ETV Bharat / bharat

ಋತುಗಳ ಬದಲಾವಣೆ ಸಮಯದಲ್ಲಿ ಫಿಟ್ ಆಗಿರಲು ಈ ಸರಳ ವಿಧಾನಗಳನ್ನ ಅನುಸರಿಸಿ!

ಋತುಗಳ ಬದಲಾವಣೆಯ ಸಮಯದಲ್ಲಿ ಫಿಟ್ ಆಗಿರಲು ಕೆಲವು ಸಲಹೆಗಳು ಇಲ್ಲಿವೆ.

ಫಿಟ್ ಆಗಿರಲು ಈ ಸರಳ ವಿಧಾನ
ಫಿಟ್ ಆಗಿರಲು ಈ ಸರಳ ವಿಧಾನ
author img

By

Published : Apr 3, 2023, 4:35 PM IST

ದಿನದಲ್ಲಿ ಕೊಂಚ ಸಮಯ ವಿಶ್ರಾಂತಿ
ದಿನದಲ್ಲಿ ಕೊಂಚ ಸಮಯ ವಿಶ್ರಾಂತಿ

ಹೈದರಾಬಾದ್: ಋತುಗಳ ಬದಲಾವಣೆಯಿಂದಾಗಿ ಮನುಷ್ಯರಲ್ಲಿ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ಅನಿರೀಕ್ಷಿತ ಮಳೆ, ತಾಪಮಾನ ಬದಲಾವಣೆ, ಆರ್ದ್ರತೆ ಎಲ್ಲವೂ ಋತುಮಾನದ ಕಾಯಿಲೆಗಳನ್ನು ಆಹ್ವಾನಿಸಿ, ಅಸ್ವಸ್ಥತೆಗೆ ಕೊಡುಗೆ ನೀಡುತ್ತದೆ.

ತಾಜಾ ಹಣ್ಣಿನ ಜ್ಯೂಸ್ ಸೇವನೆ
ತಾಜಾ ಹಣ್ಣಿನ ಜ್ಯೂಸ್ ಸೇವನೆ

ಫಿಟ್ ಆಗಿರಲು ದಿನಚರಿಯನ್ನು ಅನುಸರಿಸುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ. ಆದರೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಆದರೆ, ನೀವು ನಿತ್ಯ ಜೀವನದಲ್ಲಿ ಕೈಗೊಳ್ಳಬಹುದಾದ ಕೆಲವೊಂದು ಕ್ರಮಗಳು ಈ ಕೆಳಗಿನಂತಿವೆ.

ನಿಯಮಿತವಾಗಿ ನೀರನ್ನು ಕುಡಿಯುವುದು
ನಿಯಮಿತವಾಗಿ ನೀರನ್ನು ಕುಡಿಯುವುದು

ನಿಯಮಿತವಾಗಿ ನೀರನ್ನು ಕುಡಿಯುವುದು: ಕುಡಿಯುವ ನೀರಿಗೆ ಪರ್ಯಾಯವಾದ ದ್ರಾವಣವಿಲ್ಲ. ಇದು ಮಾನ್ಸೂನ್ ಆಗಿರಲಿ, ಬೇಸಿಗೆಯಲ್ಲಿರಲಿ ಅಥವಾ ಇನ್ನಾವುದೇ ಸೀಸನ್ ಆಗಿರಲಿ, ನಿತ್ಯವೂ 2.7 ಲೀಟರ್ ನೀರು ಕುಡಿಯುವುದನ್ನು ರೂಢಿಸಿಕೊಳ್ಳುವುದು ಉತ್ತಮ.

ಮುಂಜಾನೆ ಸಮಯದಲ್ಲಿ ಓಡುವುದು
ಮುಂಜಾನೆ ಸಮಯದಲ್ಲಿ ಓಡುವುದು

ವ್ಯಾಯಾಮಕ್ಕೆ ಸಮಯ ಮೀಸಲಿಡಿ: ನೀವು ಎಷ್ಟೇ ಕಾರ್ಯನಿರತರಾಗಿದ್ದರೂ, ಉಚಿತ ವ್ಯಾಯಾಮಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಉತ್ತಮ ಅಭ್ಯಾಸ. ನಿತ್ಯ ನಡೆಯುವುದು ಆರೋಗ್ಯಕ್ಕೆ ಹೆಚ್ಚು ಉತ್ತಮ ಮಾದರಿ. ನಿಮಗೆ ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೂ, ಕೆಲವು ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇದರಿಂದ ಆರೋಗ್ಯಕರ ಬದುಕು ನಿಮ್ಮದಾಗಲಿದೆ.

ಕಾಲೋಚಿತ ಆಹಾರ ಮತ್ತು ಹಣ್ಣುಗಳನ್ನು ತಿನ್ನುವುದು ಕ್ಷೇಮಕರ: ನೀವು ಅಡುಗೆ ಮಾಡಲು ಇಷ್ಟಪಟ್ಟರೆ, ಕಾಲೋಚಿತ ಆಹಾರಗಳ ಇತ್ತೀಚಿನ ಲಭ್ಯತೆಯು ನಿಮಗೆ ಹೊಸ ಪಾಕವಿಧಾನಗಳನ್ನು ಮಾಡಲು ಸಹಾಯಕವಾಗಲಿದೆ. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವು ಯಾವಾಗಲೂ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ : ಭಾರತೀಯರ ಹೃದಯ ಸಮಸ್ಯೆಗೆ ಅಶುದ್ಧ ಇಂಧನ, ಫಾಸ್ಟ್​ ಫುಡ್ ಕಾರಣವಂತೆ​

ಔಷಧ ತೆಗೆದುಕೊಳ್ಳುವ ಮುನ್ನ ವೈದ್ಯರ ಸಂಪರ್ಕ: ಋತುವಿನ ಬದಲಾವಣೆ ಪ್ರಾರಂಭದಲ್ಲಿ ನೀವು ಶೀತ, ಅಲರ್ಜಿ ಅಥವಾ ಧೂಳು ಅಥವಾ ಇತರ ಕಾಯಿಲೆಗಳಿಗೆ ಗುರಿಯಾಗಿದ್ದರೆ, ದಯವಿಟ್ಟು ಅದರಿಂದ ಹೊರಬನ್ನಿ. ಆದರೆ, ಯಾವುದೇ ಔಷಧಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ : ಬೇಸಿಗೆ ತಾಪಮಾನದಿಂದ ತಂಪು ಪಡೆಯಲು ನಿಮ್ಮ ಬ್ಯಾಗ್​ನಲ್ಲಿರಲಿ ಈ ವಸ್ತುಗಳು

ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ವಿನಿಯೋಗಿಸಿ : ಆಧುನಿಕ ಜೀವನದಲ್ಲಿ ನಿತ್ಯವೂ ಒಂದಿಲ್ಲೊಂದು ಕೆಲಸಗಳು ಮನುಷ್ಯರನ್ನು ಒತ್ತಡದಲ್ಲಿ ಸಿಲುಕಿಸುತ್ತದೆ. ಇದರಿಂದಾಗಿ ಹಲವಾರು ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಕೆಲವೊಮ್ಮೆ ಕೆಲಸದ ಒತ್ತಡದಿಂದ ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಜರ್ಜರಿತನಾಗುತ್ತಾನೆ. ಬಿಡುವಿಲ್ಲದ ಕೆಲಸದ ನಡುವೆ ನಾವು ಸಾಮಾನ್ಯವಾಗಿ ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಲು ಮರೆಯುತ್ತೇವೆ.

ಶಿಸ್ತುಬದ್ಧ ಜೀವನವು ಆರೋಗ್ಯಕರ ಜೀವನಕ್ಕೆ ಪ್ರಮುಖವಾದ ಪರಿಹಾರದ ಮಾರ್ಗವಾಗಿದೆ. ಆದ್ದರಿಂದ, ಸರಿಯಾದ ದಿನಚರಿಯನ್ನು ಮಾಡಿ ಮತ್ತು ಸರಿಯಾದ ವಿಶ್ರಾಂತಿಗಾಗಿ ದಿನದಲ್ಲಿ ಸ್ವಲ್ಪ ಸಮಯವನ್ನಾದರೂ ವಿನಿಯೋಗಿಸಿ. ಇದರಿಂದ ನೀವು ರಿಲ್ಯಾಕ್ಸ್​ ಆಗುತ್ತೀರಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಿಸಲು ಹೆಚ್ಚಿನ ಸಾಮರ್ಥ್ಯ ಸಿಗುತ್ತದೆ.

ಇದನ್ನೂ ಓದಿ : ಬೇಸಿಗೆ ದಾಹ ತೀರಿಸಲು ಎಳನೀರು ಬೆಸ್ಟ್​; ದೇಹ ನಿರ್ಜಲೀಕರಣದಿಂದ ಪಾರು ಮಾಡುತ್ತೆ ಈ ಪಾನೀಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.