ETV Bharat / bharat

ಬೆಳಗಾದರೆ ಮದುವೆ, ರಾತ್ರಿಯೇ ಜವರಾಯನ ಅಟ್ಟಹಾಸ.. ಟ್ರ್ಯಾಕ್ಟರ್​ ಮಗುಚಿ 6 ಮಂದಿ ದುರ್ಮರಣ - ಆಂಧ್ರಪ್ರದೇಶದಲ್ಲಿ ಅಪಘಾತ

ಬೆಳಗಾದರೆ ಮದುವೆ ಸಂಭ್ರಮ ನಡೆಯಬೇಕಿದ್ದ ಊರಲ್ಲಿ ಆರ್ತನಾದ ಕೇಳುವಂತಾಗಿದೆ. ವಿವಾಹ ಸಂಭ್ರಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್​ ಮಗುಚಿ ಬಿದ್ದು 6 ಮಂದಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದಿದೆ.

tragedy-at-marriage-house-in-andhra-pradesh
ಟ್ರ್ಯಾಕ್ಟರ್​ ಮಗುಚಿ 6 ಮಂದಿ ದುರ್ಮರಣ
author img

By

Published : Dec 8, 2022, 8:35 AM IST

ಚಿತ್ತೂರು(ಆಂಧ್ರಪ್ರದೇಶ): ಬೆಳಗಾದರೆ ಮದುವೆ ಇತ್ತು. ಸಂಭ್ರಮದಿಂದ ತೆರಳುತ್ತಿದ್ದ ಕುಟುಂಬದ ಮೇಲೆ ಜವರಾಯ ರಾತ್ರಿ ಬಂದು ಎರಗಿದ್ದ. ಮದುವೆ ಮಂಟಪಕ್ಕೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್​ ಮಗುಚಿ ಒಂದೇ ಕುಟುಂಬದ ಮೂವರು ಸೇರಿ 6 ಮಂದಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.

ಚಿತ್ತೂರು ಜಿಲ್ಲೆಯ ಲಕ್ಷ್ಮಯ್ಯೂರು ಗ್ರಾಮದ ಕುಟುಂಬವೊಂದು ಮದುವೆ ಕಾರ್ಯಕ್ರಮದ ಸಂಭ್ರಮದಲ್ಲಿತ್ತು. ಬೆಳಗ್ಗೆ ಮದುವೆ ಇದ್ದ ಕಾರಣ ಬಂಧುಗಳ ಸಮೇತ ವರ ಕಲ್ಯಾಣ ಮಂಟಪಕ್ಕೆ ಬುಧವಾರ ರಾತ್ರಿ ತೆರಳುತ್ತಿದ್ದ. ಕಲ್ಯಾಣಮಂಟಪ 2 ಕಿಮೀ ದೂರವಿದ್ದಾಗ ವರನ ಸಮೇತ 26 ಜನರಿದ್ದ ಟ್ರ್ಯಾಕ್ಟರ್​ ಎತ್ತರದ ಪ್ರದೇಶದಲ್ಲಿ ಸಾಗುತ್ತಿದ್ದಾಗ, ಚಾಲಕ ಇಂಧನ ಉಳಿಸಲೆಂದು ಇಂಜಿನ್​ ಆಫ್​ ಮಾಡಿದ್ದಾರೆ.

ಈ ವೇಳೆ ಟ್ರ್ಯಾಕ್ಟರ್​ ವೇಗವಾಗಿ ಇಳಿಜಾರಿನೆಡೆಗೆ ಚಲಿಸಿದೆ. ನಿಯಂತ್ರಣ ಕಳೆದುಕೊಂಡ ವಾಹನ ಏಕಾಏಕಿ ರಸ್ತೆ ಪಕ್ಕದ 5 ಅಡಿ ಕಂದಕಕ್ಕೆ ಉರುಳಿ, ಟ್ರ್ಯಾಕ್ಟರ್​ ಟ್ರಾಲಿ ಮಗುಚಿ ಬಿದ್ದಿದೆ. ಇದರಿಂದ 26 ಜನರು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಘಟನೆಯಲ್ಲಿ ಉಸಿರುಗಟ್ಟಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಮತ್ತು ಟ್ರ್ಯಾಕ್ಟರ್​ ಚಾಲಕ ಪ್ರಾಣ ಕಳೆದುಕೊಂಡಿದ್ದಾರೆ.

ಮಾಹಿತಿ ಪಡೆದ ಸ್ಥಳೀಯರು ಮತ್ತು ಪೊಲೀಸರು ರಕ್ಷಣೆಗೆ ಧಾವಿಸಿ ಗಾಯಗೊಂಡ 19 ಜನರನ್ನು ಚಿಕಿತ್ಸೆಗಾಗಿ ಚಿತ್ತೂರು, ತಿರುಪತಿ ಮತ್ತು ವೆಲ್ಲೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಚಾಲಕನ ಬುದ್ಧಿಗೇಡಿತನದಿಂದಾಗಿ ಶುಭಕಾರ್ಯ ನಡೆಯಬೇಕಿದ್ದ ವೇಳೆ ಅಚಾತುರ್ಯ ನಡೆದಿದೆ. ಟ್ರ್ಯಾಕ್ಟರ್​ನಲ್ಲಿ ಇದ್ದ ವರ ಕೂಡ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಮದುವೆ ಸದ್ಯಕ್ಕೆ ನಿಂತು ಹೋಗಿದೆ.

ಓದಿ: ಕಳೆದ ಐದು ವರ್ಷದಲ್ಲಿ 2900ಕ್ಕೂ ಹೆಚ್ಚು ಕೋಮು ಗಲಭೆ ಪ್ರಕರಣಗಳು ದಾಖಲು: ಕೇಂದ್ರ ಸರ್ಕಾರದ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.