ETV Bharat / bharat

ತಾಜ್ ಮಹಲ್: ಪ್ರವಾಸಿಗರಿಗೆ ಭಾರವಾದ 200 ರೂ. ಹೆಚ್ಚುವರಿ ಟಿಕೆಟ್ - ಸ್ಟೆಪ್ ಟಿಕೆಟಿಂಗ್ ವ್ಯವಸ್ಥೆ

ತಾಜ್ ಮಹಲ್​ನ ಮುಖ್ಯ ಸಮಾಧಿ ವೀಕ್ಷಣೆಗೆ 200 ರೂಪಾಯಿಗಳ ಹೆಚ್ಚುವರಿ ಟಿಕೆಟ್ ಖರೀದಿಸಬೇಕಿದೆ. ಹೀಗಾಗಿ ಅನೇಕ ಪ್ರವಾಸಿಗರು ಮುಖ್ಯ ಸಮಾಧಿಗೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

tourists-raised-demand-to-improve-online-ticket-system-at-taj-mahal-and-other-monuments-in-agra

author img

By

Published : Jan 30, 2023, 5:12 PM IST

ಆಗ್ರಾ: ತಾಜ್‌ಮಹಲ್‌ನಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಾಲ್ಕು ವರ್ಷಗಳ ಹಿಂದೆ ಸ್ಟೆಪ್ ಟಿಕೆಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ, ತಾಜ್ ಮಹಲ್‌ನ ಮುಖ್ಯ ಸಮಾಧಿಗೆ ಭೇಟಿ ನೀಡಬೇಕಾದರೆ 200 ರೂ.ಗಳ ಪ್ರತ್ಯೇಕ ಟಿಕೆಟ್ ಅನ್ನು ವಿಧಿಸಲಾಯಿತು. ಇದರಿಂದಾಗಿ ಪ್ರವಾಸಿಗರು ಮುಖ್ಯ ಸಮಾಧಿಗೆ ಭೇಟಿ ನೀಡಲು ಹಿಂಜರಿಯಲಾರಂಭಿಸಿದರು. ಸ್ಟೆಪ್ ಟಿಕೆಟಿಂಗ್‌ ಆರಂಭವಾದ ನಂತರ ಮುಖ್ಯ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಮೂರನೇ ಒಂದರಷ್ಟು ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ತಾಜ್ ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರು ಆಫ್‌ಲೈನ್‌ಗಿಂತ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಆರ್​ಟಿಐ ಅರ್ಜಿಯೊಂದರ ಮೂಲಕ ಈ ಎಲ್ಲ ಮಾಹಿತಿಗಳು ಬಹಿರಂಗವಾಗಿವೆ. ಇದರಿಂದಾಗಿ ತಾಜ್ ಮಹಲ್ ಮತ್ತಿತರ ಸ್ಮಾರಕಗಳಲ್ಲಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಇನ್ನಷ್ಟು ಸುಧಾರಿಸುವಂತೆ ಬೇಡಿಕೆ ವ್ಯಕ್ತವಾಗಿದೆ. ದೇಶಿ ಮತ್ತು ವಿದೇಶಿ ಪ್ರವಾಸಿಗರು ಟಿಕೆಟ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಎದುರಿಸದಂತೆ ಕ್ರಮ ತೆಗೆದುಕೊಳ್ಳುವಂತೆ ಜನ ಆಗ್ರಹಿಸುತ್ತಿದ್ದಾರೆ.

ತಾಜ್ ಮಹಲ್ ನಲ್ಲಿ ತುಂಬಾ ಜನದಟ್ಟಣೆ ಉಂಟಾಗುವ ಕಾರಣದಿಂದ ಇಲ್ಲಿನ ಆಡಳಿತ ವ್ಯವಸ್ಥೆಯ ಕುರಿತು ಅನೇಕ ಪ್ರಶ್ನೆಗಳು ಮೂಡಿದ್ದವು. ಅಲ್ಲದೆ ಮುಖ್ಯ ಸಮಾಧಿಯನ್ನು ವೀಕ್ಷಿಸಲು ತುಂಬಾ ಜನ ಸರತಿ ಸಾಲಿನಲ್ಲಿ ನಿಂತಿರುತ್ತಿದ್ದರು. ಇದರ ಬಗ್ಗೆ ಗಮನಹರಿಸಿದ ಎಎಸ್​ಐ. 2018 ರ ಡಿಸೆಂಬರ್ 12 ರಿಂದ ತಾಜ್ ಮಹಲ್​ನ ಮುಖ್ಯ ಸಮಾಧಿಯನ್ನು ನೋಡಲು 200 ರೂಪಾಯಿಗಳ ಹೆಚ್ಚುವರಿ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿತು. ಅಂದಿನಿಂದ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಮುಖ್ಯ ಸಮಾಧಿ ನೋಡಬೇಕಾದರೆ 200 ರೂಪಾಯಿಗಳ ಹೆಚ್ಚುವರಿ ಟಿಕೆಟ್ ಖರೀದಿಸುವುದು ಕಡ್ಡಾಯ.

