ನವದೆಹಲಿ: ಮಾನವನ ದುರಾಸೆಯಿಂದ ಪ್ರಕೃತಿ ನಶಿಸುತ್ತಿದೆ. ಮರಗಳನ್ನು ಕಡಿದು ನಗರ ನಿರ್ಮಾಣ, ತ್ಯಾಜ್ಯವನ್ನು ಬಯಲು ಪ್ರದೇಶ, ಸಮುದ್ರಕ್ಕೆಸೆದು ಸುಂದರ ಪರಿಸರ ವ್ಯವಸ್ಥೆಯನ್ನೇ ಹಾಳು ಮಾಡಲಾಗುತ್ತಿದೆ. ಹೀಗೆ ಮಾಡಿದ ಮನುಷ್ಯನಿಗೆ ಅದೇ ಪ್ರಕೃತಿ ಪ್ರತಿಯಾಗಿ ನೀಡಿದ ಕೊಡುಗೆಯನ್ನು ಮುಂಬೈ ಬೀಚ್‌ನಲ್ಲಿ ಕಾಣಬಹುದು!.
ಅರಬ್ಬಿ ಸಮುದ್ರದ ದಡದಲ್ಲಿರುವ ಮುಂಬೈ ನಗರಿಗೆ ನಿಸರ್ಗ ತನ್ನದೇ ಆದ ರೀತಿಯಲ್ಲಿ ಕೊಟ್ಟಿರುವ ಎಚ್ಚರಿಕೆ ಇದು. ಸಾವಿರಾರು ಟನ್‌ಗಟ್ಟಲೆ ಪ್ರಮಾಣದಲ್ಲಿ ಬಿಸಾಡಲಾಗಿದ್ದ ತ್ಯಾಜ್ಯವನ್ನು ಸಮುದ್ರ ವಾಪಸ್ ತಂದು ಮಾಹಿಮ್ ಬೀಚ್‌ನಲ್ಲಿ ಬಿಟ್ಟಿದೆ. ಇದು ನಿಸರ್ಗ ನೀಡಿದ 'ರಿಟರ್ನ್ ಗಿಫ್ಟ್' ಅಲ್ಲದೆ ಮತ್ತೇನು ಹೇಳಿ?.
-
#Beaches in #Mumbai now Open.
— मुंबई Matters™✳️ (@mumbaimatterz) July 16, 2022 " class="align-text-top noRightClick twitterSection" data="
Citizens throng Mahim beach to have a look at the #ReturnGift from ArabianSea..#PlasticPollution#MumbaiRains pic.twitter.com/1JUmIpWof2
">#Beaches in #Mumbai now Open.
— मुंबई Matters™✳️ (@mumbaimatterz) July 16, 2022
Citizens throng Mahim beach to have a look at the #ReturnGift from ArabianSea..#PlasticPollution#MumbaiRains pic.twitter.com/1JUmIpWof2#Beaches in #Mumbai now Open.
— मुंबई Matters™✳️ (@mumbaimatterz) July 16, 2022
Citizens throng Mahim beach to have a look at the #ReturnGift from ArabianSea..#PlasticPollution#MumbaiRains pic.twitter.com/1JUmIpWof2
ಮುಂಬೈ ಬೀಚ್ನುದ್ದಕ್ಕೂ ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿರುವುದನ್ನು ವಿಡಿಯೋದಲ್ಲಿ ನೀವು ಕಾಣುವಿರಿ. ಜನರು ಈ ಕಸದ ಮಧ್ಯೆಯೇ ನಿಂತಿದ್ದಾರೆ. 10 ಸೆಕೆಂಡ್ಗಳ ವಿಡಿಯೋ ಜನರ ಪರಿಸರ ಪ್ರಜ್ಞೆಯನ್ನು ಬಡಿದೆಬ್ಬಿಸುವಂತಿದೆ.
1. ತಿದ್ದಿ ಮುನ್ನಡೆಯದಿದ್ದರೆ ಘೋರ ಪರಿಣಾಮ: "ಪ್ರಕೃತಿ ನಮಗೆ ಮೊದಲು ಎಚ್ಚರಿಕೆ ನೀಡುತ್ತದೆ. ಅದನ್ನು ತಿದ್ದಿಕೊಂಡು ನಡೆಯದಿದ್ದರೆ ಘೋರ ಪರಿಣಾಮವನ್ನೇ ಎದುರಿಸಬೇಕಾದೀತು. ಇದಕ್ಕೆ ಅವಕಾಶ ನೀಡಬೇಡಿ" ಎಂದು ವಿಡಿಯೋಗೆ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
2. ಕೊನೆಗೆ ಪ್ಲಾಸ್ಟಿಕ್ ಮಾತ್ರ ಭೂಮಿ ಮೇಲೆ ಉಳಿಯುತ್ತದೆ!: "ಓಹ್, ದೇವರೇ, ಎಲ್ಲವೂ ವಿನಾಶವಾಗುತ್ತದೆ. ಆದರೆ, ಪ್ಲಾಸ್ಟಿಕ್ ಮಾತ್ರ ಈ ಭೂಮಿಯ ಮೇಲೆ ಉಳಿಯುತ್ತದೆ" ಎಂದು ಇನ್ನೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
3. ಸಮುದ್ರ ತನ್ನಲ್ಲಿ ಕೊಳೆ ಇಟ್ಟುಕೊಳ್ಳುವುದಿಲ್ಲ: "ಸಮುದ್ರ, ಕಾಡು, ಮರಗಳನ್ನು ಒಳಗೊಂಡ ಪ್ರಕೃತಿಯನ್ನು ಎಂದಿಗೂ ನಾಶಮಾಡಬೇಡಿ. ನಿಸರ್ಗ ಯಾವಾಗಲೂ ಸೂಕ್ತವಾದ ಉತ್ತರವನ್ನೇ ನೀಡುತ್ತದೆ. ಅದರಲ್ಲೂ ಸಮುದ್ರ ತನ್ನಲ್ಲಿ ಕೊಳೆಯನ್ನು ಇಟ್ಟುಕೊಳ್ಳುವುದಿಲ್ಲ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆರಿಗೆ ವೇಳೆ ಗರ್ಭಿಣಿ ಮೇಲೆ ಹಲ್ಲೆ ನಡೆಸಿದ ವೈದ್ಯರು.. ನವಜಾತ ಶಿಶು ಸಾವು ಆರೋಪ