ತಿರುಪತಿ(ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನ, ದೇವರ ದರ್ಶನಕ್ಕಾಗಿ ಸೆಪ್ಟೆಂಬರ್ ತಿಂಗಳಿಗೆ ಸಂಬಂಧಿಸಿದ ಆರ್ಜಿತ ಸೇವಾ ಟಿಕೆಟ್‌ಗಳ ಆನ್‌ಲೈನ್ ಕೋಟಾವನ್ನು ಬಿಡುಗಡೆ ಮಾಡಿದೆ. ಸುಪ್ರಭಾತ, ತೋಮಾಲ ಸೇವೆ, ಅರ್ಚನ ಮತ್ತು ಅಷ್ಟದಳ ಪಾದ ಪದ್ಮಾರಾಧನೆ ಸೇವಾ ಟಿಕೆಟ್‌ಗಳನ್ನು ಲಕ್ಕಿ ಡಿಪ್‌ನೊಂದಿಗೆ ನಿಗದಿಪಡಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.
ಜೂನ್ 27 ರಿಂದ ಜೂನ್ 29 ರವರೆಗೆ ಆನ್‌ಲೈನ್ ಬುಕಿಂಗ್‌ಗಾಗಿ ನೋಂದಾಯಿಸಿಕೊಳ್ಳಲು ಟಿಟಿಡಿ ಅವಕಾಶ ನೀಡಿದ್ದು, ಜೂನ್ 29 ರಂದು ಲಕ್ಕಿ ಡಿಪ್ ಟಿಕೆಟ್‌ಗಳನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸಾಮಾನ್ಯ ಆರ್ಜಿತ ಸೇವೆಗಳಾದ ಕಲ್ಯಾಣೋತ್ಸವ, ಉಂಜಾನ್ ಸೇವೆ, ಆರ್ಜಿತ ಬ್ರಹ್ಮೋತ್ಸವಂ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳನ್ನು ಕಾಯ್ದಿರಿಸಲು ಸಿದ್ಧರಿರುವ ಭಕ್ತರು ಇಂದು ಸಂಜೆ 4 ರಿಂದ ಆನ್‌ಲೈನ್ ಮೂಲಕ ಫಸ್ಟ್-ಇನ್ ಫಸ್ಟ್-ಔಟ್ ಆಧಾರದ ಮೇಲೆ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
ಇದನ್ನೂ ಓದಿ : ಮಹಾಕಾಳಿ ಮಾತಾ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ: ಪ್ರಧಾನಿ ಮೋದಿ ಭಾಗಿ