ಜೈಪುರ (ರಾಜಸ್ಥಾನ): ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ರಷ್ಯಾದ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ನವೆಂಬರ್ 7 ರಂದು ಟೋಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿದೇಶಿ ಮಹಿಳಾ ಪ್ರವಾಸಿ, ತನ್ನ ಭಾರತೀಯ ಟ್ರಾವೆಲ್ ಬ್ಲಾಗರ್ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಸಂಚಾರ ಮಾಡುತ್ತಿದ್ದರು. ಈ ಸಮಯದಲ್ಲಿ ಟೋಂಕ್ ರಸ್ತೆಯಲ್ಲಿರುವ ರಿಫಿಲ್ಲಿಂಗ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬ ವಿದೇಶಿ ಮಹಿಳೆಯನ್ನು ಮೂರು ಬಾರಿ ಅನೈತಿಕವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆಕ್ರೋಶಗೊಂಡ ವಿದೇಶಿ ಮಹಿಳೆಯು ತನ್ನ ಭಾರತೀಯ ಸ್ನೇಹಿತನಿಗೆ ತಿಳಿಸಿದ್ದಾಳೆ. ಆಕೆ ಭಾರತೀಯ ಸ್ನೇಹಿತ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಆದರೆ, ಸಿಬ್ಬಂದಿ ಪೊಲೀಸರ ಸಮ್ಮುಖದಲ್ಲಿ ವಿದೇಶಿ ಮಹಿಳಾ ಪ್ರವಾಸಿಗೆ ಕ್ಷಮೆಯಾಚಿಸಿದ್ದಾರೆ. ಈ ವಿಡಿಯೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಪೋಸ್ಟ್ ವೈರಲ್ ಆದ ಬಳಿಕ ಪೊಲೀಸರು ವಿಷಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ರೀಫಿಲ್ಲಿಂಗ್ ಉದ್ಯೋಗಿಯ ಬೆವರಿಳಿಸಿದ ವಿದೇಶಿ ಮಹಿಳೆ: ವಾಸ್ತವವಾಗಿ, ರಷ್ಯಾದ ಮಹಿಳೆ ತನ್ನ ಭಾರತೀಯ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದಳು. ನವೆಂಬರ್ 7ರಂದು ಜೈಪುರದ ಟೋಂಕ್ ರಸ್ತೆಯಲ್ಲಿರುವ ರಿಫಿಲ್ಲಿಂಗ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು ಟ್ರಾವೆಲ್ ಬ್ಲಾಗರ್ ಈ ವಿಡಿಯೋವನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ರಿಫಿಲ್ಲಿಂಗ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಈ ವಿದೇಶಿ ಮಹಿಳೆಯನ್ನು ಒಂದಲ್ಲ ಮೂರು ಬಾರಿ ಮುಟ್ಟಿದ್ದಾರೆ. ಈ ವೇಳೆ, ವಿದೇಶಿ ಮಹಿಳೆ ಮತ್ತು ಆಕೆಯ ಭಾರತೀಯ ಸ್ನೇಹಿತ, ರೀಫಿಲ್ಲಿಂಗ್ ಉದ್ಯೋಗಿಯ ಬೆವರಿಳಿಸಿದ್ದಾರೆ.
ಈ ವಿಡಿಯೋದಲ್ಲಿ ವಿದೇಶಿ ಮಹಿಳೆ ಮೂರು ಬಾರಿ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ. ಕಿರುಕುಳ ನೀಡಿದ್ದ ಉದ್ಯೋಗಿ ಕೂಡ ಪೊಲೀಸರ ಸಮ್ಮುಖದಲ್ಲಿ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಘಟನೆ ಕುರಿತು ಟ್ರಾವೆಲ್ ಬ್ಲಾಗರ್ ಕಂಟ್ರೋಲ್ ರೂಂ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿಯ ನಂತರ, ಇಬ್ಬರು ಕಾನ್ಸ್ಟೇಬಲ್ಗಳು ಸಹ ಸ್ಥಳಕ್ಕೆ ಬಂದರು. ಕಿರುಕುಳ ನೀಡಿದ್ದ ಉದ್ಯೋಗಿ, ರಷ್ಯಾದ ಮಹಿಳೆಗೆ ಕ್ಷಮೆಯಾಚಿಸಿದ ನಂತರ, ವಿಷಯವನ್ನು ಕೊನೆಗೊಳಿಸಿದರು. ಆದರೆ, ಪೊಲೀಸ್ ಅಧಿಕಾರಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಮುಂಬೈನಲ್ಲಿ 64 ವರ್ಷದ ವಿಧವೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