ನವದೆಹಲಿ: ಟರ್ಕಿ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಬಯಸಿದ್ದು, ಕಾಬೂಲ್‌ನಲ್ಲಿ ಟರ್ಕಿ ಪಾಕಿಸ್ತಾನದ ಹಿಡಿತ ಬಿಗಿಯಾಗುತ್ತಿದೆ. ಇದು ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ.
ವಿರೋಧಿಗಳಲ್ಲದಿದ್ದರೂ ಭಾರತವು ಟರ್ಕಿಯೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ. ಪಾಕಿಸ್ತಾನದ ಬೆಂಬಲದೊಂದಿಗೆ ಕಾಬೂಲ್‌ನಲ್ಲಿ ಟರ್ಕಿ ಹಿಡಿತ ಸಾಧಿಸಲು ಮುಂದಾಗಿರುವುದು ಭಾರತದ ಪ್ರಭಾವ ತಗ್ಗಿಸುವುದು ಖಂಡಿತ ಎನ್ನಲಾಗುತ್ತಿದೆ. ಕಾಶ್ಮೀರದ ವಿಷಯದಲ್ಲಿ ಟರ್ಕಿಯ ನಿಲುವು ಭಾರತದ ವಿರುದ್ಧವಾಗಿದೆ.
ಫೆಬ್ರವರಿ 14, 2020 ರಂದು ಟರ್ಕಿ ಅಧ್ಯಕ್ಷ ಎರ್ಡೊಗನ್ ಪಾಕಿಸ್ತಾನದ ಅಸೆಂಬ್ಲಿ ಮತ್ತು ಸೆನೆಟ್ನ ಜಂಟಿ ಸಂಸತ್ತಿನ ಸಭೆಯಲ್ಲಿ ಮಾತನಾಡಿ, ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತೇವೆ ಎಂದಿದ್ದರು. ಈ ಬೆಳವಣಿಗೆಗಳು ಅಫ್ಘಾನಿಸ್ತಾನದೊಂದಿದೆ ಉತ್ತಮ ಸಂಬಂಧ ಹೊಂದಲು ಹೊಡೆತ ಕೊಡಲಿದೆ ಎನ್ನಲಾಗಿದೆ.
ಇನ್ನು ಭಯೋತ್ಪಾದನೆ ನಿಗ್ರಹ, ಕತಾರ್‌ನ ವಿಶೇಷ ರಾಯಭಾರಿ ಮುಟ್ಲಾಕ್ ಬಿನ್ ಮಜೇದ್ ಅಲ್ ಕಹ್ತಾನಿ, ಭಾರತೀಯ ಅಧಿಕಾರಿಗಳು ಇತ್ತೀಚೆಗೆ ಕತಾರ್‌ನಲ್ಲಿ ತಾಲಿಬಾನ್ ಪ್ರತಿನಿಧಿಗಳನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಬೂಲ್‌ನಲ್ಲಿ ಬಲವಾದ ಟರ್ಕಿ-ಪಾಕಿಸ್ತಾನ ಸಂಬಂಧ ಭಾರತಕ್ಕೆ ಹಿನ್ನಡೆಯಾಗಲಿದೆ ಎಂಬುದು ಹಲವರ ಮಾತು. ಇದರರ್ಥ ಪಾಕಿಸ್ತಾನವು ಇನ್ಮುಂದೆ ಅಫ್ಘಾನಿಸ್ತಾನ ಮತ್ತು ಭಾರತದೊಂದಿಗೆ ಎರಡು ರಂಗಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಬದಲಾಗಿ ಭಾರತದ ಗಡಿಗೆ ಬರುವ ಅನೇಕ ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಓದಿ:ಸರ್ಕಾರಿ ಸಿಬ್ಬಂದಿ ಲಸಿಕೆ ಪಡೆಯದಿದ್ದರೆ No Salary: ಡಿಸಿ ಖಡಕ್ ವಾರ್ನಿಂಗ್