ETV Bharat / bharat

ಬಂಗಾಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಎಂಸಿ ಕ್ಲೀನ್‌ಸ್ವೀಪ್: ಖಾತೆ ತೆರೆಯಲು ವಿಪಕ್ಷ ಬಿಜೆಪಿ ವಿಫಲ

author img

By

Published : Mar 2, 2022, 3:10 PM IST

ಪಶ್ಚಿಮ ಬಂಗಾಳದ ಪುರಸಭೆ ಚುನಾವಣೆ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದು 108 ಪುರಸಭೆಗಳ ಪೈಕಿ 103ರಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲು ಮಾಡಿದೆ. ಆದ್ರೆ ಬಿಜೆಪಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗದೆ ಮುಖಭಂಗ ಅನುಭವಿಸಿದೆ.

West Bengal civic polls
West Bengal civic polls

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ)​, ಇದೀಗ ಸ್ಥಳೀಯ ಸಂಸ್ಥೆ ಎಲೆಕ್ಷನ್​​ನಲ್ಲೂ ಅಭೂತಪೂರ್ವ ಸಾಧನೆ ತೋರಿದೆ.

ಕಳೆದ ತಿಂಗಳ ಫೆ. 28ರಂದು 108 ಪುರಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಬಹಿರಂಗಗೊಳ್ಳುತ್ತಿದೆ. ಟಿಎಂಸಿ 103 ಪುರಸಭೆಗಳಲ್ಲಿ ಪ್ರಚಂಡ ಜಯಭೇರಿ ಪಡೆದಿದ್ದು, ಉಳಿದ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎರಡು ಪುರಸಭೆಗಳಲ್ಲಿ ಇತರೆ ಪಕ್ಷಗಳು ವಿಜಯ ಸಾಧಿಸಿವೆ. ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್​ ಖಾತೆ ತೆರೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ.

ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಮುರ್ಷಿದಾಬಾದ್​ ಜಿಲ್ಲೆಯ ತಾಹೆರ್​ಪುರ ಪುರಸಭೆಯಲ್ಲಿ ಎಡರಂಗ ಗೆಲುವು ದಾಖಲು ಮಾಡಿದ್ದು, ಉತ್ತರ ಬಂಗಾಳದ ಡಾರ್ಜಿಲಿಂಗ್​​ನಲ್ಲಿ ಸ್ಥಳೀಯ ಪಕ್ಷ ಹಿಲ್ ಪಾರ್ಟಿ ಜಯ ಸಾಧಿಸಿದೆ. ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷ ಬಿಜೆಪಿ ಪುರಸಭೆಯಲ್ಲಿ ಖಾತೆ ತೆರೆಯದೇ ಇರುವುದು ಇಲ್ಲಿ ಗಮನಾರ್ಹ.

  • Heart-felt gratitude to Ma-Mati-Manush for according yet another overwhelming mandate to us. Congratulations to the winning candidates of All India Trinamool Congress in the Municipal Elections. (1/2)

    — Mamata Banerjee (@MamataOfficial) March 2, 2022 " class="align-text-top noRightClick twitterSection" data=" ">

ಟಿಎಂಸಿ ಭರ್ಜರಿ ಗೆಲುವು ದಾಖಲು ಮಾಡುತ್ತಿದ್ದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ, ಸಂತಸ ವ್ಯಕ್ತಪಡಿಸಿದ್ದಾರೆ. ಗೆದ್ದಿರುವ ಪಕ್ಷದ ಎಲ್ಲ ಅಭ್ಯರ್ಥಿಗಳನ್ನೂ ಅವರು ಅಭಿನಂದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.