ನವದೆಹಲಿ: ಭಾರತದ ಕೊರೊನಾ ಕದನ ಯಶಸ್ಸಿನೆಡೆ ಸಾಗುತ್ತಿದೆ. ಈವರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ 54,16,849 ಮಂದಿಗೆ ಲಸಿಕೆ ನೀಡಲಾಗಿದೆ.
-
#LargestVaccineDrive pic.twitter.com/a8NGvetIXN
— Ministry of Health (@MoHFW_INDIA) February 6, 2021 " class="align-text-top noRightClick twitterSection" data="
">#LargestVaccineDrive pic.twitter.com/a8NGvetIXN
— Ministry of Health (@MoHFW_INDIA) February 6, 2021#LargestVaccineDrive pic.twitter.com/a8NGvetIXN
— Ministry of Health (@MoHFW_INDIA) February 6, 2021
ಫೆಬ್ರವರಿ 5ರ ವರೆಗೆ 20 ಕೋಟಿಗೂ ಹೆಚ್ಚು (20,06,72,589) ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,40,794 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಇನ್ನು ಶುಕ್ರವಾರ ಅತಿ ಕಡಿಮೆ ಸಾವು (95 ಮಂದಿ) ವರದಿಯಾಗಿದ್ದು, 11,713 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,08,14,304 ಹಾಗೂ ಮೃತರ ಸಂಖ್ಯೆ 1,54,918ಕ್ಕೆ ಏರಿಕೆಯಾಗಿದೆ.
ಆದರೆ ಒಟ್ಟು ಸೋಂಕಿತರ ಪೈಕಿ 1,05,10,796 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 1,48,590 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.