ಪಾಲ್ಘರ್(ಮಹಾರಾಷ್ಟ್ರ): ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಇನ್ನೂ ಅನೇಕ ಕಡೆಗಳಲ್ಲಿ ಜನರಿಗೆ ಸರಿಯಾದ ರಸ್ತೆ ಸಂಪರ್ಕ, ಆರೋಗ್ಯ ಸೇವೆ ಮರೀಚಿಕೆಯಾಗಿದೆ. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಗರ್ಭಿಣಿಯೊಬ್ಬರು ನರಕಯಾತನೆ ಅನುಭವಿಸಿದ್ದು ಇದಕ್ಕೊಂದು ಹೊಸ ಉದಾಹರಣೆಯಷ್ಟೇ. ಪಾಲ್ಘರ್ನ ಬೋಟೋಶಿ ಗ್ರಾಮ ಪಂಚಾಯ್ತಿಯ ಮರ್ಕಟವಾಡಿಯಲ್ಲಿ ಈ ಘಟನೆ ನಡೆಯಿತು.
ತುರ್ತು ಆರೋಗ್ಯ ಸಮಸ್ಯೆಯಾದರೆ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸರಿಯಾದ ರಸ್ತೆ ಸಂಪರ್ಕ ಇಲ್ಲಿಲ್ಲ. ಇದರ ಪರಿಣಾಮ, ರೋಗಿಗಳನ್ನು ಮೂರು ಕಿಲೋ ಮೀಟರ್ ನಡೆದುಕೊಂಡೇ ಸಾಗಿಸಬೇಕಾದ ದುಸ್ಥಿತಿ ಇದೆ.
ಇದನ್ನೂ ಓದಿ: ಆರೋಗ್ಯ ಕೇಂದ್ರಕ್ಕೆ ಬೀಗ.. ಕಾಂಪೌಂಡ್ ಪಕ್ಕದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ವಿಪರೀತ ಹೆರಿಗೆ ನೋವಿನಿಂದ ಬಳಲುತ್ತಿದ್ದ ವಂದನಾ ಎಂಬುವವರನ್ನು ಗ್ರಾಮಸ್ಥರು ಹೆಗಲ ಮೇಲೆ ಹೊತ್ತುಕೊಂಡು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಆಕೆಗೆ ಹೆರಿಗೆಯಾಗಿದ್ದು, ಅವಳಿ ಮಕ್ಕಳು ದಾರುಣ ಸಾವನ್ನಪ್ಪಿವೆ. ಸಕಾಲಕ್ಕೆ ಆರೋಗ್ಯ ಸೇವೆ ಸಿಗದಿರುವುದಕ್ಕೆ ಶಿಶುಗಳು ಪ್ರಾಣ ಕಳೆದುಕೊಂಡಿವೆ ಎಂದು ಕುಟುಂಬಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದರು.