ETV Bharat / bharat

ಇಡೀ ಗ್ರಾಮವನ್ನೇ ಶಿಕ್ಷಣ ಕೇಂದ್ರವನ್ನಾಗಿ ಪರಿವರ್ತಿಸಿದ ಸರ್ಕಾರಿ ಶಿಕ್ಷಕ - ಮಧ್ಯಪ್ರದೇಶದಲ್ಲಿ ವಠಾರ ಶಾಲೆ

ಶಾಲಾ ಕಟ್ಟಡದ ಗೋಡೆಗಳು ಮಾತ್ರವಲ್ಲದೇ, ಇಡೀ ಗ್ರಾಮದ ಗೋಡೆಗಳ ಮೇಲೆಯೂ ಚಿತ್ರ ಬರಹ ಮತ್ತು ಗಣಿತ, ವಿಜ್ಞಾನ ಮತ್ತು ಕಲಿಕೆಗೆ ಸಂಬಂಧಿಸಿದ ವಿವಿಧ ಆಕೃತಿಗಳ ಬರಹವನ್ನು ಬರೆಸಿದ್ದಾರೆ. ಗ್ರಾಮದ ಯಾವುದೇ ಬದಿಗೆ ಹೋದರೂ ಚಿತ್ರ ಬರಹಗಳೇ ಕಾಣಿಸುತ್ತಿವೆ. ಇದರಿಂದ ಇಡೀ ಧರ್ಮಾಪುರ ಗ್ರಾಮದ ಚಿತ್ರಣವೇ ಬದಲಾಗಿದ್ದು, ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ.

orchbearer of education: A teacher turns the whole village into a school
ಇಡೀ ಗ್ರಾಮವನ್ನೇ ಶಿಕ್ಷಣ ಕೇಂದ್ರವನ್ನಾಗಿ ಪರಿವರ್ತಿಸಿದ ಸರ್ಕಾರಿ ಶಿಕ್ಷಕ
author img

By

Published : Apr 5, 2022, 1:07 PM IST

ಜಬಲ್ಪುರ್​ (ಮಧ್ಯಪ್ರದೇಶ): ಕೊರೊನಾ ಮಹಾಮಾರಿ ರೋಗವು ಶಿಕ್ಷಣ ಕ್ಷೇತ್ರದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರಿದೆ. ಬಹುಪಾಲು ಮಕ್ಕಳ ಎರಡು ವರ್ಷಗಳ ಮೌಲ್ಯಯುತ ಶಿಕ್ಷಣವನ್ನೇ ಕಸಿದುಕೊಂಡಿದೆ. ಆದರೆ, ಮಧ್ಯಪ್ರದೇಶದ ಜಬಲ್ಪುರ್​ ಜಿಲ್ಲೆಯಲ್ಲಿ ಶಿಕ್ಷಕರೊಬ್ಬರು ಕೊರೊನಾ ಸೋಂಕಿನ ಹಾವಳಿಯ ನಡುವೆ ವಿನೂತನ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ.

ಕೊರೊನಾ ಕಾರಣದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಠಾರ ಶಾಲೆಗಳನ್ನು ನಡೆಸಲಾಗುತ್ತಿತ್ತು. ಆದರೂ, ಈ ಶಾಲೆಗಳಿಗೆ ಹೆಚ್ಚಿನ ಮಕ್ಕಳು ಬರುತ್ತಿರಲಿಲ್ಲ. ಇದರಿಂದ ಜಬಲ್ಪುರ್​ ಜಿಲ್ಲೆಯ ಧರ್ಮಾಪುರ ಗ್ರಾಮದ ಸರ್ಕಾರಿ ಶಿಕ್ಷಕ ದಿನೇಶ್​ಕುಮಾರ್​ ಮಿಶ್ರಾ ಹೊಸ ಉಪಾಯ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಗ್ರಾಮದಲ್ಲಿ ಗೋಡೆ ಬರಹಗಳನ್ನು ಬಿಡಿಸಿ, ಮಕ್ಕಳು ಎಲ್ಲೇ ಇದ್ದರೂ ಕಲಿಕೆಯಲ್ಲಿ ತೊಡಗುವಂತೆ ಮಾಡಿದ್ದಾರೆ.

