ETV Bharat / bharat

TSPSC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಈವರೆಗೆ ಸೋರಿಕೆ ಆಗಿರುವ ಪತ್ರಿಕೆಗಳೆಷ್ಟು?

author img

By

Published : Mar 18, 2023, 11:23 AM IST

ಟಿಎಸ್‌ಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ - ಕಳೆದ ವರ್ಷದಿಂದ ನಡೆದ ವಿವಿಧ ಪರೀಕ್ಷೆಗಳ 15 ಪ್ರಶ್ನೆ ಪತ್ರಿಕೆಗಳು ಆರೋಪಿಗಳ ಪೆನ್ ಡ್ರೈವ್‌ನಲ್ಲಿ ಸಂಗ್ರಹ - ಉನ್ನತ ಮೂಲಗಳಿಂದ ಮಾಹಿತಿ.

TSPSC question papers leak
ಟಿಎಸ್‌ಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ

ಹೈದರಾಬಾದ್: ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ (ಟಿಎಸ್‌ಪಿಎಸ್‌ಸಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತು ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ಅನೇಕ ವಿಷಯಗಳು ಬೆಳಕಿಗೆ ಬಂದಿವೆ. ಟಿಎಸ್‌ಪಿಎಸ್‌ಸಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಸ್ಟಂ ವಿಶ್ಲೇಷಕ ರಾಜಶೇಖರ್ ಮತ್ತು ಕಾರ್ಯದರ್ಶಿ ಪಿ ಎ ಪ್ರವೀಣ್ ಅವರ ಜೋಡಿ ಅಕ್ಟೋಬರ್‌ನಲ್ಲಿ ಈ ಹಗರಣವನ್ನು ಪ್ರಾರಂಭಿಸಿದೆ. ಈ ಉದ್ದೇಶಕ್ಕಾಗಿ ಇಡೀ ಕಂಪ್ಯೂಟರ್ ವ್ಯವಸ್ಥೆಯನ್ನು ಅವರ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ತನಿಖಾ ಆಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಆರೋಪಿ ಪುಲಿದಿಂಡಿ ಪ್ರವೀಣ್ 15 ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆಗಳನ್ನು ಪೆನ್ ಡ್ರೈವ್‌ನಲ್ಲಿ ಸಂಗ್ರಹಿಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳಿಂದ ಈ ಅವ್ಯವಹಾರ ನಡೆಯುತ್ತಿದ್ದರೂ ಯಾರೂ ಪತ್ತೆ ಹಚ್ಚದಿರುವುದು ಗಮನಾರ್ಹ.

ಪ್ರಕರಣ ಸಂಬಂಧ 9 ಮಂದಿಯನ್ನು ಬಂಧಿಸಿಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಹೆಚ್ಚುವರಿ ಅಪರಾಧ ವಿಭಾಗದ ಎ.ಆರ್ ಶ್ರೀನಿವಾಸ್ ನೇತೃತ್ವದಲ್ಲಿ ಸರ್ಕಾರ ಎಸ್‌ಐಟಿ ರಚಿಸಿದೆ. ಕಳೆದ ವರ್ಷದಿಂದ ನಡೆದ ವಿವಿಧ ಪರೀಕ್ಷೆಗಳ 15 ಪ್ರಶ್ನೆಪತ್ರಿಕೆಗಳನ್ನು ಆರೋಪಿಗಳ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿರುವುದು ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಶ್ನೆಪತ್ರಿಕೆಗಳನ್ನು ಕೆಲವು ಗೌಪ್ಯ ಮೂಲದಿಂದ ತೆಗೆದುಕೊಳ್ಳಲಾಗಿದೆ ಮತ್ತು ಕಚ್ಚಾ ರೂಪದಲ್ಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. "ಪತ್ರಿಕೆಗಳು ಮೊದಲ ಪುಟವನ್ನು ಹೊಂದಿಲ್ಲ. ಇದು ಸಾಮಾನ್ಯವಾಗಿ ಸೂಚನೆಗಳನ್ನು ಒಳಗೊಂಡಿರುತ್ತದೆ ಎಂದು ಮೂಲವು ಹೇಳಿದೆ. ಪ್ರವೀಣ್ ಅವರ ಪೆನ್ ಡ್ರೈವ್‌ನಲ್ಲಿ ಈ ಕೆಳಗಿನ ಪ್ರಶ್ನೆ ಪತ್ರಿಕೆಗಳು ಕಂಡು ಬಂದಿವೆ.

-ಸಾಮಾನ್ಯ ಅಧ್ಯಯನ ಪತ್ರಿಕೆ (16-10-2022 ರಂದು ನಡೆದ ಪರೀಕ್ಷೆ)

-AEE ಸಿವಿಲ್ ಇಂಜಿನಿಯರಿಂಗ್ ಪೇಪರ್ (22-01-2023)

- AEE ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪೇಪರ್ (22-01-2023)

-AEE ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೇಪರ್ (22-01-2023)

- DAO ಜನರಲ್ ಸ್ಟಡೀಸ್ ಪೇಪರ್ 1 (26-02-2023)

- DAO ಗಣಿತ (26-02-2023)

- ಜನರಲ್ ಸ್ಟಡೀಸ್ ಡಿಪ್ಲೊಮಾ AE ಪೇಪರ್ 1 (05-03-2023)

- ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ AE ಪೇಪರ್ (05-03-2023)

- ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ AE ಪೇಪರ್ (05-03-2023)

- ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ AE ಪೇಪರ್ (05-03-2023)

- ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ AE ಪೇಪರ್ 2 (05-03-2023)

- ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ AE ಪೇಪರ್ 2 (05-03-2023)

- TPBO ವೊಕೇಶನಲ್ ಜನರಲ್ ಸ್ಟಡೀಸ್ ಪೇಪರ್ 1 (12-03-2023 - TSPSC ಪರೀಕ್ಷೆಯನ್ನು ಮುಂದೂಡಿದೆ)

- TPBO ಮಧ್ಯಂತರ ವೊಕೇಶನಲ್ ಪೇಪರ್ 2 12-03-2023 (ಮುಂದೂಡಲಾಗಿದೆ)

- ಜೂನಿಯರ್ ಉಪನ್ಯಾಸಕರ ಪ್ರಶ್ನೆ ಪತ್ರಿಕೆಗಳು ಜೂನ್/ಜುಲೈ/2023 (ತಾತ್ಕಾಲಿಕ).

ಆಯೋಗ ನಡೆಸುವ ಎಲ್ಲ ಪರೀಕ್ಷೆಗಳ ಮೇಲೂ ಪ್ರವೀಣ್ ಮತ್ತು ರಾಜಶೇಖರ್ ಕಣ್ಣಿಟ್ಟಿದ್ದರಂತೆ. ಸುಮಾರು ಒಂದು ವರ್ಷದ ಹಿಂದೆ, ಟಿಎಸ್‌ಪಿಎಸ್‌ಸಿ ಕಚೇರಿಯಲ್ಲಿನ ಕಂಪ್ಯೂಟರ್ ವ್ಯವಸ್ಥೆ ಮೇಲ್ದರ್ಜೆಗೇರಿಸಲಾಗಿದೆ. ಆಯೋಗವು ವಿಶೇಷ ಗೌಪ್ಯ ವಿಭಾಗವನ್ನು ಹೊಂದಿದೆ. ಇದು ಸೂಪರಿಂಟೆಂಡೆಂಟ್ ಮಟ್ಟದ ಅಧಿಕಾರಿಯ ಅಡಿ ಕಾರ್ಯ ನಿರ್ವಹಿಸುತ್ತದೆ. ಕಾರ್ಯದರ್ಶಿ ಮತ್ತು ಅಧ್ಯಕ್ಷರು ಹಾಗೆ ಮಾಡುವ ಅಧಿಕಾರ ಹೊಂದಿರುತ್ತಾರೆ.

ಪರೀಕ್ಷೆಗಳಿಗೆ ಸಿದ್ಧಪಡಿಸಲಾದ ಪ್ರಶ್ನೆಪತ್ರಿಕೆಗಳನ್ನು ಗೌಪ್ಯ ವಿಭಾಗದಲ್ಲಿ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇದು ರಾಜಶೇಖರ್‌ಗೆ ಗೊತ್ತಿತ್ತು. ಅದರೊಂದಿಗೆ, ಅವರು ಕಂಪ್ಯೂಟರ್ ನೆಟ್‌ವರ್ಕ್ ಅಪ್‌ಗ್ರೇಡ್ ಹೆಸರಿನಲ್ಲಿ ಡೈನಾಮಿಕ್ ಐಪಿಯನ್ನು ಸ್ಟ್ಯಾಟಿಕ್ ಐಪಿಗೆ ಬದಲಾಯಿಸಿದರು. ಅಂದರೆ ತನ್ನ ಕಂಪ್ಯೂಟರ್ ಮೂಲಕ ಗೌಪ್ಯ ವಿಭಾಗದಲ್ಲಿ ಕಂಪ್ಯೂಟರ್​ ಅನ್ನು ನಿಯಂತ್ರಿಸುವುದನ್ನು ಸಾಧ್ಯವಾಗಿಸಿದ್ದಾರೆ. ಈ ಕ್ರಮದಲ್ಲಿ ಅಕ್ಟೋಬರ್‌ನಲ್ಲಿಯೇ ಗ್ರೂಪ್-1 ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕದ್ದಿದ್ದಾನೆ.

