ETV Bharat / bharat

ಟಿಆರ್​ಪಿ ಹಗರಣ​; ಬಾರ್ಕ್​ ಮಾಜಿ ಸಿಇಒಗೆ 14 ದಿನ ನ್ಯಾಯಾಂಗ ಬಂಧನ - ಟಿಆರ್‌ಪಿ ಮಾರ್ಪಡಿಸುವಿಕೆ ಪ್ರಕರಣ

ಟಿಆರ್‌ಪಿ ಮಾರ್ಪಡಿಸುವಿಕೆ ಪ್ರಕರಣದಲ್ಲಿ ಬಾರ್ಕ್​ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರನ್ನು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

judicial
ನ್ಯಾಯಾಂಗ
author img

By

Published : Dec 30, 2020, 9:12 PM IST

ಮುಂಬೈ (ಮಹಾರಾಷ್ಟ್ರ): ಟಿಆರ್‌ಪಿ ಹಗರಣ ಪ್ರಕರಣದಲ್ಲಿ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿಯ (ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರನ್ನು ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂದನಕ್ಕೆ ಕಳುಹಿಸಿದೆ. ಅವರನ್ನು ಡಿಸೆಂಬರ್ 24 ರಂದು ಪುಣೆಯಲ್ಲಿ ಬಂಧಿಸಲಾಯಿತು.

ಟಿಆರ್‌ಪಿ ಬದಲಿಸಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಈ ಹಿಂದೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್‌ಚಂದಾನಿಯನ್ನು ಬಂಧಿಸಿದ್ದರು. ಬಳಿಕ ಅವರಿಗೆ ಜಾಮೀನು ನೀಡಲಾಯಿತು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಚಾನೆಲ್‌ನ ವಿತರಣಾ ಮುಖ್ಯಸ್ಥ ಮತ್ತು ಸಹಾಯಕ ಉಪಾಧ್ಯಕ್ಷ ಘನಶ್ಯಾಮ್​ ಸಿಂಗ್ ಅವರನ್ನು ಸಹ ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಮಾರುಕಟ್ಟೆ ಸಂಶೋಧನಾ ಕಂಪನಿಯ ಇಬ್ಬರು ಮಾಜಿ ಉದ್ಯೋಗಿಗಳು ಮತ್ತು ಎರಡು ಚಾನೆಲ್‌ಗಳ ಮಾಲೀಕರೊಂದಿಗೆ ಒಟ್ಟು ನಾಲ್ಕು ಜನರನ್ನು ಬಂಧಿಸಿದ್ದರು. ಇನ್ನು ಟಿಆರ್‌ಪಿ ಮಾರ್ಪಡಿಸುವಿಕೆ ಪ್ರಕರಣದಲ್ಲಿ ಪೊಲೀಸರು ಹಲವಾರು ಚಾನೆಲ್‌ಗಳನ್ನು ಸಹ ಹೆಸರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.