ETV Bharat / bharat

ಬಿಎಸ್​ಎಫ್​​​ ಯೋಧರ ನಡುವೆಯೇ ಗುಂಡಿನ ಚಕಮಕಿ: ಇಬ್ಬರ ಬಲಿ, ಓರ್ವನ ಸ್ಥಿತಿ ಗಂಭೀರ!

author img

By

Published : Sep 24, 2021, 9:06 AM IST

Updated : Sep 24, 2021, 9:30 AM IST

ನಿನ್ನೆ ಸಂಜೆ 5:45ರ ಸುಮಾರಿಗೆ ಸಹೋದ್ಯೋಗಿಗಳ ನಡುವೆ ಗಲಾಟೆ ನಡೆದಿದ್ದು, ಆ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ಬಿಎಸ್‌ಎಫ್ ಯೋಧರು ಸಾವನ್ನಪ್ಪಿದ್ದಾರೆ. ಮತ್ತು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Two BSF men killed, one injured as colleagues open fire at each other
ಗುಂಡಿನ ಚಕಮಕಿಯಲ್ಲಿ ಬಿಎಸ್​ಎಫ್​​​ ಯೋಧರು ಬಲಿ

ಅಗರ್ತಲಾ (ತ್ರಿಪುರ): ತ್ರಿಪುರಾದ ಗೋಮತಿ ಜಿಲ್ಲೆಯ ಸಿಲಚಾರಿ ಪ್ರದೇಶದ ಇಂಡೋ - ಬಾಂಗ್ಲಾ ಗಡಿಯಲ್ಲಿ ನಿನ್ನೆ ಸಂಜೆ 5:45ರ ಸುಮಾರಿಗೆ ಸಹೋದ್ಯೋಗಿಗಳ ನಡುವೆ ಗಲಾಟೆ ನಡೆದಿದ್ದು, ಆ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ಬಿಎಸ್‌ಎಫ್ ಯೋಧರು ಸಾವನ್ನಪ್ಪಿದ್ದಾರೆ. ಮತ್ತು ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ಬಗ್ಗೆ ಈಟಿವಿ ಭಾರತ್‌ಗೆ ಪೊಲೀಸರು ಮಾಹಿತಿ ನೀಡಿದ್ದು, ಗಲಾಟೆಯಲ್ಲಿ ಹವಿಲ್ದಾರ್ ಸತ್ಬೀರ್ ಸಿಂಗ್ ನನ್ನು ಕೊಂದಿರುವ ಸಹೋದ್ಯೋಗಿ ಬಿಎಸ್‌ಎಫ್ ಕಾನ್‌ಸ್ಟೇಬಲ್ ಪ್ರತಾಪ್​​​ ಸಿಂಗ್, ಬಳಿಕ ಇನ್ನೂ​​ ಕೋಪಗೊಂಡು ಉಳಿದವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದರು. ಹಿರಿಯ ಅಧಿಕಾರಿ ರಾಮ್​​ ಕುಮಾರ್​ ಸಿಂಗ್​ ಮೇಲೂ ಗುಂಡಿನ ದಾಳಿ ನಡೆಸಿದರು.

ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡರು. ಇದನ್ನು ಕಂಡು ಭಯಗೊಂಡ ಇತರರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪ್ರತಾಪ್​​​ ಸಿಂಗ್ ಮೇಲೆ ಪ್ರತಿದಾಳಿ ನಡೆಸಿದ ಪರಿಣಾಮ ಪ್ರತಾಪ್​ ಸಿಂಗ್​ ಕೂಡಾ ಸಾವನ್ನಪ್ಪಿದರು. ​​

ಇದನ್ನೂ ಓದಿ: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಆಂತರಿಕ ವಿಷಯ: ಒಐಸಿಗೆ ಭಾರತ ಖಡಕ್ ಸಂದೇಶ

ಗಡಿಯಲ್ಲಿ ಕಾನ್ಸ್​​ಟೇಬಲ್ ಪ್ರತಾಪ್​ ಸಿಂಗ್​​, ಹವಿಲ್ದಾರ್ ಸತ್ಬೀರ್ ಸಿಂಗ್ ಜೊತೆ ಗಸ್ತು ತಿರುಗುತ್ತಿದ್ದಾಗ ಕೆಲವು ಕಾರಣಗಳಿಂದ ತೀವ್ರ ವಾಗ್ವಾದ ನಡೆದು ಹವಿಲ್ದಾರ್ ಸತ್ಬೀರ್ ಸಿಂಗ್ ಮೇಲೆ ಪ್ರತಾಪ್​ ಸಿಂಗ್ ಗುಂಡು ಹಾರಿಸಿದ್ದಾರೆ. ಕೋಪದಲ್ಲಿದ್ದ ಪ್ರತಾಪ್​ ಸಿಂಗ್ ಇತರರ ಮೇಲೂ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಆಗ ಇತರ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಾಪ್​ ಸಿಂಗ್ ಸಾವನ್ನಪ್ಪಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ರಾಮ್​​ ಕುಮಾರ್​ ಸಿಂಗ್ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹತರಾದ ಇಬ್ಬರು ಬಿಎಸ್‌ಎಫ್ ಯೋಧರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಎಸ್‌ಡಿಪಿಒ ರಾಜು ರಿಯಾಂಗ್ ಮಾಹಿತಿ ನೀಡಿದರು.

Last Updated : Sep 24, 2021, 9:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.