ಅಕ್ಟೋಬರ್‌ನಲ್ಲಿಯೇ ಪ್ರಶ್ನೆಪತ್ರಿಕೆ ಕಳ್ಳತನ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಪ್ರವೀಣ್ ವಿಚಾರ ಬೆಳಕಿಗೆ ಬಂದಿದೆ. ಸ್ನೇಹಿತೆ ರೇಣುಕಾ ಅವರ ಮನವಿ ಮೇರೆಗೆ ಸ್ನೇಹಿತ ರಾಜಶೇಖರ್ ಜತೆಗೂಡಿ ಎಇ ಪ್ರಶ್ನೆ ಪತ್ರಿಕೆಯನ್ನು ಕದ್ದೊಯ್ದಿದ್ದಾರೆ. ಕಚೇರಿಯ ಉದ್ಯೋಗಿಯೊಬ್ಬರ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಕದ್ದು, ಫೆಬ್ರವರಿಯಲ್ಲಿ ನಾಲ್ಕು ಪೆನ್ ಡ್ರೈವ್‌ಗಳಲ್ಲಿ ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದ ಫೋಲ್ಡರ್ ಅನ್ನು ನಕಲಿಸಲು ಬಳಸುತ್ತಿದ್ದರು ಎಂದು ರಾಜಶೇಖರ್ ಹೇಳಿದ್ದಾರೆ. ಆದರೆ ಅಕ್ಟೋಬರ್‌ನಲ್ಲಿಯೇ ಪ್ರಶ್ನೆಪತ್ರಿಕೆಗಳು ಕಳ್ಳತನವಾಗಿರುವುದು ಎಸ್‌ಐಟಿ ತನಿಖೆಯಿಂದ ತಿಳಿದು ಬಂದಿದೆ.

ಗ್ರೂಪ್-1 ಪರೀಕ್ಷೆಯು ಅಕ್ಟೋಬರ್ 16 ರಂದು ನಡೆಯಿತು. ಸ್ವತಃ ಪರೀಕ್ಷೆ ಬರೆದ ಪ್ರವೀಣ್ ಉತ್ತಮ ಅಂಕ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಆ ಅನುಮಾನದಿಂದ ಆಳವಾಗಿ ತನಿಖೆ ನಡೆಸಲಾಗಿದೆ. ರಾಜಶೇಖರ್ ಮತ್ತು ಪ್ರವೀಣ್ ಅವರು ಅಕ್ಟೋಬರ್ ತಿಂಗಳಿನಿಂದ ಆಯೋಗದ ಕಂಪ್ಯೂಟರ್ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ದೃಢಪಟ್ಟಿದೆ.

ಗ್ರೂಪ್-1 ಪರೀಕ್ಷೆಯಲ್ಲಿ 100ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲರನ್ನೂ ಕರೆಸಿ ವಿಚಾರಣೆ ನಡೆಸಲಾಗಿದೆ. ಅಲ್ಲದೇ ಪ್ರವೀಣ್ ಮತ್ತು ರಾಜಶೇಖರ್ ಅವರ ಫೋನ್ ಡೇಟಾ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಎಲ್ಲ ಅಭ್ಯರ್ಥಿಗಳು ವಿಚಾರಣೆಗೆ ಅರ್ಹರಾಗಿರುತ್ತಾರೆ. ಮುಖ್ಯವಾಗಿ ಪ್ರವೀಣ್ ಮತ್ತು ರಾಜಶೇಖರ್ ಅವರಿಂದ ಯಾರಿಗಾದರೂ ಫೋನ್ ಕರೆಗಳು ಹೋಗಿರುವುದು ದೃಢಪಟ್ಟರೆ ಅಂತಹವರನ್ನು ಇನ್ನಷ್ಟು ಕೂಲಂಕಷವಾಗಿ ವಿಚಾರಣೆ ನಡೆಸಲಾಗುವುದು. ಈಗಾಗಲೇ ನಾಲ್ಕು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಆಯೋಗ ದೃಢಪಡಿಸಿದೆ.

ಇದನ್ನೂ ಓದಿ: TSPSC ಪ್ರಶ್ನೆ ಪತ್ರಿಕೆಗಳ ಸೋರಿಕೆ ಕೇಸ್​: ಅಭ್ಯರ್ಥಿಗಳೊಂದಿಗೆ ಡೀಲ್​ ಮಾಡಿದ್ದ ಶಿಕ್ಷಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.