ETV Bharat / bharat

ಶ್ರದ್ಧಾ ವಾಲ್ಕರ್​ ಅಫ್ತಾಬ್​ ಮಾದಕ ವ್ಯಸನಿಯಾಗಿದ್ದ ಎಂದು ಹೇಳಿದ್ದಳು: ನಟ ಇಮ್ರಾನ್ ನಜೀರ್ ಖಾನ್ - drug addict

ಅಫ್ತಾಬ್ ಪೂನಾವಾಲಾ ಕಳೆದ 2 ರಿಂದ 3 ವರ್ಷಗಳಿಂದ ಮಾದಕ ವ್ಯಸನಿಯಾಗಿದ್ದ ಎಂದು ಕಿರುತೆರೆ ನಟ ಇಮ್ರಾನ್ ನಜೀರ್ ಖಾನ್​​ಗೆ ಶ್ರದ್ಧಾ ವಾಲ್ಕರ್​ ಹೇಳಿದ್ದಳಂತೆ. ಈ ವಿಷಯವಾಗಿ ಇದೀಗ ನಟ ನಜೀರ್ ಖಾನ್​ ವಿಡಿಯೋವೊಂದಲ್ಲಿ ಮಾತನಾಡಿದ್ದಾರೆ.

Imran Nazir Khan
ಕಿರುತೆರೆ ನಟ ಇಮ್ರಾನ್ ನಜೀರ್ ಖಾನ್
author img

By

Published : Nov 22, 2022, 4:31 PM IST

ಮುಂಬೈ: ಕಿರುತೆರೆ ನಟ ಇಮ್ರಾನ್ ನಜೀರ್ ಖಾನ್ ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಯೊಂದನ್ನು ಹೇಳಿದ್ದಾರೆ. ಅಫ್ತಾಬ್ ಪೂನಾವಾಲಾನಿಂದ ಹತ್ಯೆಗೀಡಾದ ಶ್ರದ್ಧಾ, ಕಳೆದ ಎರಡು ವರ್ಷಗಳ ಹಿಂದೆ ಗೆಳೆಯ ಮಾದಕ ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಳಂತೆ. ಅಲ್ಲದೇ ಆತನನ್ನು ಅದರಿಂದ ದೂರ ಮಾಡಲು ಸಹಾಯವನ್ನು ಶ್ರದ್ಧಾ ಕೇಳಿದ್ದಳು ಎಂದು ನಟ ಇಮ್ರಾನ್​ ವಿಡಿಯೋದಲ್ಲಿ ಹೇಳಿದ್ದಾರೆ.

ಕಿರುತೆರೆ ನಟ ಇಮ್ರಾನ್ ನಜೀರ್ ಖಾನ್​​

ಇಮ್ರಾನ್​ ನಜೀರ್​​ ಖಾನ್ ಅವರು ಮುಂಬೈನಿಂದ ಕಾಶ್ಮೀರದ ಕುಪ್ವಾರದ ಚೌಕಿಬಾಲ್‌ನಲ್ಲಿರುವ ಅವರ ಮನೆಗೆ ತೆರಳಿದ್ದರಂತೆ. ಹಾಗಾಗಿ ಮುಂಬೈನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವರಿಗೆ ತಿಳಿದಿರಲಿಲ್ಲವಂತೆ. ಸೋಮವಾರ ಬೆಳಗ್ಗೆ ಮುಂಬೈಗೆ ಹಿಂತಿರುಗಿದ ಅವರು, ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಶ್ರದ್ಧಾ ವಾಲ್ಕರ್​ ಸಾವಿನ ಸುದ್ದಿಯನ್ನು ನೋಡಿ ಆಘಾತಕ್ಕೊಳಗಾದ್ದಾರೆ. ಅಲ್ಲದೇ ಶ್ರದ್ಧಾ ನನಗೆ ಪರಿಚಿತಳು, ಅವಳು ನರಕದ ಜೀವನವನ್ನು ನಡೆಸುತ್ತಿರುವುದಾಗಿ ಫೆ. 2021ರಲ್ಲಿ ಹೇಳಿದ್ದಳು ಎಂದು ನಜೀರ್ ಖಾನ್ ಹೇಳಿದ್ದಾರೆ.

ಶ್ರದ್ಧಾ ಪ್ರಕಾರ, ಆಕೆಯ ಗೆಳೆಯ ಮಾದಕ ವ್ಯಸನಿಯಾಗಿದ್ದು, ಸುಮಾರು 2-3 ವರ್ಷಗಳಿಂದ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ. ಅಫ್ತಾಬ್‌ನನ್ನು ಪುನರ್ವಸತಿ ಕೇಂದ್ರ ಅಥವಾ ರಿಹ್ಯಾಬ್‌ಗೆ ಕಳಿಸುವ ಬಗ್ಗೆ ಆಕೆ ನನ್ನ ಬಳಿ ಹೇಳಿದ್ದಳು. ಇದಕ್ಕೆ ಸಹಾಯ ಮಾಡುವಂತೆ ಸಹ ಕೇಳಿಕೊಂಡಿದ್ದಳು. ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಹಲವಾರು ಯುವಕರಿಗೆ ಸಹಾಯ ಮಾಡಿದ ಅವರು, ಶ್ರದ್ಧಾಗೂ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಅವರು ದೆಹಲಿಗೆ ತೆರಳಿದ ನಂತರ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

ಇದನ್ನು ಓದಿ:ಮನೆಯಲ್ಲಿ ಮಹಿಳೆ ಕೊಲೆ: ವರದಕ್ಷಿಣೆಗಾಗಿ ಪತಿಯಿಂದಲೇ ಕೃತ್ಯ ಶಂಕೆ

ಇಮ್ರಾನ್ ನಜೀರ್ ಖಾನ್ ಗತ್ಬಂಧನ್ (ಕಲರ್ಸ್ ಹಿಂದಿ), ಅಲ್ಲಾದೀನ್ - ನಾಮ್ ತೋ ಸುನಾ ಹೋಗಾ (ಸಬ್ ಟಿವಿ), ಮರಿಯಮ್ ಖಾನ್ ರಿಪೋರ್ಟಿಂಗ್ ಲೈವ್ (ಸ್ಟಾರ್ ಪ್ಲಸ್), ಹಮಾರಿ ಬಹು ಸಿಲ್ಕ್ (ಝೀ ಟಿವಿ), ಮೇಡಮ್ ಸರ್ (ಸಬ್ ಟಿವಿ) ಇತರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.