ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆಯೊಂದಿಗೆ ಗಮನ ಸೆಳೆಯುವ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಇದೀಗ ಹೊಸ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಸೀರೆ ಧರಿಸಿಕೊಂಡು ಫುಟ್ಬಾಲ್ ಅಂಗಳಕ್ಕೆ ಲಗ್ಗೆ ಹಾಕಿರುವ ಅವರು ಈ ಬಾರಿ ವಿಭಿನ್ನ ರೀತಿಯಲ್ಲಿ ಗಮನ ಸೆಳೆದರು.
ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಎಂಪಿ ಕಪ್ ಫುಟ್ಬಾಲ್ ಟೂರ್ನಿ 2022 ಆಯೋಜಿಸಲಾಗಿದ್ದು, ಉದ್ಘಾಟಕರಾಗಿ ಮಹುವಾ ಮೊಯಿತ್ರಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸೀರೆ ದಿರಿಸಿನಲ್ಲೇ ಫುಟ್ಬಾಲ್ ಆಡಿದರು. ಇದರ ಫೋಟೋವನ್ನು ಅವರು ಶೇರ್ ಮಾಡಿಕೊಂಡು, ನಾನು ಸೀರೆಯಲ್ಲೇ ಆಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಕೆಂಪು-ಕಿತ್ತಳೆ ಬಣ್ಣದ ಸೀರೆ ತೊಟ್ಟಿರುವ ಸಂಸದೆ ಸ್ಫೋರ್ಟ್ಸ್ ಶೂ ಹಾಗೂ ಸನ್ಗ್ಲಾಸ್ ಹಾಕಿಕೊಂಡಿದ್ದರು.
-
Fun moments from the final of the Krishnanagar MP Cup Tournament 2022.
— Mahua Moitra (@MahuaMoitra) September 19, 2022 " class="align-text-top noRightClick twitterSection" data="
And yes, I play in a saree. pic.twitter.com/BPHlb275WK
">Fun moments from the final of the Krishnanagar MP Cup Tournament 2022.
— Mahua Moitra (@MahuaMoitra) September 19, 2022
And yes, I play in a saree. pic.twitter.com/BPHlb275WKFun moments from the final of the Krishnanagar MP Cup Tournament 2022.
— Mahua Moitra (@MahuaMoitra) September 19, 2022
And yes, I play in a saree. pic.twitter.com/BPHlb275WK
ಇದನ್ನೂ ಓದಿ: 'ಗೋಮೂತ್ರ ಕುಡಿದು ಸಿದ್ಧರಾಗಿರಿ' ಎಂದಿದ್ದ TMC ಸಂಸದೆ ಲೋಕಸಭೆಯಲ್ಲಿ ಮಾತನಾಡಿದ್ದೇನು!?
ಸೀರೆ ಉಟ್ಟುಕೊಂಡು ಫುಟ್ಬಾಲ್ ಆಡ್ತಿರುವ ಫೋಟೋ ವೈರಲ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ತರಹೇವಾರಿ ಕಮೆಂಟ್‌ಗಳು ಬರುತ್ತಿವೆ. ಇವರು ಈ ಹಿಂದೆಯೂ ಸೀರೆಯುಟ್ಟು ಫುಟ್ಬಾಲ್ ಆಡಿದ್ದರು.
-
Ladies & gentlemen, bringing you Shri La. Ganeshan, honorable Governor of West Bengal. #DurandCup
— Debapriya Deb (@debapriya_deb) September 18, 2022 " class="align-text-top noRightClick twitterSection" data="
The high-headedness is audacious. Not expected of a respectable figure, @LaGanesan. A public apology surely won't be too much to ask for. #IndianFootballpic.twitter.com/aEq4Yq6a6R
">Ladies & gentlemen, bringing you Shri La. Ganeshan, honorable Governor of West Bengal. #DurandCup
— Debapriya Deb (@debapriya_deb) September 18, 2022
The high-headedness is audacious. Not expected of a respectable figure, @LaGanesan. A public apology surely won't be too much to ask for. #IndianFootballpic.twitter.com/aEq4Yq6a6RLadies & gentlemen, bringing you Shri La. Ganeshan, honorable Governor of West Bengal. #DurandCup
— Debapriya Deb (@debapriya_deb) September 18, 2022
The high-headedness is audacious. Not expected of a respectable figure, @LaGanesan. A public apology surely won't be too much to ask for. #IndianFootballpic.twitter.com/aEq4Yq6a6R
ಮತ್ತೊಂದೆಡೆ, ಡ್ಯುರಾಂಡ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸುನೀಲ್ ನೇತೃತ್ವದ ಬೆಂಗಳೂರು ಎಫ್ಸಿ ತಂಡ ಗೆಲುವು ದಾಖಲು ಮಾಡಿತ್ತು. ಪ್ರಶಸ್ತಿ ಸಮಾರಂಭದಲ್ಲಿ ಫೋಟೋಗೋಸ್ಕರ ಪಶ್ಚಿಮ ಬಂಗಾಳದ ರಾಜ್ಯಪಾಲರು ಸುನೀಲ್ ಛಟ್ರಿ ಅವರನ್ನು ತಳ್ಳಿರುವ ಘಟನೆಯೂ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗ್ತಿದೆ.