ETV Bharat / bharat

ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಿಯರ್ ಬಾಟಲಿಗಳು..

author img

By

Published : Jul 31, 2023, 6:19 PM IST

ತಮಿಳುನಾಡಿನ ತಿರುಪುರ್ ಜಿಲ್ಲೆಯ ಉತ್ತುಕುಳಿ ಬಳಿಯ ಪಲ್ಲಗೌಡಪಾಳ್ಯಂ ಹತ್ತಿರ ಸೋಮವಾರ ಬಿಯರ್ ಬಾಟಲಿಗಳ ಬಾಕ್ಸ್​ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ.

Truck overturn accident
ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಿಯರ್ ಬಾಟಲಿಗಳು

ತಿರುಪುರ್ (ತಮಿಳುನಾಡು): ತಿರುಪುರದಲ್ಲಿ ಸೋಮವಾರ ಲಾರಿಯೊಂದು ಪಲ್ಟಿ ಹೊಡೆದು ರಸ್ತೆಯಲ್ಲಿ ಬಿಯರ್ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇಲ್ಲಿನ ಜನರು ಬಿಯರ್ ಬಾಟಲಿಗಳನ್ನು ಎತ್ತಿಕೊಂಡು ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಲಾರಿಯ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ.

ನಿಯಂತ್ರಣ ತಪ್ಪಿ ಕಾರ್ಗೋ ಟ್ರಕ್ ಪಲ್ಟಿ: ಚೆಂಗಲ್ಪಟ್ಟು ಬಿಯರ್ ಕಂಪನಿಯಿಂದ 25,200 ಬಿಯರ್ ಬಾಟಲಿಗಳನ್ನು ಕಾರ್ಗೋ ಟ್ರಕ್‌ಗೆ ಲೋಡ್ ಮಾಡಲಾಗಿದೆ. ತಿರುಪುರ್ ಜಿಲ್ಲೆಯ ಉತ್ತುಕುಳಿ ಪಕ್ಕದ ಪಲ್ಲಗೌಡಪಾಳ್ಯಂ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬರುತ್ತಿತ್ತು. ಪೆರಂಬಲೂರು ಪ್ರದೇಶದ ಸೆಲ್ವಕುಮಾರ್ (40) ಎಂಬವರು ಲಾರಿಯನ್ನು ಚಲಾಯಿಸುತ್ತಿದ್ದರು. ಸೇಲಂ- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಪುರ್ ಜಿಲ್ಲೆಯ ಪಲ್ಲಗೌಡಪಾಳ್ಯಂ ಬಳಿ ಸಾಗುತ್ತಿದ್ದಾಗ ಬಸ್ಸೊಂದು ಲಾರಿಯನ್ನು ಓವರ್‌ಟೇಕ್ ಮಾಡಿದೆ. ಅನಿರೀಕ್ಷಿತವಾಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರ್ಗೋ ಟ್ರಕ್ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ.

ರಸ್ತೆಗೆ ಬಿದ್ದು 25,200 ಬಿಯರ್ ಬಾಟಲಿಗಳು: ಇದರಲ್ಲಿ ಲಾರಿಯಲ್ಲಿದ್ದ 25,200 ಬಿಯರ್ ಬಾಟಲಿಗಳು ರಸ್ತೆಗೆ ಬಿದ್ದು ಒಡೆದು ಚೆಲ್ಲಾಪಿಲ್ಲಿಯಾಗಿವೆ. ಅರ್ಧಕ್ಕಿಂತ ಹೆಚ್ಚು ಬಿಯರ್ ಬಾಟಲಿಗಳು ಒಡೆದು ಹೋಗಿವೆ. ಅಲ್ಲಿ ನೆರೆದಿದ್ದ ಜನರು, ಅಪಘಾತಕ್ಕೆ ಒಳಗಾಗಿದ್ದ ಲಾರಿಯಿಂದ ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಿಯರ್ ಬಾಟಲಿಗಳನ್ನು ಯಾರೂ ತೆಗೆದುಕೊಂಡು ಹೋಗದಂತೆ ಬ್ಯಾರಿಕೇಡ್ ಹಾಕಲಾಗಿತ್ತು. ಪೊಲೀಸರು ಬರುವವರೆಗೂ ನಾಗರಿಕರು ಯಾರೂ ಕೂಡಾ ಹೋಗದಂತೆ ತಡೆಯಲು ಬ್ಯಾರಿಕೇಡ್ ಹಾಕಲಾಗಿತ್ತು.

