ETV Bharat / bharat

ರಾಜಸ್ಥಾನ ವಿಧಾನಸಭೆ ಚುನಾವಣೆ: ಕಸದ ರಾಶಿಯಲ್ಲಿ ಹಣದ ಕಂತೆಗಳು, ಬ್ಯಾಂಕ್​ ದಾಖಲೆ, ಚೀಟಿಗಳು ಪತ್ತೆ - Rajasthan Assembly Elections

ರಾಜಸ್ಥಾನದ ಜೈಪುರದ ಕಸದ ರಾಶಿಯಲ್ಲಿ ಹಣದ ಕಂತೆಗಳು ಮತ್ತು ವಹಿವಾಟಿನ ದಾಖಲೆ ಚೀಟಿಗಳು ಪತ್ತೆಯಾಗಿವೆ.

ಕಸದ ರಾಶಿಯಲ್ಲಿ ಹಣದ ಕಂತೆಗಳು
ಕಸದ ರಾಶಿಯಲ್ಲಿ ಹಣದ ಕಂತೆಗಳು
author img

By ETV Bharat Karnataka Team

Published : Oct 18, 2023, 7:56 PM IST

ಜೈಪುರ (ರಾಜಸ್ಥಾನ) : ಚುನಾವಣಾ ರಾಜ್ಯವಾದ ರಾಜಸ್ಥಾನದಲ್ಲಿ ಮತದಾರರ ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಸರ್ಕಸ್​ ಮಾಡುತ್ತಿದ್ದು, ಕುರುಡು ಕಾಂಚಾಣದ ಸದ್ದು ಕೂಡ ಜೋರಾಗಿದೆ. ಜೈಪುರದಲ್ಲಿ ಕಸದ ರಾಶಿಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ ದಾಖಲೆ ಚೀಟಿಗಳು ಮತ್ತು ನೋಟುಗಳ ಕಂತೆಗಳು ಪತ್ತೆಯಾಗಿವೆ. ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇಲ್ಲಿನ ಬಜಾರ್​ ನಗರ ಪ್ರದೇಶದ ಕಸದ ರಾಶಿಯಲ್ಲಿ ಹಣದ ಕಂತೆಗಳು ಮತ್ತು ವಹಿವಾಟು ನಡೆಸಿದ ದಾಖಲೆ ಚೀಟಿಗಳು ಬಿದ್ದಿದ್ದವು. ಈ ಮಾರ್ಗವಾಗಿ ವಾಕಿಂಗ್​ಗೆ ತೆರಳಿದ್ದ ಜನರು ಹಣದ ಕಂತೆಗಳನ್ನು ಕಂಡು ಅಚ್ಚರಿಗೆ ಒಳಗಾಗಿದ್ದಾರೆ. ಪರಿಶೀಲಿಸಿದಾಗ ಕಸದಲ್ಲಿ ಇನ್ನಷ್ಟು ಹಣದ ಕಂತೆಗಳು ಪತ್ತೆಯಾಗಿವೆ. ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರರು, ಕಸದ ರಾಶಿ ಬಿಸಾಡುವ ಬಳಿ ಶಾಲೆಯೊಂದು ಇದೆ. ಇಲ್ಲಿ ನೋಟುಗಳ ಬಂಡಲ್‌ಗಳು, ಕಂತೆಗಳನ್ನು ಕಟ್ಟಲು ಬಳಸುವ ಕಾಗದ ಮತ್ತು ಈಗಾಗಲೇ ವಹಿವಾಟು ನಡೆಸಿದ್ದರ ಕುರಿತ ದಾಖಲೆ ಚೀಟಿಗಳನ್ನು ಹರಿದು ಕಸದಲ್ಲಿ ಬಿಸಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಹಣವನ್ನು ಎಲ್ಲಿಂದಲೇ ತರಲಾಗಿದೆ. ಮತದಾರರಿಗೆ ಹಂಚಲು ಈ ಹಣವನ್ನು ಶೇಖರಣೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಸಚಿವರ ಮೇಲೆ ಬಿಜೆಪಿ ಆರೋಪ: ಎಲ್ಲಿಂದಲೋ ತಂದ ಹೆಚ್ಚಿನ ಸಂಖ್ಯೆಯ ನೋಟುಗಳು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆ ಚೀಟಿಗಳನ್ನು ಹರಿದು ಎಸೆಯಲಾಗಿದೆ. ವಿಶೇಷ ಎಂದರೆ ಹಣ ಪತ್ತೆಯಾದ ಸ್ಥಳದ ಸಮೀಪದಲ್ಲಿ ಕಾಂಗ್ರೆಸ್​ ಸರ್ಕಾರದ ಸಚಿವರೊಬ್ಬರ ಮನೆ ಇದೆ. ಅವರಿಗೆ ನೋಟುಗಳ ಮಾಲೆ ಹಾಕಿಕೊಳ್ಳುವ ಹವ್ಯಾಸವಿದೆ. ಹಣದ ಮೇಲೆ ಅವರಿಗೆ ಅಪಾರ ಪ್ರೀತಿ ಇದೆ ಎಂದು ಆಪಾದಿಸಿದರು.

