮಾಡಿದ ಆರೋಪವನ್ನು ಭಾರತಿ ಘೋಷ್ ತಳ್ಳಿಹಾಕಿದ್ದಾರೆ. "ಇದೆಲ್ಲವೂ ತಪ್ಪು. ನನ್ನ ರಾಜೀನಾಮೆಯ ನಂತರ ಈ ಎಲ್ಲ ಪ್ರಕರಣಗಳನ್ನು ರೂಪಿಸಲಾಗಿದೆ. ಮಮತಾ ಬ್ಯಾನರ್ಜಿ ನನಗೆ ಅತ್ಯುತ್ತಮ ಐಪಿಎಸ್ ಅಧಿಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. ನಾನು ಆರು ವರ್ಷಗಳ ಕಾಲ ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಮಮತಾ ಬಯಸಿದ ತಪ್ಪು ಕಾರ್ಯಗಳನ್ನು ಮಾಡಲು ನಾನು ನಿರಾಕರಿಸಿದಾಗ ಮತ್ತು ರಾಜೀನಾಮೆ ನೀಡಿದಾಗ, ಅವರು ನನ್ನ ವಿರುದ್ಧ ಪ್ರಕರಣಗಳನ್ನು ಸೃಷ್ಟಿಸಲು ಪ್ರಾರಂಭಿಸಿದರು. ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿದೆ ಮತ್ತು ನಾನು ಎಲ್ಲ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ನೀಡಿದ್ದೇನೆ "ಎಂದು ಘೋಷ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.