ETV Bharat / bharat

15% ಕಮಿಷನ್ ಹೆಸರಿನಲ್ಲಿ 2.20 ಕೋಟಿ ರೂಪಾಯಿ ವಂಚನೆ: ಇಬ್ಬರ ಬಂಧನ

500 ರೂಪಾಯಿ ನೋಟು ನೀಡಿದರೆ ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಶೇ.15ರಷ್ಟು ಕಮಿಷನ್​ನೊಂದಿಗೆ ನೀಡುತ್ತೇವೆ, ಬಳಿಕ ನೀವು ಬ್ಯಾಂಕ್​ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದೆಂದು ಹೇಳಿ 2.20 ಕೋಟಿ ರೂ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ನಂದ್ಯಾಲ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

arrest
ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು
author img

By ETV Bharat Karnataka Team

Published : Sep 8, 2023, 12:09 PM IST

ನಂದ್ಯಾಲ (ಆಂಧ್ರಪ್ರದೇಶ) : ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡು 15% ಕಮಿಷನ್ ಹೆಸರಿನಲ್ಲಿ 2.20 ಕೋಟಿ ರೂ ವಂಚನೆ ಮಾಡಿದ್ದ ಆರೋಪಿಗಳನ್ನು ನಂದ್ಯಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಂದ್ಯಾಲ ಡಿಎಸ್‌ಪಿ ಮಹೇಶ್ವರ ರೆಡ್ಡಿ, "ಶ್ರೀಕಾಕುಳಂ ಜಿಲ್ಲೆಯ ಸರಬುಜ್ಜಿಲಿ ಮಂಡಲದ ಟೆಲಿಕಿಪೆಂಟ ಗ್ರಾಮದ ಸೋಭನ್​ ಬಾಬು ಹಾಗೂ ಅದೇ ಜಿಲ್ಲೆಯ ನಂದಿಗಂ ಮಂಡಲದ ದೇವಪುರಂ ಗ್ರಾಮದ ಚಿನ್ನಬಾಬು ಸೇರಿದಂತೆ ಆರು ಮಂದಿ ನಂದ್ಯಾಲ ಮಂಡಲದ ನೂನೆಪಲ್ಲಿಯ ಶ್ರೀನಿವಾಸ ರೆಡ್ಡಿ ಹಾಗೂ ಆತನ ಸ್ನೇಹಿತರನ್ನು ಭೇಟಿಯಾಗಿದ್ದಾರೆ. ಈ ವೇಳೆ ನಮ್ಮ ಬಳಿ 2000 ರೂ. ನೋಟುಗಳಿವೆ. ಸದ್ಯದಲ್ಲೇ ಈ 2 ಸಾವಿರ ರೂ. ಮುಖಬೆಲೆಯ ನೋಟುಗಳು ರದ್ದಾಗಲಿದ್ದು, ಯಾರಾದರೂ 500 ರೂ. ನೋಟುಗಳನ್ನು ನೀಡಿದರೆ ಶೇ.15ರಷ್ಟು ಕಮಿಷನ್ ಜೊತೆಗೆ 2000 ರೂ. ನೋಟುಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ +: ಮಹಿಳೆಯರಿಗೆ ರಿಯಾಯಿತಿ ಆಸೆ ತೋರಿಸಿ ಲಕ್ಷಾಂತರ ರೂ ಮೋಸ ಮಾಡಿದ ಕಂಪನಿ.. ಆರೋಪ

ಕಮಿಷನ್‌ ಆಸೆಗಾಗಿ ಶ್ರೀನಿವಾಸ ರೆಡ್ಡಿ ಮತ್ತು ಅವರ ಸ್ನೇಹಿತರು 500 ರೂ. ನೋಟುಗಳೊಂದಿಗೆ ರೈತನಗರಂ ಗ್ರಾಮಕ್ಕೆ ತೆರಳಿದ್ದು, ಅಲ್ಲಿ ಆರೋಪಿಗಳಿಗೆ ಒಟ್ಟು 2.20 ಕೋಟಿ ಮೌಲ್ಯದ ಐನೂರು ನೋಟುಗಳನ್ನು ನೀಡಿದ್ದಾರೆ. ಬಳಿಕ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಶ್ರೀನಿವಾಸ ರೆಡ್ಡಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ : ಬ್ಲ್ಯಾಕ್ ಅಂಡ್​​ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ₹20 ಲಕ್ಷ ವಂಚನೆ : ಆರೋಪಿಗಳ ಬಂಧನ

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಎಸ್​ಪಿ ರಘುವೀರ ರೆಡ್ಡಿ, ಹೆಚ್ಚುವರಿ ಎಸ್‌ಪಿ ವೆಂಕಟರಾಮುಡು ಅವರ ಆದೇಶದಂತೆ ನಂದ್ಯಾಲ ಡಿಎಸ್​ಪಿ ಮಹೇಶ್ವರ ರೆಡ್ಡಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸಿಐ ದಸ್ತಗಿರಿಬಾಬು, ಸಿಐ ರವೀಂದ್ರ, ಗ್ರಾಮಾಂತರ ಎಸ್‌ಐ ರಾಮಮೋಹನ್ ರೆಡ್ಡಿ, ಮೂರನೇ ಪಟ್ಟಣ ಎಸ್‌ಐ ಬಾಬು ಸೇರಿದಂತೆ ಇತರೆ ಸಿಬ್ಬಂದಿ ಎರಡು ವಿಶೇಷ ತಂಡಗಳನ್ನು ರಚಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ : ಛಾಯಾಗ್ರಾಹಕನ ವಿರುದ್ಧ ಹಾರ್ಡ್ ಡಿಸ್ಕ್ ಕೊಡದೇ ವಂಚನೆ ಪ್ರಕರಣ : ಆರೋಪ ಅಲ್ಲಗಳೆದ ಸಹ ನಿರ್ಮಾಪಕಿ​

ಬುಧವಾರ ಸಂಜೆ ವಿಶಾಖಪಟ್ಟಣದ ಮಾಧವಧಾರ ಪ್ರದೇಶದ ಕುಂಚುಮಾಂಬಗುಡಿ ಬೀದಿಯಲ್ಲಿ ಆರೋಪಿಗಳಾದ ಸೋಭನ್​ ಬಾಬು ಮತ್ತು ಚಿನ್ನಬಾಬು ಸಿಕ್ಕಿ ಬಿದ್ದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 70 ಲಕ್ಷ ರೂ. ಮೌಲ್ಯದ 500 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಆರೋಪಿಗಳು ತಪ್ಪಿಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : Server Hack : ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್, ಕೋಟ್ಯಂತರ ಹಣ ವಂಚನೆ ; ಓರ್ವನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.