ಅಶೋಕ್ ಗೆಹ್ಲೋಟ್ ಸರ್ಕಾರ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಒಂದೊಂದೇ ಮುಖಗಳು ಹೊರಬರುತ್ತಿವೆ. ಲಾಕರ್‌ಗಳಲ್ಲಿ ಚಿನ್ನ, ನೋಟುಗಳು ಹೊರಬರುತ್ತಿವೆ. ಈಗ ಬ್ಯಾಂಕ್ ಸ್ಲಿಪ್‌ಗಳು ಕಸದ ರಾಶಿಯಲ್ಲಿ ಕಂಡು ಬಂದಿವೆ. ಇದೆಲ್ಲವನ್ನು ಕಂಡಾಗ ಕಾಂಗ್ರೆಸ್ ಸರ್ಕಾರ ರಾಜಸ್ಥಾನವನ್ನು ಹೇಗೆ ಲೂಟಿ ಮಾಡಿದೆ ಎಂಬುದು ತೋರಿಸುತ್ತದೆ ಎಂದರು.

ನಿನ್ನೆಯಷ್ಟೇ (ಮಂಗಳವಾರ) ಗಣೇಶ ಪ್ಲಾಜಾದಲ್ಲಿನ ಲಾಕರ್‌ನಿಂದ 1 ಕೋಟಿ ರೂ.ಗೂ ಅಧಿಕ ನಗದು ಹಾಗೂ 1 ಕೆಜಿ ಚಿನ್ನಾಭರಣ ಪತ್ತೆಯಾಗಿತ್ತು. ಈ ಹಿಂದೆ ಯೋಜನಾ ಭವನದಲ್ಲಿ 2.5 ಕೋಟಿ ನಗದು ಹಾಗೂ 1 ಕೆಜಿ ಚಿನ್ನ ಪತ್ತೆಯಾಗಿತ್ತು. ಇದೆಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು. ರಾಜ್ಯ ವಿಧಾನಸಭೆಗೆ ನವೆಂಬರ್​ 23 ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್​​ ಎರಡನೇ ಬಾರಿಗೆ ಮತ್ತೆ ಆಡಳಿತ ಹಿಡಿಯಲು ಪ್ರಯತ್ನ ನಡೆಸುತ್ತಿದ್ದರೆ, ಸರ್ಕಾರದ ಮೇಲೆ ಹಲವು ಭ್ರಷ್ಟಾಚಾರ ಆರೋಪ ಹೊರಿಸಿರುವ ಬಿಜೆಪಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಎರಡೂ ಪಕ್ಷಗಳ ಮಧ್ಯೆ ನೇರ ಪೈಪೋಟಿ ನಡೆಯಲಿದೆ.

ಇದನ್ನೂ ಓದಿ: ರಾಜಕೀಯ ಪಕ್ಷಗಳ ಯೋಜನೆಗಳು 'ಉಚಿತ'ವಲ್ಲ: ಫ್ರೀ ಯೋಜನೆಗಳ ಬಗ್ಗೆ ಚುನಾವಣಾ ಆಯೋಗ ಅಸಮಾಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.