ETV Bharat / bharat

ಬೀಚ್​ನಲ್ಲಿ ಕಾರ್​ ರೈಡ್​... ಸಮುದ್ರದ ದಡದಲ್ಲಿ ಸಿಲುಕಿಕೊಂಡ ವಾಹನ!

ಗೋವಾ: ದೆಹಲಿ ನಿವಾಸಿಯೊಬ್ಬರು ಗೋವಾದ ವಗಟೋರ್ ಬೀಚ್‌ನಲ್ಲಿ ಕಾರಿನಲ್ಲಿ ಸವಾರಿ ಮಾಡುವುದನ್ನು ಆನಂದಿಸುತ್ತಿದ್ದರು. ಆದರೆ ಎಂಜಾಯ್​ ಮಾಡುವ ಭರದಲ್ಲಿ ಅವರ ಕಾರು ಸಮುದ್ರದ ದಡದಲ್ಲಿ ಸಿಲುಕಿಕೊಂಡಿದೆ.

author img

By

Published : Jun 17, 2022, 1:49 PM IST

tourists car got stuck in the sea water in Goa  car ride in vagator beach at Goa  Goa crime news  ಗೋವಾದ ಸಮುದ್ರ ದಡದಲ್ಲಿ ಸಿಲುಕೊಂಡ ಕಾರು  ಗೋವಾದ ವಗಟೋರ್​ ಬೀಚ್​ನಲ್ಲಿ ಕಾರ್​ ರೈಡ್​ ಗೋವಾ ಅಪರಾಧ ಸುದ್ದಿ
ಬೀಚ್​ನಲ್ಲಿ ಕಾರ್​ ರೈಡ್

ಪಣಜಿ: ಗೋವಾದ ಕಡಲತೀರದಲ್ಲಿ ಸುತ್ತಾಡಲು ಅನೇಕ ಪ್ರವಾಸಿಗರು ಇಷ್ಟಪಡುತ್ತಾರೆ. ಆದರೆ, ಕೆಲ ಹವ್ಯಾಸಿ ಹಾಗೂ ಅಶಿಸ್ತಿನ ಪ್ರವಾಸಿಗರಿಂದ ಕೆಲಮೊಮ್ಮೆ ಅಪಾಯಾಗಳು ಸಂಭವಿಸುತ್ತವೆ. ಈ ಮಾತಿಗೆ ಇಂಬು ನೀಡುವಂತೆ ಗುರುವಾರ ಒಂದು ಘಟನೆ ವರದಿಯಾಗಿದೆ. ದೆಹಲಿ ನಿವಾಸಿಯೊಬ್ಬರು ಗೋವಾದ ವಗಟೋರ್ ಬೀಚ್‌ನಲ್ಲಿ ತಮ್ಮ ಮಾಲೀಕನ ಕಾರ್​ನಲ್ಲಿ ಸವಾರಿ ಮಾಡುವುದರ ಮೂಲಕ ಎಂಜಾಯ್​ ಮಾಡುತ್ತಿದ್ದರು. ಆದರೆ, ಅವರ ಸಂತೋಷ ಬಹಳ ಹೊತ್ತು ಸಾಗಲಿಲ್ಲ. ಏಕೆಂದರೆ ಅವರು ಕಾರು ಸಮುದ್ರದ ದಡದಲ್ಲಿ ಸಿಲುಕಿಕೊಂಡಿದ್ದರಿಂದ ಸಂಕಷ್ಟ ಎದುರಾಯಿತು.

ಓದಿ: ಚಾಲಕನ ನಿಯಂತ್ರಣ ತಪ್ಪಿ ನೀರಿಲ್ಲದ ಬಾವಿಗೆ ಬಿದ್ದ ಕಾರು: ಮಗು ಸೇರಿ 7 ಜನರ ದುರ್ಮರಣ

ದೆಹಲಿಯ ನಿವಾಸಿ ಲಲಿತ್ ಕುಮಾರ್ ಅವರು ತಮ್ಮ ಮಾಲೀಕನ ಕಾರನ್ನು ವಗಟೋರ್​ ಬೀಚ್‌ನಲ್ಲಿ ಚಲಾಯಿಸುತ್ತಿದ್ದರು. ಸಮುದ್ರದ ದಡದಲ್ಲಿ ಕಾರು ಚಲಾಯಿಸುತ್ತಿದ್ದಾಗ ವಾಹನ ಸಿಲುಕಿಕೊಂಡಿತು. ಬಳಿಕ ಈ ವಿಷಯ ಪೊಲೀಸರಿಗೆ ತಿಳಿದಿದೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ವಶಪಡಿಸಿಕೊಂಡರು. ಬಳಿಕ ಕೊನೆಗೆ ಗೋವಾ ಪೊಲೀಸರು ಲಲಿತ್ ಕುಮಾರ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾರು ನಗರದ ಸಂಗೀತಾ ಗಾವಂದಾಳ್ಕರ್ ಎಂಬುವರಿಗೆ ಸೇರಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ:ವರನ ಬೈಕ್​ ಮೇಲೆ ಕೂರಿಸಿಕೊಂಡು ಊರೆಲ್ಲಾ ಮೆರವಣಿಗೆ ಮಾಡಿಸಿದ ತಂಗಿ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.