ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ರಂಬನ್ ಪಟ್ಟಣದ ಸಮೀಪ ರಸ್ತೆಯ ಒಂದು ಭಾಗ ಕುಸಿದ ಕಾರಣ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 270 ಕಿ.ಮೀ.ವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೆದ್ದಾರಿಯಲ್ಲೇ ಸಿಲುಕಿಕೊಂಡಿರುವ ವಾಹನ ಸವಾರರು ಪರದಾಡುವಂತಾಗಿದೆ.
ಭಾರಿ ಹಿಮಪಾತ ಮತ್ತು ನಿರಂತರ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿದ್ದರಿಂದ ಜನವರಿ 3 ರಿಂದ 7 ದಿನಗಳ ಕಾಲ ಸಂಚಾರ ಸ್ಥಗಿತಗೊಂಡು ಭಾನುವಾರದಿಂದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಮತ್ತೆ ರಸ್ತೆ ಕುಸಿದಿದ್ದು, ದುರಸ್ಥಿ ಕಾರ್ಯ ಪೂರ್ಣಗೊಳ್ಳಲು ಕನಿಷ್ಠ ಐದು ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗಾಂಧಿ ಕೊಂದ ಗೋಡ್ಸೆ ಹೆಸರಿನ ಗ್ರಂಥಾಲಯಕ್ಕೆ ಬೀಗ.. ಹಿಂದೂ ಮಹಾಸಭಾ ಕಚೇರಿ ಸುತ್ತ ಸೆಕ್ಷನ್ 144 ಜಾರಿ
ಜಮ್ಮು-ದೋಡಾ-ಕಿಶ್ತ್ವಾರ್, ಜಮ್ಮು-ರಾಂಬನ್, ಮ್ಯಾಗರ್‌ಕೋಟ್- ಬನಿಹಾಲ್ ಮತ್ತು ಬನಿಹಾಲ್-ಖಾಜಿಗುಂಡ್ ನಡುವೆ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿಯ ಸಂಚಾರಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಜತಿಂದರ್ ಸಿಂಗ್ ಜೋಹರ್ ಹೇಳಿದ್ದಾರೆ.