ಆಗ್ರಾ ಡೆವಲಪ್‌ಮೆಂಟ್ ಫೌಂಡೇಶನ್‌ನ ಕಾರ್ಯದರ್ಶಿ ಅಡ್ವೊಕೇಟ್ ಕೆಸಿ ಜೈನ್ ಅವರು ಆರ್‌ಟಿಐ ಅರ್ಜಿಯ ಮೂಲಕ ಎಎಸ್‌ಐನಿಂದ ತಾಜ್ ಮಹಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಟಿಕೆಟ್‌ಗಳ ಬಗ್ಗೆ ಮಾಹಿತಿ ಕೇಳಿದ್ದರು. ತಾಜ್ ಮಹಲ್‌ಗೆ ಭೇಟಿ ನೀಡುವ ಸರಾಸರಿ 4 ಪ್ರವಾಸಿಗರಲ್ಲಿ ಒಬ್ಬ ಪ್ರವಾಸಿಗ ಮಾತ್ರ ಮುಖ್ಯ ಸಮಾಧಿಗೆ ಟಿಕೆಟ್ ಖರೀದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಮೂವರು ಪ್ರವಾಸಿಗರು ಮುಖ್ಯ ಸಮಾಧಿಗೆ ಹೋಗುತ್ತಿಲ್ಲ.

ಅಂದರೆ ಶೇ 75ರಷ್ಟು ಪ್ರವಾಸಿಗರು ಎಎಸ್‌ಐನ ಸ್ಟೆಪ್ ಟಿಕೆಟಿಂಗ್‌ನ ದುಬಾರಿ ವೆಚ್ಚದಿಂದಾಗಿ ಟಿಕೆಟ್ ಖರೀದಿಸುತ್ತಿಲ್ಲ. ಪ್ರತಿದಿನ 75 ಪ್ರವಾಸಿಗರು ಮುಖ್ಯ ಸಮಾಧಿಯನ್ನು ನೋಡದೆ ಹಿಂತಿರುಗುತ್ತಾರೆ. ಏಕೆಂದರೆ ತಾಜ್ ಮಹಲ್ ಸಂಕೀರ್ಣದಲ್ಲಿ ಭಾರತೀಯ ಪ್ರವಾಸಿಗರಿಗೆ ಪ್ರವೇಶ ಟಿಕೆಟ್ ದರ 50 ರೂಪಾಯಿ ಮತ್ತು ವಿದೇಶಿ ಪ್ರವಾಸಿಗರಿಗೆ ಟಿಕೆಟ್ ದರ 1100 ರೂಪಾಯಿಗಳಾಗಿದೆ. ಸ್ಟೆಪ್ ಟಿಕೆಟ್ ವ್ಯವಸ್ಥೆಯಿಂದಾಗಿ ಮುಖ್ಯ ಸಮಾಧಿಗೆ ಹೋಗಲು 200 ರೂಪಾಯಿ ಹೆಚ್ಚುವರಿ ಟಿಕೆಟ್ ತೆಗೆದುಕೊಳ್ಳಬೇಕಾಗಿದೆ.

ತಾಜ್ ಮಹಲ್‌ನ ರಾತ್ರಿ ವೀಕ್ಷಣೆಗೆ ಆನ್‌ಲೈನ್ ಟಿಕೆಟಿಂಗ್ ಆರಂಭಿಸುವಂತೆ ಆಗ್ರಾ ಡೆವಲಪ್‌ಮೆಂಟ್ ಫೌಂಡೇಶನ್‌ನ ಕಾರ್ಯದರ್ಶಿ ಅಡ್ವೊಕೇಟ್ ಕೆಸಿ ಜೈನ್ ಆಗ್ರಹಿಸಿದ್ದಾರೆ. ಪ್ರವಾಸಿಗರು ತಾಜ್ ಮಹಲ್‌ ವೀಕ್ಷಿಸಲು ಆನ್‌ಲೈನ್ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದರು. ಅದಕ್ಕಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆಯ ಸೌಲಭ್ಯವನ್ನು ಎಎಸ್‌ಐ ಹೆಚ್ಚಿಸಬೇಕು. ತಾಜ್‌ಮಹಲ್‌ನ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದ್ವಾರಗಳ ಜೊತೆಗೆ, ಶಿಲ್ಪಗ್ರಾಮ್, ಪೇರಲ ದಿಬ್ಬದ ಪಾರ್ಕಿಂಗ್, ದೊಡ್ಡ ಹೋಟೆಲ್‌ಗಳು, ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು ಅಳವಡಿಸಬೇಕು ಎಂದು ಜೈನ್ ಆಗ್ರಹಿಸಿದರು.

ಆಫ್ ಲೈನ್ ಟಿಕೆಟ್ ಅಂಕಿ ಅಂಶಗಳು

ಆರ್ಥಿಕ ವರ್ಷ ಆಫ್ ಲೈನ್ ಟಿಕೆಟ್
2018-2019 5684174
2019-2020 1042994
2020-2021 256675
2021-2022 1827756

ಆನ್ ಲೈನ್ ಟಿಕೆಟ್ ಅಂಕಿ ಅಂಶಗಳು

ಆರ್ಥಿಕ ವರ್ಷಭಾರತೀಯ ಪ್ರವಾಸಿಗರುವಿದೇಶಿ ಪ್ರವಾಸಿಗರು
2018-19 149685 30813
2019-20 224874 56079
2020-21 899574 6701
2021-22 2987070 37578

ಇದನ್ನೂ ಓದಿ: 'ತಾಜ್ ಮಹಲ್ ಭೂಮಿ ನಮ್ಮ ಪೂರ್ವಜರದ್ದು, ದಾಖಲೆ ಕೊಡಲು ಸಿದ್ಧ': ಜೈಪುರ ರಾಜವಂಶಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.