ನವದೆಹಲಿ: ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಟ್ವಿಟರ್ನ ತನ್ನ ಫಾಲೋವರ್ಸ್ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ಗೆ ಪತ್ರ ಬರೆದಿದ್ದರು.
ಈ ಕುರಿತು ಟ್ವಿಟರ್ ವಕ್ತಾರರೊಬ್ಬರು ಟ್ವೀಟ್ ಮಾಡಿದ್ದು, ಟ್ವಿಟರ್ನಲ್ಲಿ ಫಾಲೋವರ್ಸ್ ಕುರಿತ ಅಂಕಿ - ಅಂಶಗಳು ನಿಖರವಾಗಿವೆ. ಟ್ವಿಟರ್ ನೀತಿಯನ್ನು ಉಲ್ಲಂಘಿಸಿದಕ್ಕಾಗಿ ಪ್ರತಿವಾರ ನಾವು ಲಕ್ಷಾಂತರ ಖಾತೆಗಳನ್ನು ತೆಗೆದು ಹಾಕುತ್ತೇವೆ. ಈ ಕುರಿತು ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ಟ್ವಿಟರ್ ಟ್ರಾನ್ಸ್ಪರೆನ್ಸಿ ಸೆಂಟರ್ನಲ್ಲಿ ಮಾಹಿತಿ ಪಡೆಯಬಹುದು. ಕೆಲವೊಂದು ಸಮಯದಲ್ಲಿ ಸ್ವಲ್ಪ ಏರು ಪೇರಾಗಬಹುದು, ಹೆಚ್ಚು ಏರುಪೇರಾಗಲು ಸಾಧ್ಯವಿಲ್ಲ ಎಂದಿದ್ದು, ಈ ಕುರಿತು ಎಎನ್ಐ ವರದಿ ಮಾಡಿದೆ.
2020ರ ಆಗಸ್ಟ್ನಿಂದ ಹೊಸ ಫಾಲೋವರ್ಸ್ ಸಂಖ್ಯೆಯಲ್ಲಿ ತೀರ ಇಳಿಮುಖ ಕಂಡು ಬಂದಿದ್ದು, ಇದನ್ನು ರಾಹುಲ್ ಗಾಂಧಿ ಪರಾಗ್ ಅಗರ್ವಾಲ್ಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಜೊತೆಗೆ ತಮ್ಮ ಫಾಲೋವರ್ಸ್ ಸಂಖ್ಯೆ 19.5 ಮಿಲಿಯನ್ನಲ್ಲಿಯೇ ಇದೆ. ಈ ಮೊದಲಿಗೆ ಎರಡು ಲಕ್ಷ ಫಾಲೋವರ್ಸ್ ಹೊಸದಾಗಿ ಫಾಲೋ ಮಾಡುತ್ತಿದ್ದರು. ಆಗಸ್ಟ್ನಿಂದ ಅವರ ಸಂಖ್ಯೆ ತಿಂಗಳಿಗೆ ಕೇವಲ 2 ಸಾವಿರದಷ್ಟು ಮಾತ್ರ ಹೆಚ್ಚುತ್ತಿದೆ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