ETV Bharat / bharat

ಶಾಲಾ ಬಾಲಕಿಯರಿಗೆ ಉಚಿತ ಸ್ಯಾನಿಟರಿ ನಾಪ್ಕಿನ್​ ನೀಡುವ ಪ್ರಸ್ತಾಪಕ್ಕೆ ತ್ರಿಪುರ ಸರ್ಕಾರ ಅನುಮೋದನೆ - ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ '

ಮಾರುಕಟ್ಟೆಯಲ್ಲಿ ಒಂದು ಪ್ಯಾಕ್​​ ನೈರ್ಮಲ್ಯ ಕರವಸ್ತ್ರಕ್ಕೆ 28 ರಿಂದ 35 ರೂಪಾಯಿದೆ. ಹೀಗಾಗಿ, ಮುಟ್ಟಿನ ಆರೋಗ್ಯ ಉತ್ತೇಜಿಸುವುದಕ್ಕಾಗಿ ರಾಜ್ಯದ ಶಾಲಾ ಬಾಲಕಿಯರಿಗೆ ಉಚಿತ ಸ್ಯಾನಿಟರಿ ನಾಪ್ಕಿನ್ ನೀಡುವ ಪ್ರಸ್ತಾಪವನ್ನು ತ್ರಿಪುರ ಸರ್ಕಾರ ಅನುಮೋದಿಸಿದೆ..

Chief Minister Biplab Kumar Deb
ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್
author img

By

Published : Jun 11, 2021, 1:43 PM IST

ಅಗರ್ತಲಾ (ತ್ರಿಪುರ) : 6 ರಿಂದ 12ನೇ ತರಗತಿ ಓದುತ್ತಿರುವ ಎಲ್ಲಾ ಬಾಲಕಿಯರಿಗೆ ಉಚಿತ ನೈರ್ಮಲ್ಯ ಕರವಸ್ತ್ರ (ಸ್ಯಾನಿಟರಿ ನಾಪ್ಕಿನ್)​ ನೀಡುವ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ತ್ರಿಪುರ ಶಿಕ್ಷಣ ಸಚಿವ ರತನ್ ಲಾಲ್ ನಾಥ್ ತಿಳಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಶಾಲಾ ಬಾಲಕಿಯರಿಗೆ ಉಚಿತ ನೈರ್ಮಲ್ಯ ಕರವಸ್ತ್ರ
ಬಿಪ್ಲಾಬ್ ಕುಮಾರ್ ದೇಬ್ ಟ್ವೀಟ್

ಮಾರುಕಟ್ಟೆಯಲ್ಲಿ ಒಂದು ಪ್ಯಾಕ್​​ ನೈರ್ಮಲ್ಯ ಕರವಸ್ತ್ರಕ್ಕೆ 28 ರಿಂದ 35 ರೂಪಾಯಿದೆ. ಹೀಗಾಗಿ, ಮುಟ್ಟಿನ ಆರೋಗ್ಯ ಉತ್ತೇಜಿಸುವುದಕ್ಕಾಗಿ ರಾಜ್ಯದ ಶಾಲಾ ಬಾಲಕಿಯರಿಗೆ ಉಚಿತ ಸ್ಯಾನಿಟರಿ ನಾಪ್ಕಿನ್ ನೀಡುವ ಪ್ರಸ್ತಾಪವನ್ನು ತ್ರಿಪುರ ಸರ್ಕಾರ ಅನುಮೋದಿಸಿದೆ.

ಮೂಲಗಳ ಪ್ರಕಾರ, ಈ ಯೋಜನೆಯ ಮೂಲಕ 4,940 ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 1.68 ಲಕ್ಷ ವಿದ್ಯಾರ್ಥಿಗಳು ಮತ್ತು 1,000 ಅನುದಾನಿತ ಶಾಲೆಗಳಿಗೆ ಅನುಕೂಲವಾಗಲಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ 3.61 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಸರ್ಕಾರಿ ಜೊತೆಗೆ ಖಾಸಗಿ ಶಾಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು.

ಓದಿ: ಕಮ್ಯುನಿಸಂ, ಲೆನಿನಿಸಂ ಸಹೋದರರ ನೇತೃತ್ವದಲ್ಲಿ ಮಮತಾ ಬ್ಯಾನರ್ಜಿ ಕೈಹಿಡಿದ ಸೋಸಿಯಲಿಸಂ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.