ETV Bharat / bharat

ಅನನ್ಯ ಗುಹಾ ಕಾರಿನ ಮೇಲೆ ಬಿದ್ದ ಮರ.. ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾದ ನಟಿ - ಅನನ್ಯ ಗುಹಾ ಕಾರಿನ ಮೇಲೆ ಬಿದ್ದ ಮರ

ಶೂಟಿಂಗ್​ನಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ನಟಿ ಅನನ್ಯ ಗುಹಾ ಕಾರಿನ ಮೇಲೆ ದಿಢೀರ್​ ಆಗಿ ಮರವೊಂದು ಬಿದ್ದಿದೆ. ಅದೃಷ್ಟವಶಾತ್ ನಟಿ ಪ್ರಾಣಾಪಾಯದಿಂದ ಪಾರು ಆಗಿದ್ದಾರೆ.

Ananya Guha car accident
Ananya Guha car accident
author img

By

Published : May 26, 2022, 3:02 PM IST

Updated : May 26, 2022, 3:28 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ತಂದೆಯ ಜೊತೆ ಪ್ರಯಾಣ ಮಾಡ್ತಿದ್ದ ಸಂದರ್ಭದಲ್ಲಿ ನಟಿ ಅನನ್ಯ ಗುಹಾ ಕಾರಿನ ಮೇಲೆ ಮರವೊಂದು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಬೆಂಗಾಲಿ ಟಿವಿ ಶೋ 'ಮಿಥಾಯ್​'​ ಶೂಟಿಂಗ್​​ನಲ್ಲಿ ಭಾಗಿಯಾಗಲು ಬೆಳಗ್ಗೆ ತೆರಳುತ್ತಿದ್ದ ವೇಳೆ, ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

TOLLYWOOD ACTRESS ANANYA GUHA MET ACCIDENT
ನಟಿ ಅನನ್ಯ ಕಾರಿನ ಮೇಲೆ ಬಿದ್ದ ಮರ

ಕೋಲ್ಕತ್ತಾದ ಟಾಲಿಗಂಜ್​ಗೆ ತೆರಳುತ್ತಿದ್ದ ವೇಳೆ ಎಸ್​ಪಿ ಮಖರ್ಜಿ ರಸ್ತೆ ಬಳಿ ಇದ್ದಕ್ಕಿದ್ದಂತೆ ಮರವೊಂದು ನಟಿಯ ಕಾರಿನ ಮೇಲೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ವೇಳೆ, ಸ್ಥಳೀಯರು ನಟಿಯ ರಕ್ಷಣಗೆ ಧಾವಿಸಿ, ಸಹಾಯ ಮಾಡಿದ್ದಾರೆ. ತದನಂತರ ನಟಿ ಅನನ್ಯ ಹಾಗೂ ಆಕೆಯ ತಂದೆ ಬೇರೊಂದು ಕಾರಿನಲ್ಲಿ ಶೂಟಿಂಗ್​ ಸ್ಥಳಕ್ಕೆ ತಲುಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ತಪಾಸಣೆ ನಡೆಸಿದರು. ಈ ವೇಳೆ, ಇತ್ತೀಚಿಗೆ ರಾಜ್ಯದಲ್ಲಿ ಬೀಸಿರುವ ಬಿರುಗಾಳಿಯಿಂದ ಮರ ಸಡಿಲಗೊಂಡು ಕಾರಿನ ಮೇಲೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈ ಬಾರಿ ಭಾ.ಮಾ ಹರೀಶ್ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಬೇಕು: ನಟಿ ಜಯಮಾಲ

ಅತಿ ಚಿಕ್ಕ ವಯಸ್ಸಿನಲ್ಲೇ ಅನನ್ಯ ಅನೇಕ ಬಂಗಾಳಿ ಟಿವಿ ಶೋಗಳಲ್ಲಿ ಭಾಗಿಯಾಗಿದ್ದು, ಅದರಲ್ಲಿ ಕೃಷ್ಣಕೋಲಿ, ಕ್ಖೋನಾ, ಗ್ರಾಮರ್ ರಾಣಿ ಬಿನಾಪ್ನಿ, ಲೋಖಿ ಕಾಕಿಮಾ ಸೂಪರ್​ ಸ್ಟಾರ್​ ಜನಪ್ರಿಯ ಕಾರ್ಯಕ್ರಮಗಳಾಗಿವೆ.

Last Updated : May 26, 2022, 3:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.