ETV Bharat / bharat

ಟೂಲ್​ಕಿಟ್ ರಚಿಸಿದ್ದು ಶಂತನು, ನಿಕಿತಾ.. ಗ್ರೇಟಾಗೆ ಕಳಿಸಿದ್ದು ದಿಶಾ.. - Nikita Jacob

ಶಂತನು ಮತ್ತು ನಿಕಿತಾ ಇಬ್ಬರೂ ಖಲಿಸ್ತಾನಿ ಬೆಂಬಲಿತ ಸಂಘಟನೆಯಾದ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ (ಪಿಜೆಎಫ್​) ಝೂಮ್ ಅಪ್ಲಿಕೇಷನ್​ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Nikita, Shantanu created 'toolkit'; Disha sent it to Greta: Delhi Police
ಟೂಲ್​ಕಿಟ್ ರಚಿಸಿದ್ದು ಶಂತನು, ನಿಕಿತಾ: ಗ್ರೇಟಾಗೆ ಕಳಿಸಿದ್ದು ದಿಶಾ
author img

By

Published : Feb 15, 2021, 7:39 PM IST

ನವದೆಹಲಿ: ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ಅಂಕಿತಾ ಜಾಕೋಬ್ ಮತ್ತು ಶಂತನು ಎಂಬುವವರ ಜೊತೆ ಸೇರಿ ಟೂಲ್​ಕಿಟ್ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ದಿಶಾ ರವಿ ಅವರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ಟೆಲಿಗ್ರಾಮ್ ಅಪ್ಲಿಕೇಷನ್​ ಮೂಲಕ ಟೂಲ್​ಕಿಟ್​ ಅನ್ನು ಸ್ವೀಡನ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್​ಬರ್ಗ್​​ಗೆ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ದೆಹಲಿ ಸೈಬರ್ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಪ್ರೇಮ್​ನಾಥ್, ಟೂಲ್​ ಕಿಟ್​ ಅನ್ನು ಹಂಚಲು ದಿಶಾ ರವಿ ರಚಿಸಿದ್ದ ವಾಟ್ಸಪ್​ ಗ್ರೂಪ್​ ಅನ್ನು ಡಿಲೀಟ್​ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದು, ಜಯಾ ಹಾದಿಯಲ್ಲೇ ಸಾಗಿದ ದೀದಿ: 'ಮಾ' ಯೋಜನೆಗೆ ಚಾಲನೆ

ಇದಕ್ಕೂ ಮೊದಲು ಟೂಲ್​ಕಿಟ್​ ಅನ್ನು ಹಂಚಿಕೊಂಡ ಆರೋಪದಲ್ಲಿ ನಿಕಿತಾ ಜಾಕೋಬ್ ಮತ್ತು ಶಂತನು ವಿರುದ್ಧ ಜಾಮೀನು ರಹಿತ ವಾರೆಂಟ್​ ಅನ್ನು ದೆಹಲಿ ಪೊಲೀಸರು ಹೊರಡಿಸಿದ್ದರು.

ಶಂತನು ಮತ್ತು ನಿಕಿತಾ ಇಬ್ಬರೂ ಖಲಿಸ್ತಾನಿ ಬೆಂಬಲಿತ ಸಂಘಟನೆಯಾದ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ (ಪಿಜೆಎಫ್​) ಝೂಮ್ ಅಪ್ಲಿಕೇಷನ್​ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ದಿಶಾ, ಶಂತನು ಮತ್ತು ನಿಕಿತಾ ಟೂಲ್​ಕಿಟ್​ ಸೃಷ್ಟಿಸಿ, ಎಡಿಟ್ ಮಾಡಿದ್ದಾರೆ. ದಿಶಾ ಟೂಲ್​ಕಿಟ್​ ಅನ್ನು ಟೆಲಿಗ್ರಾಮ್ ಆ್ಯಪ್ ಮೂಲಕ ಗ್ರೆಟಾ ಥನ್​ಬರ್ಗ್​​ಗೆ ಕಳುಹಿಸಿದ್ದಾರೆ. ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.