ETV Bharat / bharat

ತೆಲಿಯಮುರಾವನ್ನು ತನ್ನ ವನ್ಯಜೀವಿ ರಾಜಧಾನಿಯಾಗಿ ಘೋಷಿಸಲು ತ್ರಿಪುರ ನಿರ್ಧಾರ

ತ್ರಿಪುರ ಸರ್ಕಾರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅಪಾರ ಪ್ರಯತ್ನ ಮಾಡುತ್ತಿದೆ. ಮತ್ತು ಇಲ್ಲಿನ ಸಸ್ಯ ಮತ್ತು ಪ್ರಾಣಿಗಳು ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕಳೆದ ಮೂರು ವರ್ಷಗಳಲ್ಲಿ, ಪ್ರವಾಸಿಗರ ಗಣನೀಯ ಹೆಚ್ಚಳವು ಈಗಾಗಲೇ ಅದನ್ನು ಸಾಬೀತು ಪಡಿಸಿದೆ. ಇನ್ನು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಭಾಗವಾಗಿ, ತ್ರಿಪುರದ ಖೋವಾಯ್ ಜಿಲ್ಲೆಯ ವ್ಯಾಪ್ತಿಯ ತೆಲಿಯಮುರಾ ಉಪ ವಿಭಾಗವನ್ನು ವನ್ಯಜೀವಿ ರಾಜಧಾನಿಯಾಗಿ ಘೋಷಿಸಲು ಸರ್ಕಾರ ಸಜ್ಜಾಗಿದೆ.

author img

By

Published : May 3, 2021, 5:15 PM IST

tripura
tripura

ಅಗರ್ತಲ: ಪ್ರವಾಸೋದ್ಯಮವನ್ನು ಉತ್ತೇಜಿಸಲು ಮುಂದಾಗಿರುವ ತ್ರಿಪುರ ಸರ್ಕಾರ ಖೋವಾಯ್ ಜಿಲ್ಲೆಯ ವ್ಯಾಪ್ತಿಯ ತೆಲಿಯಮುರಾ ಉಪವಿಭಾಗವನ್ನು ವನ್ಯಜೀವಿ ರಾಜಧಾನಿಯಾಗಿ ಘೋಷಿಸಲು ನಿರ್ಧರಿಸಿದೆ.

ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಟ್ವಿಟರ್​ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತೆಲಿಯಮುರಾದ ಶ್ರೀಮಂತ ವನ್ಯಜೀವಿ ಸಂಪನ್ಮೂಲ ಮತ್ತು ನೈಸರ್ಗಿಕ ಸೌಂದರ್ಯ ಮತ್ತು ಅದರ ಸುತ್ತಮುತ್ತಲಿನ ಅರಣ್ಯ ಈ ರೀತಿಯ ಘೋಷಣೆಗೆ ಕಾರಣವಾಗಿದೆ ಎಂದು ತ್ರಿಪುರ ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಕಾಡನ್ನು ಪ್ರೀತಿಸುವ ಮತ್ತು ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಬಯಸುವ ಪ್ರವಾಸಿಗರು ಖಂಡಿತವಾಗಿಯೂ ತೆಲಿಯಮುರಾ ಪ್ರವಾಸ ಮಾಡಲು ಇಷ್ಟಪಡುತ್ತಾರೆ ಎಂದು ತ್ರಿಪುರದ ಪಿಸಿಸಿಎಫ್ ಡಿಕೆ ಶರ್ಮಾ ಹೇಳಿದರು.

ಕೋವಿಡ್ ನಿರ್ಬಂಧಗಳ ಹಿನ್ನೆಲೆ ಈಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅರಣ್ಯ ತ್ರಿಪುರದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಡಿ.ಕೆ.ಶರ್ಮಾ, ಕೇಂದ್ರ ಬೆಟ್ಟ ಶ್ರೇಣಿ - ಬಾರಾಮುರಾ ಮತ್ತು ಅಥರಮುರಾ ಬೆಟ್ಟಗಳ ನಡುವೆ ನೆಲೆಗೊಂಡಿರುವ ತೆಲಿಯಮುರಾ, ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯಗಳ ಹೊರಗಿನ ಪ್ರದೇಶದಲ್ಲಿ ವಿಶಿಷ್ಠ ಪ್ರಾಣಿಗಳನ್ನು ನೋಡುವ ಅವಕಾಶ ಒದಗಿಸುತ್ತದೆ.

ಕಲ್ಯಾಣಪುರದಲ್ಲಿನ ರಣ -ಹದ್ದುಗಳ ಸಂರಕ್ಷಣಾ ಕೇಂದ್ರಗಳ ಸ್ಥಾಪನೆ ಮತ್ತು (ಹಥೈ ಕೋಟರ್) ಬಾರಾಮುರಾ ಪಾರ್ಕ್‌ನಲ್ಲಿರುವ ಹಾರ್ನ್‌ಬಿಲ್ ಮತ್ತು ಖಾಸಿಯಮಂಗಲ್‌ನ ಬ್ಯಾಟ್ ವ್ಯೂ ಪಾಯಿಂಟ್ ಈಗಾಗಲೇ ತ್ರಿಪುರ ಜೀವವೈವಿಧ್ಯ ಮಂಡಳಿಯಿಂದ ಪ್ರಾರಂಭಿಸಲಾಗಿದೆ. ಗಿಲಾಟಾಲಿಯಲ್ಲಿ ಆನೆಗಳು ಮತ್ತು ತೆಲಿಯಮುರಾ ಉಪವಿಭಾಗದಲ್ಲಿ ಅವುಗಳ ಚಲನೆಯನ್ನೂ ಸಹ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇನ್ನು ಬಾರಮುರಾ ಜಲಪಾತವು ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸುತ್ತದೆ, ಅಲ್ಲಿ ಅಪಾರ ಬಗೆಯ ಸಸ್ಯವರ್ಗ ಕಾಣ ಬಹುದಾಗಿದೆ. ತೆಲಿಯಮುರಾದ ಪಶ್ಚಿಮ ದಿಕ್ಕಿನಲ್ಲಿ ರಾಜ್ಯದ ಅತಿದೊಡ್ಡ ವನ್ಯಜೀವಿ ಅಭಯಾರಣ್ಯವಿದೆ, ಅಂದರೆ ಗುಮ್ತಿ ವನ್ಯಜೀವಿ ಅಭಯಾರಣ್ಯ ಮತ್ತು ಉತ್ತರ ಭಾಗದಲ್ಲಿ ಮುಂಗಿಯಾಕಾಮಿ ಪ್ರಮುಖ ಆನೆ ಕಾರಿಡಾರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ ”ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.