ETV Bharat / bharat

ರಾಜಸ್ಥಾನ: ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ

ಕೋಚಿಂಗ್​ ಸೆಂಟರ್​ಗಳಿಗೆ ಪ್ರಸಿದ್ಧಿ ಹೊಂದಿರುವ ರಾಜಸ್ಥಾನದ ಕೋಟಾ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಹೆಚ್ಚು ಕುಖ್ಯಾತಿ ಪಡೆಯುತ್ತಿದೆ.

two-coaching-students-committed-suicide-by-hanging-in-kota-preparing-for-medical
ರಾಜಸ್ಥಾನ: ಇಬ್ಬರು ಮೆಡಿಕಲ್​ ಕೋಚಿಂಗ್​ ವಿದ್ಯಾರ್ಥಿಗಳು ನೇಣಿಗೆ ಶರಣು
author img

By

Published : Dec 12, 2022, 7:09 PM IST

Updated : Dec 12, 2022, 9:26 PM IST

ಕೋಟಾ(ರಾಜಸ್ಥಾನ): ರಾಜಸ್ಥಾನದಲ್ಲಿ ಸೋಮವಾರ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ನೀಟ್​ ಆಕಾಂಕ್ಷಿ ಪ್ರಣವ್​ ವರ್ಮ(17), ಬಿಹಾರ ಮೂಲದ ಉಜ್ವಲ್​ ಕುಮಾರ್​ ಮತ್ತು ಅಂಕುಶ್​ ಹಾಗೂ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಎಂಬಿಬಿಎಸ್​ ವಿದ್ಯಾರ್ಥಿ ಸುರೇಂದ್ರ ಕುಮಾರ್​ (23) ಮೃತರು. ಆತ್ಮಹತ್ಯೆಯ ಹಿಂದಿನ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಂಕುಶ್​ ಮತ್ತು ಉಜ್ವಲ್​ ಇಬ್ಬರು ಸ್ನೇಹಿತರಾಗಿದ್ದು ಒಂದೇ ಹಾಸ್ಟೆಲ್​ನಲ್ಲಿ ವಾಸಿಸುತ್ತಿದ್ದರು. ಒಬ್ಬ ಇಂಜಿನಿಯರಿಂಗ್​, ಇನ್ನೊಬ್ಬ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದ. ಪ್ರಣವ್​ ಎಂಬಾತ ಕೋಟಾದಲ್ಲಿ ಕಳೆದ ಎರಡು ವರ್ಷಗಳಿಂದ ನೀಟ್​ ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಈ ಮೂವರಲ್ಲದೇ, ಅಂತಿಮ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿ ಸುರೇಂದ್ರ ಕುಮಾರ್​ ಪರೀಕ್ಷೆ ದಿನವೇ ಭರತಪುರದ ಹಾಸ್ಟೆಲ್​ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಹಲವು ದಿನಗಳಿಂದ ಸುರೇಂದ್ರ ಖಿನ್ನತೆಗೆ ಒಳಗಾಗಿದ್ದನು ಎಂದು ಹಾಸ್ಟೆಲ್​ ವಾರ್ಡನ್​ ತಿಳಿಸಿದ್ದಾರೆ.

ಕೋಟಾವು ಸಾಮಾನ್ಯವಾಗಿ ಸ್ಪರ್ಧಾತ್ಮಕ, ಎಂಜಿನಿಯರಿಂಗ್​ ಹಾಗು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಪೂರ್ವಸಿದ್ದತಾ ತರಗತಿಗಳನ್ನು ಒದಗಿಸುವ ಕೋಚಿಂಗ್​ ಸೆಂಟರ್​ಗಳಿಗೆ ಪ್ರಸಿದ್ಧಿ ಪಡೆದಿದೆ. ಗಮನಾರ್ಹವಾಗಿ, ಕಳೆದ ಹಲವು ತಿಂಗಳುಗಳಿಂದ ಇದೇ ಕೋಟಾ ಅನೇಕ ಆತ್ಮಹತ್ಯೆ ಪ್ರಕರಣಗಳಿಗೂ ಕುಖ್ಯಾತಿ ಗಳಿಸಿದೆ.

ರಾಷ್ಟ್ರೀಯ ಅಪರಾಧ ಬ್ಯೂರೋದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷದಲ್ಲಿ ಭಾರತದಲ್ಲಿ 13,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಐದು ವರ್ಷದಲ್ಲಿ ಅತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಶೇ 27ರಷ್ಟು ಏರಿಕೆಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪರೀಕ್ಷಾ ವೈಫಲ್ಯ ಕಾರಣವಾಗುತ್ತಿದೆ.

ಇದನ್ನೂ ಓದಿ: ಜಾರ್ಖಂಡ್‌: ಮದರಸಾದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Last Updated : Dec 12, 2022, 9:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.