ಉತ್ತುಕುಳಿ ಪೊಲೀಸರು ಭೇಟಿ, ಪರಿಶೀಲನೆ: ಅಪಘಾತಗಳಲ್ಲಿ ಸಮಯದಲ್ಲಿ ಬಿದ್ದಿರುವ ತರಕಾರಿಗಳನ್ನು ತೆಗೆದುಕೊಂಡು ಹೋಗಿರುವ ಉದಾಹರಣೆಗಳು ಅನೇಕ ಇವೆ. ಅದೃಷ್ಟವಶಾತ್​ ರಸ್ತೆಯಲ್ಲಿ ಬಿದ್ದಿದ್ದ ಬಿಯರ್ ಬಾಟಲಿಗಳನ್ನು ಸಾರ್ವಜನಿಕರು ತೆಗೆದುಕೊಂಡು ಹೋಗಿಲ್ಲ. ಉತ್ತುಕುಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚೆಗಿನ ಘಟನೆ, ಟೊಮೆಟೊ ತುಂಬಿದ್ದ ಲಾರಿ ಪಲ್ಟಿ: ಟೊಮೆಟೊ ಕದಿಯಲು ಬಂದವರಿಗೆ ಶಾಕ್: ಟೊಮೆಟೊ ಲೋಡ್ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದ ಘಟನೆ ತೆಲಂಗಾಣದ ಕೋಮರಂ ಭೀಮ್ ಜಿಲ್ಲೆಯ ವಾಂಕಿಡಿ ಮಂಡಲದ ಬೆಂಡಾರ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ನಡೆದಿತ್ತು. ಟೊಮೆಟೊ ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿಯಾದ ವಿಷಯ ತಿಳಿದ ತಕ್ಷಣವೇ ಕೈಗೆ ಸಿಕ್ಕ ಚೀಲ​ಗಳನ್ನು ಹಿಡಿದು, ಟೊಮೆಟೊ ಆರಿಸಿಕೊಳ್ಳಲು ಸಮೀಪದ ಜನರು ಗುಂಪಾಗಿ ಘಟನಾ ಸ್ಥಳಕ್ಕೆ​ ಬಂದಿದ್ದರು. ಈ ವೇಳೆ, ಪೊಲೀಸರು ಲಾಠಿ ಹಿಡಿದು ಟೊಮೆಟೊ ಟ್ರಕ್‌ಗೆ ಕಾವಲು ಕಾಯುತ್ತಿರುವುದನ್ನು ಕಂಡ ಜನರು, ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್​ ಮರಳಿದ್ದರು.

ಲಾರಿ ಪಲ್ಟಿಯಾದಾಗ ವೇಳೆ, ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದನು. ತಡಮಾಡದೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರಿಗೆ ಹತ್ತಿರ ಸುಳಿಯದಂತೆ ಲಾರಿಗೆ ಕಾವಲು ಕಾಯುತ್ತ ನಿಂತಿದ್ದರು. ಬೇರೆ ವಾಹನಕ್ಕೆ ಟೊಮೆಟೊ ತುಂಬುವವರೆಗೂ ಪೊಲೀಸರು ರಕ್ಷಣೆ ಕೊಟ್ಟಿದ್ದರು. ವಾಹನದಲ್ಲಿ ಸುಮಾರು 11 ಟನ್ ಟೊಮೆಟೊ ಇತ್ತು. ಈ ಲಾರಿ ಅಪಘಾತದಲ್ಲಿ ಚಾಲಕನಿಗೆ ಚಿಕ್ಕ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದರು.

ಇದನ್ನೂ ಓದಿ: Lorry overturns: ತಿರುವಿನಲ್ಲಿ ಕಂದಕಕ್ಕೆ ಉರುಳಿದ ಲಾರಿ; ಮಂಗಳೂರಿನಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.