ETV Bharat / bharat

ಪ್ರವಾಸಿ ಬಸ್​-ಕೆಎಸ್​ಆರ್​ಟಿಸಿ ಬಸ್​ ಮಧ್ಯೆ ಭೀಕರ ಅಪಘಾತ..ಐವರು ವಿದ್ಯಾರ್ಥಿಗಳು ಸೇರಿ 9 ಮಂದಿ ಸಾವು - kerala bus accident

ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್​ವೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿ ಒಂಬತ್ತು ಮಂದಿ ಸಾವನ್ನಪ್ಪಿರುವ ದುರ್ಘಟನೆ ಕೇರಳದಲ್ಲಿ ನಡೆದಿದೆ.

bus accident
ಕೆಎಸ್​ಆರ್​ಟಿಸಿ ಬಸ್​ ಭೀಕರ ಅಪಘಾತ
author img

By

Published : Oct 6, 2022, 7:22 AM IST

Updated : Oct 6, 2022, 9:56 AM IST

ಪಾಲಕ್ಕಾಡ್(ಕೇರಳ): ದೇವರನಾಡಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬುಧವಾರ ಮಧ್ಯರಾತ್ರಿ ವಡಕಂಚೇರಿ ಅಂಕುಮೂರ್ತಿ ಮಂಗಲದಲ್ಲಿ ಅಪಘಾತ ನಡೆದಿದ್ದು, ಎರ್ನಾಕುಲಂನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ಸೊಂದು ಕೆಎಸ್​ಆರ್​ಟಿಸಿ(ಕೇರಳ ರಸ್ತೆ ಸಾರಿಗೆ ಸಂಸ್ಥೆ) ಬಸ್​ಗೆ ಡಿಕ್ಕಿಯಾದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ.

ಪ್ರವಾಸಿ ಬಸ್​ 42 ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರನ್ನು ಕರೆದೊಯ್ಯುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್ ಕೇರಳದ ಕೊಟ್ಟಾರಕ್ಕರದಿಂದ ತಮಿಳುನಾಡಿನ ಕೊಯಮತ್ತೂರಿಗೆ ತೆರಳುತ್ತಿದ್ದು, 81 ಪ್ರಯಾಣಿಕರಿದ್ದರು. ದುರ್ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದರೆ. 40 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಾಲಕ್ಕಾಡ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇರಳ ರಸ್ತೆ ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.

ಕೆಎಸ್​ಆರ್​ಟಿಸಿ ಬಸ್​ ಭೀಕರ ಅಪಘಾತ

ಇದನ್ನೂ ಓದಿ: ವೃದ್ಧನಿಗೆ ಡಿಕ್ಕಿ ಹೊಡೆದ ಬೈಕ್; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪ್ರವಾಸಿ ಬಸ್ ಎರ್ನಾಕುಲಂನ ಮಾರ್ ಬಸೆಲಿಯೋಸ್ ಶಾಲೆಗೆ ಸೇರಿದ್ದು, ಇವರೆಲ್ಲ ತಮಿಳುನಾಡು ಪ್ರವಾಸಕ್ಕೆ ತೆರಳುತ್ತಿದ್ದರು. ಈ ಪ್ರವಾಸಿ ಬಸ್ ವೇಗವಾಗಿ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ಆಲತ್ತೂರು, ವಡಕಂಚೇರಿ ಅಗ್ನಿಶಾಮಕ ದಳ ಮತ್ತು ಜನರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಮೃತರಲ್ಲಿ ಮೂವರು ಕೆಎಸ್​ಆರ್​ಟಿಸಿ ಬಸ್​ನ ಪ್ರಯಾಣಿಕರಾಗಿದ್ದರೆ, ಟೂರಿಸ್ಟ್​ ಬಸ್​ನಲ್ಲಿ ಐವರು ಕೊನೆಯುಸಿರೆಳೆದಿದ್ದಾರೆ. 6 ಮಂದಿ ಪುರುಷರು ಮತ್ತು ಮೂವರು ಮಹಿಳೆಯರ ಪ್ರಾಣ ಪಕ್ಷಿ ಹಾರಿಹೋಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Last Updated : Oct 6, 2022, 9:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.