ETV Bharat / bharat

ಶೌಚಾಲಯದ ಒಂದೇ ಕೊಠಡಿಯಲ್ಲಿ ಎರಡು ಬೇಸಿನ್​! - ಸಮುದಾಯ ಶೌಚಾಲಯದ ಸ್ಥಿತಿ

ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ ನಮ್ರತಾ ಶರಣ್ ಸಮುದಾಯ ಶೌಚಾಲಯದ ಸ್ಥಿತಿ ನೋಡಿ ಆಶ್ಚರ್ಯ ಪಟ್ಟಿದ್ದಾರೆ.

Two basins in one toilet room in Basti UP
ಒಂದೇ ಶೌಚಾಲಯ ಕೋಣೆಯಲ್ಲಿ ಎರಡು ಬೇಸಿನ್​
author img

By

Published : Dec 22, 2022, 11:55 AM IST

ಬಸ್ತಿ(ಉತ್ತರ ಪ್ರದೇಶ): ಕುದರ್ಹಾ ಬ್ಲಾಕ್ ಪ್ರದೇಶದ ಗೌರ ಧುಂಧ ಗ್ರಾಮದಲ್ಲಿ ನಿರ್ಮಿಸಲಾದ ಸಮುದಾಯ ಶೌಚಾಲಯ ಕೊಠಡಿ ಒಂದರಲ್ಲೇ ಎರಡು ಬೇಸಿನ್​ ಅಳವಡಿಸಿದ್ದು, ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ. ಅಭಿವೃದ್ಧಿ ಇಲಾಖೆಯ ಕಾರ್ಯವೈಖರಿಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಯೋಗಿ ಸರ್ಕಾರವನ್ನು ಜನ ದೂರಿದ್ದಾರೆ.

ಸುಮಾರು 10 ಲಕ್ಷ ವೆಚ್ಚದಲ್ಲಿ ಈ ಶೌಚಾಲಯ ನಿರ್ಮಾಣವಾಗಿದ್ದು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಮುಖ್ಯಾಧಿಕಾರಿ ಇದರ ನಿರ್ಮಾಣ ಹೊಣೆ ಹೊತ್ತವರು. ಒಂದೇ ಕೊಠಡಿಯಲ್ಲಿ ಎರಡು ಬೇಸಿನ್​ಗಳು ಇರುವುದು ಮಾತ್ರವಲ್ಲದೇ ಬಾಗಿಲನ್ನೂ ನಿರ್ಮಿಸದೇ ಇರುವುದರಿಂದ ಇದುವರೆಗೆ ಇದನ್ನು ಯಾರೂ ಬಳಸಲು ಸಾಧ್ಯವಾಗಿಲ್ಲ.

ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ ನಮ್ರತಾ ಶರಣ್ ಸಮುದಾಯ ಶೌಚಾಲಯದ ಸ್ಥಿತಿ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ತಪ್ಪಿತಸ್ಥ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಾಗಿದೆ. ಶೌಚಾಲಯವನ್ನು ಆದಷ್ಟು ಬೇಗ ಸರಿಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಲ್ಲದೇ ವರದಿ ಬಂದ ನಂತರ ಸಂಬಂಧಪಟ್ಟವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೇ ಶೌಚಕೊಠಡಿಯಲ್ಲಿ ಎರಡು ಕಮೋಡ್​​.. ಬೆಚ್ಚಿಬಿದ್ದ ಸಾರ್ವಜನಿಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.