ETV Bharat / bharat

ತಾಯಿ, ಸಹೋದರಿ ಸೇರಿ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದ 15 ವರ್ಷದ ಬಾಲಕ! - ತ್ರಿಪುರಾದಲ್ಲಿ ಭೀಕರ ಕೊಲೆ ಪ್ರಕರಣ

ತ್ರಿಪುರಾದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದಲ್ಲಿ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಾಲಕ ಆನ್​ಲೈನ್​ ಗೇಮ್​​ ವ್ಯಸನಿಯಾಗಿದ್ದ ಎಂದು ತಿಳಿದು ಬಂದಿದೆ.

tripura-boy-kills-four-of-his-family-buries-bodies-in-septic-tank
ಒಂದೇ ಕುಟುಂಬದ ನಾಲ್ವರ ಕೊಚ್ಚಿ ಕೊಲೆ, ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವಗಳ ಪತ್ತೆ: 15 ವರ್ಷದ ಬಾಲಕನ ಸೆರೆ
author img

By

Published : Nov 6, 2022, 3:28 PM IST

ಅಗರ್ತಲಾ (ತ್ರಿಪುರಾ): ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. 15 ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಸಹೋದರಿ ಸೇರಿದಂತೆ ಕುಟುಂಬದ ನಾಲ್ವರನ್ನು ಕೊಂದು, ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವಗಳನ್ನು ಹೂತು ಹಾಕಿದ್ದಾನೆ.

ಧಲೈ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ದುರೈ ಶಿಬ್ ಬಾರಿ ಎಂಬ ಗ್ರಾಮದಲ್ಲಿ ಶನಿವಾರ ರಾತ್ರಿ ಘಟನೆ ಜರುಗಿದೆ. ಅಜ್ಜ ಬಾದಲ್ ದೇಬನಾಥ್ (70), ತಾಯಿ ಸಮಿತಾ ದೇಬನಾಥ್ (32), ಚಿಕ್ಕಮ್ಮ ರೇಖಾ ದೇಬ್ (42) ಮತ್ತು 10 ವರ್ಷದ ಬಾಲಕಿ ಕೊಲೆಯಾಗಿದ್ದಾರೆ. ಇಂದು ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ನಾಲ್ವರನ್ನು ಕೊಲೆ ಮಾಡಲಾಗಿದೆ. ಶವಗಳು ಮನೆಯ ಹಿಂದೆ ನಿರ್ಮಾಣ ಹಂತದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ದೊರೆತಿವೆ. ಬಸ್ ಕಂಡಕ್ಟರ್ ಆಗಿರುವ ಬಾಲಕನ ತಂದೆ ಹರದನ್ ದೇಬನಾಥ್ ಮಧ್ಯರಾತ್ರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಾಥಮಿಕ ಮಾಹಿತಿ ಪ್ರಕಾರ, ಈ ಕೊಲೆಗಳನ್ನು ಬಾಲಕನೇ ಮಾಡಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಆರೋಪಿ ಆನ್​ಲೈನ್​ ಗೇಮ್​​ ವ್ಯಸನಿಯಾಗಿದ್ದ. ಇದಕ್ಕಾಗಿ ಮನೆಯಲ್ಲಿ ಆಗಾಗ್ಗೆ ಹಣ ಕದಿಯುತ್ತಿದ್ದ ಎಂದು ದೇಬನಾಥ್ ದೂರಿನಲ್ಲಿ ತಿಳಿಸಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಸದ್ಯಕ್ಕೆ ಬಾಲಕನ ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ. ದುಷ್ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಹಾರ: ಮಾಟ ಮಂತ್ರದ ಆರೋಪ.. ಬೆಂಕಿ ಹಚ್ಚಿ ಮಹಿಳೆಯ ಸಜೀವದಹನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.