ETV Bharat / bharat

ಶಬರಿಮಲೆ ಬೆಟ್ಟಕ್ಕೆ ಅತಿಕ್ರಮ ಪ್ರವೇಶ, ಪೂಜೆ ಸಲ್ಲಿಕೆ; ಇಬ್ಬರ ಬಂಧನ

ಶಬರಿಮಲೆ ದೇಗುಲದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟಕ್ಕೆ ಗುಂಪೊಂದು ಅತಿಕ್ರಮ ಪ್ರವೇಶ ಮಾಡಿ ಅಲ್ಲಿ ಪೂಜೆ ಸಲ್ಲಿಸಿರುವ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಇಬ್ಬರನ್ನು ಬಂಧಿಸಲಾಗಿದೆ.

Illegal puja at Ponnambalamet in Sabarimala
ಶಬರಿಮಲೆ ಬೆಟ್ಟಕ್ಕೆ ಅತಿಕ್ರಮ ಪ್ರವೇಶ ಮಾಡಿ ಪೂಜೆ ಸಲ್ಲಿಕೆ
author img

By

Published : May 17, 2023, 12:59 PM IST

ತಿರುವನಂತಪುರಂ : ಶಬರಿಮಲೆಯ ಪೊನ್ನಂಬಲಮೇಟ್‌ನಲ್ಲಿ ಅಕ್ರಮವಾಗಿ ಪೂಜೆ ಸಲ್ಲಿಸಿರುವ ಕುರಿತು ತಿರುವಾಂಕೂರು ದೇವಸ್ವಂ ಆಯುಕ್ತರು ದೇವಸ್ವಂ ಸಚಿವರಿಗೆ ವರದಿ ನೀಡಿದ್ದಾರೆ. ಜೊತೆಗೆ, ಭಕ್ತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ನಿನ್ನೆ ಇಬ್ಬರನ್ನು ಬಂಧಿಸಲಾಗಿದೆ.

ರಾಜೇಂದ್ರನ್ ಕರುಪ್ಪಯ್ಯ ಮತ್ತು ಸಾಬು ಮ್ಯಾಥ್ಯೂ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಇಂದು ರಾನ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯ ಇಲಾಖೆ ಸಹ ಅಕ್ರಮ ಪ್ರವೇಶದ ಹಿನ್ನೆಲೆಯಲ್ಲಿ ಕೇಸ್​ ದಾಖಲಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 9 ಜನರ ವಿರುದ್ಧ ದೂರು ದಾಖಲಾಗಿದೆ. ಹಾಗೆಯೇ, ಸಚಿವರಿಗೆ ನೀಡಿರುವ ವರದಿಯಲ್ಲಿ ಪೊಲೀಸರಿಗೆ ನೀಡಿರುವ ದೂರು ಹಾಗೂ ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ನೀಡಿದ ಮಾಹಿತಿ ಒಳಗೊಂಡಿದೆ.

ಶಬರಿಮಲೆ ದೇಗುಲದ ಸಮೀಪದಲ್ಲೇ ಪೊನ್ನಂಬಲಮೇಡು ಬೆಟ್ಟವಿದೆ. ಪೊನ್ನಂಬಲಮೇಡು ಬೆಟ್ಟದ ತುದಿಯಲ್ಲಿ ಕಲ್ಲಿನ ಚೌಕಟ್ಟೊಂದಿದ್ದು, ಅದನ್ನು ಅಯ್ಯಪ್ಪ ಭಕ್ತರು ಅತ್ಯಂತ ಭಕ್ತಭಾವದಿಂದ ಪೂಜಿಸುತ್ತಾರೆ. ತಮಿಳುನಾಡು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ಬೆಟ್ಟಕ್ಕೆ ಯಾರಿಗೂ ಪ್ರವೇಶವಿಲ್ಲ. ಪ್ರತಿ ವರ್ಷ ಈ ಬೆಟ್ಟದ ಮೇಲೆ ಮಕರಜ್ಯೋತಿ ಕಾಣಿಸುವುದರೊಂದಿಗೆ ವಾರ್ಷಿಕ ಅಯ್ಯಪ್ಪ ಯಾತ್ರೆ ಮುಕ್ತಾಯವಾಗುತ್ತದೆ.

ಇದನ್ನೂ ಓದಿ : ವ್ಯಾಪಾರದಲ್ಲಿ ನಷ್ಟವಾಗಿದ್ದಕ್ಕೆ ಬಡ ಯುವತಿಯರ ಕರೆ ತಂದು ನಗ್ನ ಪೂಜೆ , ಲೈಂಗಿಕ ದೌರ್ಜನ್ಯ !

ಆದರೆ, ತಮಿಳುನಾಡಿನ ತ್ರಿಶೂರ್ ತೆಕೆಕಟ್ಟುಮಠ ನಾರಾಯಣನ್ ನೇತೃತ್ವದ ತಂಡವೊಂದು ಶಬರಿಮಲೆ ದೇವಸ್ಥಾನದ ಉತ್ತರ ಭಾಗದಲ್ಲಿರುವ ಪೆರಿಯಾರ್ ಹುಲಿ ಅಭಯಾರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಪೂಜೆ ಸಲ್ಲಿಸಿದೆ. ಅವರ ಜೊತೆಗಿದ್ದವರು ಪೊನ್ನಂಬಲಮೇಟ್​ನಲ್ಲಿ ನೆಲದ ಮೇಲೆ ಕುಳಿತು ಪೂಜೆ ಸಲ್ಲಿಸುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ಈ ಕುರಿತಾದ ಮಾಹಿತಿ ತಿಳಿದ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅಡ್ವ್ ಕೆ.ಅನಂತಗೋಪನ್ ಅವರು ಡಿಜಿಪಿ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ : ಶಾಸಕ ಅಬ್ಬಯ್ಯಗೆ ಸಚಿವ ಸ್ಥಾನ ನೀಡುವಂತೆ ಕಾರ್ಯಕರ್ತರ ಪಟ್ಟು : ಮಠದಲ್ಲಿ ಪೂಜೆ ಸಲ್ಲಿಸಿದ ಬೆಂಬಲಿಗರು

ಇದಾದ ನಂತರ ಪಚ್ಚಕನಂ ಅರಣ್ಯ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಮೇ 8 ರಂದು ಘಟನೆ ನಡೆದಿದ್ದು, ನಿನ್ನೆ ವಿಡಿಯೋ ಬಿಡುಗಡೆಯಾಗಿದೆ. ಕಾಡಿನಲ್ಲಿ ಸುಮಾರು 10 ಕಿ. ಮೀ ನಡೆದುಕೊಂಡು ಹೋದ ತಂಡ, ಬೆಳಗ್ಗೆ 7.30 ಕ್ಕೆ ವಲ್ಲಕಡವ್ ಮತ್ತು 11.30 ಕ್ಕೆ ಪೊನ್ನಂಬಲಮೇಟ್ ತಲುಪಿ ಒಂದು ಗಂಟೆ ಪೂಜೆ ನಡೆಸಿದೆ. ಪಂಪಾ ಅರಣ್ಯ ವಲಯದ ಅಧಿಕಾರಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ಬ್ರಿಟಿಷರ ಮೆಚ್ಚಿಸಲು ದುರ್ಗಾ ಪೂಜೆ ಪ್ರಾರಂಭಿಸಲಾಗಿತ್ತು ಎಂದ ಉಪಕುಲಪತಿ : ವರದಿ ಕೇಳಿದ ಪ್ರಧಾನಿ ಕಚೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.