ಹೈದರಾಬಾದ್ : ಆನ್‌ಲೈನ್ ರಾಜಕೀಯ ಪ್ರಚಾರದ ತ್ವರಿತ ಏರಿಕೆಯು ಹೆಚ್ಚಿನ ರಾಜಕೀಯ ಹಣಕಾಸು ನಿಯಮಗಳನ್ನು ಬಳಕೆಯಲ್ಲಿಲ್ಲದಂತೆ ಮಾಡಿದ್ದು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಅಪಾಯಕ್ಕೆ ದೂಡಿದೆ.
ವಿಶ್ವಾದ್ಯಂತ 10 ದೇಶಗಳಲ್ಲಿ ಏಳು ರಾಷ್ಟ್ರಗಳು ಚುನಾವಣಾ ಪ್ರಚಾರದ ಖರ್ಚಿಗೆ ಯಾವುದೇ ನಿರ್ದಿಷ್ಟ ಮಿತಿಗಳನ್ನು ಹೊಂದಿಲ್ಲ. 10ರಲ್ಲಿ 6 ರಾಷ್ಟ್ರಗಳು ಆನ್‌ಲೈನ್ ರಾಜಕೀಯ ಜಾಹೀರಾತಿನಲ್ಲಿ ಯಾವುದೇ ನಿರ್ಬಂಧಗಳನ್ನು ಹೊಂದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಜಾಹೀರಾತುಗಳಿಗಾಗಿ ಫೇಸ್‌ಬುಕ್ ಮತ್ತು ಗೂಗಲ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಅವಿಭಾಜ್ಯ ವರ್ಚುವಲ್ ರಿಯಲ್ ಎಸ್ಟೇಟ್ ಆಗಿ ಮಾರ್ಪಟ್ಟಿವೆ.
ಆನ್‌ಲೈನ್ ರಾಜಕೀಯ ಜಾಹೀರಾತು ಎಂದರೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ ಮತದಾರರ ಅಥವಾ ರಾಜಕೀಯ ಕಚೇರಿ ಹೊಂದಿರುವವರ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಉದ್ದೇಶಿತ ಹಾಗೂ ಪಾವತಿಸಿದ ಡಿಜಿಟಲ್ ಸಂವಹನ ಎಂದು ವ್ಯಾಖ್ಯಾನಿಸಲಾಗಿದೆ. ಇದು ಇನ್ನೂ ಹೆಚ್ಚಿನದನ್ನು ಮಾಡುವ ಸಾಮರ್ಥ್ಯ ಹೊಂದಿದೆ.
ಇಂತಹ ಜಾಹೀರಾತುಗಳು ರಾಜಕೀಯ ಪ್ರಕ್ರಿಯೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ್ದು, ಮತದಾರರೊಂದಿಗೆ ಸಂಪರ್ಕ ಸಾಧಿಸಲು ರಾಜಕಾರಣಿಗಳಿಗೆ ಅವಕಾಶಗಳನ್ನು ತೆರೆದಿವೆ. ಆನ್‌ಲೈನ್ ಜಾಹೀರಾತುಗಳು ಕಡಿಮೆ ಸಂಪನ್ಮೂಲ ಹೊಂದಿರುವ ಕಡಿಮೆ ಸಾಂಪ್ರದಾಯಿಕ ರಾಜಕಾರಣಿಗಳಿಗೆ ಸಹಾಯ ಮಾಡುತ್ತವೆ ಮತ್ತು ಶ್ರೀಮಂತ ದಾನಿಗಳನ್ನು ಅವಲಂಬಿಸುವುದರಿಂದ ಮುಕ್ತಗೊಳಿಸುತ್ತದೆ.
ರಾಜಕೀಯ ಪ್ರಚಾರಗಳು ಆನ್‌ಲೈನ್‌ನಲ್ಲಿ ಬದಲಾದಂತೆ ಮತ್ತು ನಿರ್ಣಾಯಕ ಯುದ್ಧ ಭೂಮಿಯಾಗಿ ಅಂತರ್ಜಾಲವು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಂತೆ, ಹಲವು ಬದಲಾವಣೆಗಳಾಗಿವೆ. ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸಿವೆ, ದ್ವಿಮುಖ ಹಾಗೂ ಅಗ್ಗದ ರಾಜಕೀಯ ಸಂವಹನವಾಗುತ್ತಿವೆ.
ರಾಜಕೀಯದಲ್ಲಿ ಆನ್‌ಲೈನ್ ಪ್ರಚಾರವು ಅದರ ಹಣಕಾಸಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಮತ್ತು ಸಾರ್ವಜನಿಕ ಚರ್ಚೆಯ ಆರೋಗ್ಯಕ್ಕೆ ಸವಾಲುಗಳನ್ನು ನೀಡುತ್ತದೆ. ಅವುಗಳೆಂದರೆ, ತಪ್ಪು ಮಾಹಿತಿ, ಸೈಬರ್ ಸುರಕ್ಷತೆ ಮತ್ತು ಡೇಟಾ ರಕ್ಷಣೆ ಪರಿಶೀಲಿಸದ ಹಣಕಾಸು ಮತ್ತು ಮೈಕ್ರೊಟಾರ್ಗೆಟಿಂಗ್.
ಆದರೆ, ಆನ್‌ಲೈನ್ ಸಂಭಾವ್ಯ ಜಾಹೀರಾತಿನ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು, ನಾವು ಅದು ಉಂಟು ಮಾಡುವ ಅಸಂಖ್ಯಾತ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಅಪಾಯಗಳನ್ನು ಪರಿಹರಿಸಿಕೊಳ್ಳಬೇಕು. ಇದರಿಂದಾಗಿ ಉತ್ತಮ ಆನ್‌ಲೈನ್ ಜಾಹಿರಾತು ನೀಡಲು ಸಾಧ್ಯ.