ಆಂಧ್ರಪ್ರದೇಶ: ಆಂಧ್ರಪ್ರದೇಶ ರಾಜ್ಯದ ವೈಎಸ್ಆರ್ ಜಿಲ್ಲೆಯ ಪುಲಿವೆಂದು ಎಂಬಲ್ಲಿ ಹೀನ ಕೃತ್ಯವೊಂದು ನಡೆದಿದ್ದು, ಘಟನೆಯಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಪಟ್ಟಣದ ಆಂಜನೇಯಸ್ವಾಮಿ ಗುಡಿ ಬಳಿ 15 ಕಾಮುಕರು ತೃತೀಯ ಲಿಂಗಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಬಳಿಕ ಅವರನ್ನು ಅಲ್ಲಿಯೇ ಎಸೆದು ಹೋಗಿದ್ದಾರೆ ಎನ್ನುವ ಭಯಾನಕ ಘಟನೆಯನ್ನು ಸಹ ತೃತೀಯಲಿಂಗಿಗಳು ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲ ಈ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಿದರೂ ಯಾರೂ ಇತ್ತ ಗಮನ ಹರಿಸಿಲ್ಲ ಎಂಬ ಆರೋಪವಿದೆ. ಸಹ ತೃತೀಯಲಿಂಗಿಗಳು ದಿಶಾ ಆ್ಯಪ್‌ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ದಿಶಾ ಅಧಿಕಾರಿಗಳ ನಿರ್ದೇಶನದಂತೆ ಪುಲಿವೆಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಆದರೆ ಹೆಚ್ಚೇನೂ ಕ್ರಮ ಜರುಗಿಲ್ಲ. ಈ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈ ತೃತೀಯಲಿಂಗಿಗಳು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಚಾಹು ಭಾಗದಲ್ಲಿ ಪ್ರವಾಹ.. ಗೋಪುರದಲ್ಲಿ ಸಿಲುಕಿದ ಮಂಗಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