ETV Bharat / bharat

ನಿನ್ನೆ ದೇಶದಲ್ಲಿ 23,285 ಕೇಸ್​ ಪತ್ತೆ.. ಈವರೆಗೆ 2.61 ಕೋಟಿ ಮಂದಿಗೆ ಲಸಿಕೆ - ಕೊರೊನಾ ಲಸಿಕೆ

ಗುರುವಾರ 23,285 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,97,237ಕ್ಕೆ ಏರಿಕೆಯಾಗಿದೆ.

Total number of corona cases, deaths, Vaccination in India
2.61 ಕೋಟಿ ಮಂದಿಗೆ ಲಸಿಕೆ
author img

By

Published : Mar 12, 2021, 10:07 AM IST

ನವದೆಹಲಿ: ಭಾರತದಲ್ಲಿ 2ನೇ ಹಂತಹ ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನ ನಡೆಯುತ್ತಿದ್ದು, ಜನವರಿ 16 ರಿಂದ ಈವರೆಗೆ ಒಟ್ಟು 2,61,64,920 ಮಂದಿಗೆ ಲಸಿಕೆ ನೀಡಲಾಗಿದೆ.

ಮತ್ತೆ ಕೋವಿಡ್​ ಪ್ರಕರಣ​ಗಳ ಸಂಖ್ಯೆ ಹೆಚ್ಚುತ್ತಿದ್ದು, ಪರಿಣಾಮ ಆ್ಯಕ್ಟಿವ್​ ಕೇಸ್​ಗಳೂ ಹೆಚ್ಚಾಗಿವೆ. ಕಳೆದ 24 ಗಂಟೆಗಳಲ್ಲಿ 23,285 ಸೋಂಕಿತರು ಪತ್ತೆಯಾಗಿದ್ದು, 117 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,13,08,846 ಹಾಗೂ ಮೃತರ ಸಂಖ್ಯೆ 1,58,306ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆ ಟ್ವೀಟ್​

ಒಟ್ಟು ಸೋಂಕಿತರ ಪೈಕಿ 1,09,53,303 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇನ್ನೂ 1,97,237 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Total number of corona cases, deaths, Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಮಾರ್ಚ್​​ 11 ರವರೆಗೆ 22 ಕೋಟಿ ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,40,345 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.