ETV Bharat / bharat

ಕೇರಳ ರಾಜಕೀಯ ಮುಖಂಡರ ಕೊಲೆ.. ಪ್ರಮುಖ ಆರೋಪಿ ಸೇರಿದಂತೆ ಇಬ್ಬರ ಬಂಧನ - ಕೇರಳ ಕೊಲೆ ಕೇಸಲ್ಲಿ ಇಬ್ಬರು ಆರೋಪಿಗಳ ಸೆರೆ

ಎಸ್​ಡಿಪಿಐ ಮುಖಂಡ ಶಾನ್​ ಹತ್ಯೆಗೆ ಸಂಬಂಧಿಸಿದಂತೆ ಪ್ರಸಾದ್ ಮತ್ತು ರತೀಶ್​ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಹತ್ಯೆಯ ಸಂಚಿನ ರೂವಾರಿಯಾಗಿದ್ದಾನೆ. ಈ ಸಂಚಿನಲ್ಲಿ 10 ಜನರು ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

SDPI leader's killing
ರಾಜಕೀಯ ಮುಖಂಡರ ಕೊಲೆ
author img

By

Published : Dec 20, 2021, 3:26 PM IST

ಆಲಪ್ಪುಳ (ಕೇರಳ): ಕೇರಳದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಎಸ್​ಡಿಪಿಐ ಮತ್ತು ಬಿಜೆಪಿ ನಾಯಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಎಡಿಜಿಪಿ ವಿಜಯ್​ ಸಾಖರೆ, ಎಸ್​ಡಿಪಿಐ ಮುಖಂಡ ಶಾನ್​ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಸಾದ್ ಮತ್ತು ರತೀಶ್​ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅದರಲ್ಲಿ ಒಬ್ಬ ಹತ್ಯೆಯ ಸಂಚಿನ ರೂವಾರಿಯಾಗಿದ್ದಾನೆ. ಅಲ್ಲದೇ, ಈ ಸಂಚಿನಲ್ಲಿ 10 ಜನರು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಇಬ್ಬರು ಪ್ರಮುಖ ಆರೋಪಿಗಳ ಬಂಧನದಿಂದ ಹತ್ಯೆ ಕೇಸ್​ಗೆ ಬಲ ಬಂದಿದೆ. ತಲೆಮರೆಸಿಕೊಂಡಿರುವ ಇನ್ನು 8 ಜನರನ್ನು ಶೀಘ್ರವೇ ಬಂಧಿಸಲಾಗುವುದು. ಬಂಧಿತ ಪ್ರಮುಖ ಆರೋಪಿ ಎಸ್​ಡಿಪಿಐ ಮುಖಂಡನ ಕೊಲೆಗೆ ವಾಹನ ತಯಾರಿ, ಗುಂಪು ಮತ್ತು ಯೋಜನೆ ರೂಪಿಸಿದ್ದ ಬಗ್ಗೆ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೇ, ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸ್​ ಕೊಲೆಯಲ್ಲೂ 12 ಮಂದಿ ಭಾಗಿಯಾಗಿದ್ದ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಬ್ಬರು ರಾಜಕೀಯ ಮುಖಂಡರ ಕೊಲೆಯ ಹಿಂದೆ ಭಾರೀ ಪಿತೂರಿ ನಡೆದಿರುವ ಶಂಕೆ ಇದೆ. ಅದು ರುಜುವಾತಾದಲ್ಲಿ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಜಯ್​ ಸಾಖರೆ ತಿಳಿಸಿದ್ದಾರೆ.

ಇದನ್ನೂ ಓದಿ: ಹಾವನ್ನೇ ಹಗ್ಗವಾಗಿಸಿಕೊಂಡು ಸ್ಕಿಪ್ಪಿಂಗ್​ ಮಾಡಿದ ಯುವಕ.. ವಿಡಿಯೋ ವೈರಲ್​

ಶನಿವಾರ ತಡರಾತ್ರಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾನ್ ಹತ್ಯೆಯ ನಂತರ, ಬಿಜೆಪಿ ಮುಖಂಡ ಶ್ರೀನಿವಾಸ್​ರನ್ನು ಭಾನುವಾರ ಬೆಳಗ್ಗೆ ಕೊಲೆ ಮಾಡಲಾಗಿತ್ತು. ಈ ಘಟನೆ ಕೇರಳ ರಾಜಕೀಯ ಅಶಾಂತಿಗೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.