ETV Bharat / bharat

ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್​ ಖಾತೆಗಳಿಗೆ ನಿರ್ಬಂಧ - Etv Bharat Kannada

ಪಾಕಿಸ್ತಾನ ಸರ್ಕಾರದ ಟ್ವಿಟರ್​ ಖಾತೆಗಳ ವೀಕ್ಷಣೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ.

ಪಾಕ್​ ಸರ್ಕಾರದ ಟ್ವೀಟ್​ ಖಾತೆ ನಿರ್ಬಂಧ
ಪಾಕ್​ ಸರ್ಕಾರದ ಟ್ವೀಟ್​ ಖಾತೆ ನಿರ್ಬಂಧ
author img

By

Published : Mar 30, 2023, 11:09 AM IST

ನವದೆಹಲಿ​​: ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್​ ಖಾತೆಯ ವೀಕ್ಷಣೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ನಿಖರವಾದ ಕಾರಣ ತಿಳಿಸಿಲ್ಲ. ಭಾರತ ಮತ್ತು ಪಾಕಿಸ್ತಾನದ ಐಟಿ ಸಚಿವಾಲಯದಿಂದಲೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪಾಕ್ ಸರ್ಕಾರದ ಟ್ವಿಟರ್ ಖಾತೆಗಳು ಯುಎಸ್ ಮತ್ತು ಕೆನಡಾದಂತಹ ಇತರ ದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದೀಗ ಟ್ವಿಟರ್​ ಖಾತೆ ಪ್ರವೇಶಿಸಿದರೆ 'ಖಾತೆ ತಡೆಹಿಡಿಯಲಾಗಿದೆ' (Account withheld) ಎಂದು ತೋರಿಸುತ್ತದೆ.

3ನೇ ಬಾರಿಗೆ ನಿರ್ಬಂಧ: ಈ ಹಿಂದೆಯೂ ಪಾಕಿಸ್ಥಾನದ ಟ್ವಿಟರ್​ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಜುಲೈ 2022 ರಲ್ಲಿ ಮೊದಲ ಬಾರಿಗೆ ಅಲ್ಲಿನ ಸರ್ಕಾರದ ಅಧಿಕೃತ ಟ್ವಿಟರ್ ತಡೆಹಿಡಿದಿತ್ತು. ಅಕ್ಟೋಬರ್‌ ತಿಂಗಳಲ್ಲೂ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಕೆಲವು ದಿನಗಳ ನಂತರ ಪುನಃ ಸಕ್ರಿಯಗೊಳಿಸಲಾಗಿತ್ತು. ಆಯಾ ದೇಶಗಳ ಕಾನೂನುಗಳನುಸಾರ ದೂರು ಕೇಳಿ ಬಂದರೆ ಟ್ವಿಟರ್​ ಈ ರೀತಿ ಕ್ರಮಕ್ಕೆ ಮುಂದಾಗುತ್ತದೆ.

ಕಳೆದ ವರ್ಷ ಜೂನ್‌ನಲ್ಲಿ ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಹಲವು ಅಧಿಕೃತ ಖಾತೆಗಳನ್ನು ಭಾರತದಲ್ಲಿ ರದ್ದುಗೊಳಿಸಲಾಗಿತ್ತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಭದ್ರತೆ, ವಿದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಪಾಕಿಸ್ತಾನ ಮೂಲದ ಆರು ಸೇರಿದಂತೆ ಒಟ್ಟು 16 ಯೂಟ್ಯೂಬ್ ಸುದ್ದಿ ಚಾನಲ್‌ಗಳನ್ನು ನಿರ್ಬಂಧಿಸಿತ್ತು.

ಇದನ್ನೂ ಓದಿ: ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್​ ಖಾತೆ ಬಂದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.