ಇಡೀ ಗ್ರಾಮದ ಗೋಡೆಗಳಿಗೆ ಚಿತ್ರಬರಹ: ಶಾಲಾ ಕಟ್ಟಡದ ಗೋಡೆಗಳು ಮಾತ್ರವಲ್ಲದೇ, ಇಡೀ ಗ್ರಾಮದ ಗೋಡೆಗಳ ಮೇಲೆಯೂ ಚಿತ್ರ ಬರಹ ಮತ್ತು ಗಣಿತ, ವಿಜ್ಞಾನ ಮತ್ತು ಕಲಿಕೆಗೆ ಸಂಬಂಧಿಸಿದ ವಿವಿಧ ಆಕೃತಿಗಳ ಬರಹವನ್ನು ಬರೆಸಿದ್ದಾರೆ. ಗ್ರಾಮದ ಯಾವುದೇ ಬದಿಗೆ ಹೋದರೂ ಚಿತ್ರ ಬರಹಗಳೇ ಕಾಣಿಸುತ್ತಿವೆ. ಇದರಿಂದ ಇಡೀ ಧರ್ಮಾಪುರ ಗ್ರಾಮದ ಚಿತ್ರಣವೇ ಬದಲಾಗಿದ್ದು, ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ.

ಕೊರೊನಾ ಸಂದರ್ಭದಲ್ಲಿ ವಠಾರ ಶಾಲೆಗಳನ್ನು ಆರಂಭಿಸಲಾಗಿತ್ತು. ಆದರೆ, ಅಷ್ಟೊಂದು ಮಕ್ಕಳು ಸೇರುತ್ತಿರಲಿಲ್ಲ. ಯಾಕೆಂದರೆ, ಅನೇಕ ಗ್ರಾಮಸ್ಥರು ಬೆಳಗ್ಗೆಯೇ ಕೆಲಸಕ್ಕೆ ಹೋಗುತ್ತಿದ್ದರು. ತಮ್ಮ ಜತೆಗೆ ಮಕ್ಕಳನ್ನೂ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಮಕ್ಕಳು ಶಿಕ್ಷಣದಿಂದ ವಿಮುಖರಾಗಬಾರದು ಎಂಬ ಯೋಚನೆಯಿಂದ ಗ್ರಾಮದ ಎಲ್ಲ ಗೋಡೆಗಳಿಗೆ ಚಿತ್ರ ಬರಹ ಮಾಡಿಸಲಾಯಿತು ಎನ್ನುತ್ತಾರೆ ಶಿಕ್ಷಕ ದಿನೇಶ್​ಕುಮಾರ್​ ಮಿಶ್ರಾ.

ಶಿಕ್ಷಕ ದಿನೇಶ್​ಕುಮಾರ್​ ಮಿಶ್ರಾ ಈ ಕಾರ್ಯದ ಬಗ್ಗೆ ಸದ್ಯ ಚರ್ಚೆ ಆಗುತ್ತಿದೆ. ಪ್ರತಿಯೊಂದು ಶಾಲೆಯಲ್ಲಿ ಇಂತಹ ಶಿಕ್ಷಕರೊಬ್ಬರು ಇರಬೇಕು. ಇವರಂತೆ ಇತರ ಸರ್ಕಾರಿ ಶಿಕ್ಷಕರೂ ಆಲೋಚಿಸುವಂತೆ ಆಗಬೇಕು. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸಹ ಹೆಚ್ಚಾಗುತ್ತದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಇದನ್ನೂ ಓದಿ: ರಕ್ಷಕನು ಇವನೇ.. ಬೆಂಕಿಯಲ್ಲಿ ಸಾಹಸ.. ಹಸುಗೂಸನ್ನು ರಕ್ಷಿಸಿದ ಕಾನ್ಸ್​ಟೇಬಲ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.